Skip to product information
1 of 2

Ankita

ನಗೆಪಾಟಲು

ನಗೆಪಾಟಲು

Publisher - ಅಂಕಿತ ಪುಸ್ತಕ

Regular price Rs. 40.00
Regular price Rs. 40.00 Sale price Rs. 40.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 192

Type - Paperback

Gift Wrap
Gift Wrap Rs. 15.00

ಇಲ್ಲಿರುವ ಅನೇಕ ಜೋಕುಗಳನ್ನು ನೀವು ಈಗಾಗಲೇ ಓದಿರಬಹುದು, ಕೇಳಿರಬಹುದು, ಆದರೂ ಮತ್ತೆ ಮತ್ತೆ ಓದಿಸಿಕೊಳ್ಳುವ ಸಾಮರ್ಥ್ಯ ಇಲ್ಲಿನ ಜೋಕುಗಳಿಗಿದೆ. ಇವು ಬರೆದದ್ದಲ್ಲ, ಸಂಗ್ರಹಿಸಿದ್ದು, "ಜಗತ್ತಿನಲ್ಲಿರುವುದು ಮೂಲತಃ ನೂರು ಜೋಕ್ಸ್ ಮಾತ್ರ ಉಳಿದವೆಲ್ಲ ಆ ಮೂಲದಿಂದಲೇ ಕವಲೊಡೆದಿರುವವು" ಎಂದು ಜೋಕು ಸಂಶೋಧಕರೊಬ್ಬರು ತಮ್ಮ 'ನಗೆಪಾಟಲಿ'ನಲ್ಲಿ ತಿಳಿಸಿದ್ದಾರೆ. ಆದರೆ ನಾವು ಸಂಶೋಧನೆ ಇತ್ಯಾದಿಗಳ ಗೊಡವೆಗೆ ಹೋಗಿಲ್ಲ. ಓದಿದ ಕೂಡಲೇ ನಗು ಉಕ್ಕಿಸಬಲ್ಲಂತಹ ಜೋಕುಗಳು ಸಿಕ್ಕಕೂಡಲೇ ಸಂಗ್ರಹಿಸಿಟ್ಟುಕೊಂಡಿದ್ದೇವೆ. ಆದೇ ಸಂಗ್ರಹ ಈಗ ನಿಮ್ಮ ಮುಂದಿದೆ. 'ಇಲ್ಲಿಯ ಎಷ್ಟೋ ಜೋಕುಗಳನ್ನು ನಾನೇ ಸೃಷ್ಟಿಸಿದ್ದು' ಎಂದು ಯಾರಾದರೂ ಕ್ಷೇಮು ಮಾಡಿಕೊಳ್ಳುವುದಾದರೆ ನಮ್ಮ ಅಭ್ಯಂತರವೇನೂ ಇಲ್ಲ. ಏಕೆಂದರೆ ಜೋಕುಗಳಿಗೆ ಕಾಪಿರೈಟಿಲ್ಲ. ನೀವೂ ಅಷ್ಟೆ. ಇಲ್ಲಿರುವ ಯಾವುದೇ ಜೋಕನ್ನು ಉಚಿತವಾಗಿ ನಮಗೆ ತಿಳಿಸದೆ ಯಾರಿಗೆ ಬೇಕಾದರೂ ಹೇಳಬಹುದು. ಗುಟ್ಟಾಗಿ ಬರೆದು ಮುದ್ರಿಸಿಕೊಳ್ಳಬಹುದು. ಆದರೆ ನಿಮ್ಮ ಸ್ಥಿತಿ ನಗೆಪಾಟಲಾದರೆ ಮಾತ್ರ ನಾವು ಜವಾಬ್ದಾರರಲ್ಲ.

-ಪ್ರಕಾಶ್ ಕಂಬತ್ತಳ್ಳಿ

View full details