R. D. G.
Publisher - ಸಪ್ನ ಬುಕ್ ಹೌಸ್
Regular price
Rs. 70.00
Regular price
Rs. 70.00
Sale price
Rs. 70.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಹಾಸ್ಯಕ್ಕೆ ಅಶ್ಲೀಲತೆ ಅನಿವಾರ್ಯವಲ್ಲ ಎಂಬುದನ್ನು ಗೆಳೆಯ ಆರ್.ಡಿ.ಜಿ. ತಮ್ಮ ನಗೆ ಹೊತ್ತಗೆಗಳ ಮೂಲಕ ಮತ್ತೆ ಮತ್ತೆ ತೋರಿಸುತ್ತಿದ್ದಾರೆ. ಇದೀಗ ಅವರು ಮತ್ತೊಮ್ಮೆ ಸದಭಿರುಚಿಯ ಹಾಸ್ಯದ ಅಲೆಗಳ ಮೇಲೆ ನಮ್ಮನ್ನು ತೇಲಾಡಿಸಲು ತಮ್ಮ ನಗೆ ದೋಣಿ'ಯನ್ನು ನೀರಿಗಿಳಿಸುತ್ತಿದ್ದಾರೆ. ಕೊರೊನಾ ಎರಡನೆ ಅಲೆಯ ಹೊಡೆತಕ್ಕೆ ತತ್ತರಿಸಿ, ಮೂರನೆ ಅಲೆಯ ಆಗಮನದ ಆತಂಕದಲ್ಲಿರುವ ಈ ಸಂದರ್ಭದಲ್ಲಿ ನಮ್ಮೆಲ್ಲರನ್ನೂ ಒಂದು ಬಗೆಯ ಖಿನ್ನತೆ ಆವರಿಸಿದೆ. ಹೀಗಾಗಿ ಜನರಿಗೆ ನಗೆ ಚಿಕಿತ್ಸೆಯ ಅಗತ್ಯ ಈಗ ಹಿಂದೆಂದಿಗಿಂತಲೂ ಹೆಚ್ಚಾಗಿದೆ ಎಂದು ನನ್ನ ಭಾವನೆ. "ಅಳುವ ಕಡಲೊಳೂ ತೇಲಿ ಬರುತಲಿದೆ ನಗೆಯ ಹಾಯಿ ದೋಣಿ' ಎಂದು ಕವಿ ಅಡಿಗರೇ ಹೇಳಿದ್ದಾರೆ. ನಗೆ ದೋಣಿ ಎಂಬ ಈ ಪುಟ್ಟ ಪುಸ್ತಕದಲ್ಲಿ ೧೨೦ ಸೊಗಸಾದ ಹಾಸ್ಯ ಚಟಾಕಿಗಳಿವೆ. ನಗೆ ದೋಣಿಯನ್ನು ಏರಿ ಪುಟ ತಿರುಗಿಸುತ್ತಾ ಹುಟ್ಟು ಹಾಕಿದರೆ ದೋಣಿ ಸಾಗಿ, ಮುಂದೆ ಹೋಗುತ್ತಲೇ ಇರುತ್ತದೆ. ಕೊನೆಯ ಪುಟದ ದಡ ಮುಟ್ಟಿದ್ದೇ ತಿಳಿಯುವುದಿಲ್ಲ. ಇಲ್ಲಿರುವ ಹಾಸ್ಯದ ಗುಣಮಟ್ಟ ಅತ್ಯಂತ ಉತ್ಕೃಷ್ಟವಾಗಿರುವುದೇ ಇದಕ್ಕೆ ಕಾರಣ.
