Captain G. R. Gopinath, Translated by Vijay Joshi
ಪ್ರಕಾಶಕರು - ಹರಿವು ಬುಕ್ಸ್
- Free Shipping
- Cash on Delivery (COD) Available
Pages -
Type -
Couldn't load pickup availability
ಅಪಾರವಾದ ಓದಿನ ಹಿನ್ನೆಲೆಯ, ಮಾತನಾಡಿದಷ್ಟೇ ಸಲೀಸಾಗಿ ಬರೆಯಲೂ ಬಲ್ಲ, ಅತ್ಯಂತ ಪ್ರಾಮಾಣಿಕವಾಗಿ ಯೋಚಿಸುವ ಬರಹಗಾರನೊಬ್ಬನ ಬರಹಗಳ ಸಂಕಲನ ಈ ಪುಸ್ತಕ, ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿರುವಂತೆ, ಗುಣಮಟ್ಟದ ಬರವಣಿಗೆಗೆ ಒಂದು ರಸ ಅಂತಿರುವುದಿದ್ದರೆ, ಕ್ಯಾಪ್ಟನ್ ಅವರ ಇಲ್ಲಿನ ಬರಹಗಳು ಓದುಗನ ಮನದಲ್ಲಿ "ಆನಂದ" ರಸವನ್ನು ಹರಿಸುತ್ತವೆ ಅನ್ನಬಹುದು. ಒಬ್ಬ ದೇಶಪ್ರೇಮಿ ಸೈನಿಕನಂತೆ ಬರೆಯುವ ಕ್ಯಾಪ್ಟನ್ ಅದೇ ಹೊತ್ತಲ್ಲಿ ನಮ್ಮ ಸಮಾಜ ಮತ್ತು ನಮ್ಮ ಜನರ ಬಗ್ಗೆ ಕಹಿಸತ್ಯವನ್ನು ಆಡಲು ಇಲ್ಲಿ ಹಿಂಜರಿದಿಲ್ಲ. ಓದಿ, ಆತ್ಮಾವಲೋಕನಕ್ಕೆ ಮುಂದಾಗಲು ಇದೊಂದು ಸೂಕ್ತ ಪುಸ್ತಕ.
-ಗೋಪಾಲಕೃಷ್ಣ ಗಾಂಧಿ
ಸಂಶೋಧಕ ಮತ್ತು ಇತಿಹಾಸ ತಜ್ಞರು
ವಿಸ್ತಾರವಾದ ಓದು ಮತ್ತು ಜೀವನಾನುಭವದಿಂದ ಮಾಗಿದ ವ್ಯಕ್ತಿಯೊಬ್ಬ ಹೇಗೆ ಸ್ವತಂತ್ರವಾಗಿ ಚಿಂತಿಸುತ್ತಾನೆ ಎನ್ನುವುದಕ್ಕೆ ಸಾಕಷ್ಟು ಇಲ್ಲಿನ ಲೇಖನಗಳಲ್ಲಿ ಸಿಗುತ್ತವೆ. ಅವರ ಅಪಾರವಾದ ಓದು ಮತ್ತು ಜೀವನಾನುಭವದಿಂದ ಅವರಿಗೆ ಒಂಜಿನಲ್ ಚಿಂತನೆ : ಸಾಧ್ಯವಾಗಿದೆ ಎನ್ನುವುದು ನನ್ನ ಅನಿಸಿಕೆ. ಅವರು ಉದ್ಯಮಿ ಆಗದೆ ಪತ್ರಕರ್ತರಾಗಿದ್ದರೆ ನಿಜಕ್ಕೂ ರಾಷ್ಟ್ರಮಟ್ಟದ ಖ್ಯಾತ ಪತ್ರಕರ್ತರಾಗಿರುತ್ತಿದ್ದರು ಎನ್ನುವ ಬಗ್ಗೆ ನನಗೆ ಯಾವ ಅನುಮಾನವೂ ಇಲ್ಲ.
– ರವೀಂದ್ರ ಭಟ್ಟ
ಕಾರ್ಯನಿರ್ವಾಹಕ ಸಂಪಾದಕರು, ಪ್ರಜಾವಾಣಿ

