Skip to product information
1 of 1

Ga. Na. Bhatta

ನಾನು ಕೌಸಲ್ಯೆ

ನಾನು ಕೌಸಲ್ಯೆ

Publisher - ಅಂಕಿತ ಪುಸ್ತಕ

Regular price Rs. 175.00
Regular price Rs. 175.00 Sale price Rs. 175.00
Sale Sold out
Shipping calculated at checkout.

- Free Shipping above ₹1,000

- Cash on Delivery (COD) Available

Pages -

Type -

ಶ್ರೀಯುತ ಗ.ನಾ.ಭಟ್ಟರು ಒಳ್ಳೆಯ ಸಂಘಟಕರು; ಸಂಸ್ಕೃತ ವಿದ್ವಾಂಸರು; ತಾಳಮದ್ದಳೆ ಅರ್ಥಧಾರಿಗಳು; ಯಕ್ಷಗಾನ ಪ್ರಸಾರ, ಅಭಿವೃದ್ಧಿಗೂ ಕೈಗೂಡಿಸಿದವರು. ಸಾತ್ವಿಕ ಕ್ಷಾತ್ರದ ಬಗ್ಗೆ ಅಭಿಮಾನಪಟ್ಟುಕೊಳ್ಳುವ ವ್ಯಕ್ತಿ; ನೇರ ನುಡಿಯ ಸಹೃದಯ. ಅವರು ಬರೆದ 'ನಾನು ಕೌಸಲ್ಯೆ' ಕಾದಂಬರಿ 'ಸ್ತ್ರೀವಾದಿ ಕೃತಿ'ಯೆಂಬ ಭ್ರಮೆ ಹುಟ್ಟಿಸಿದರೂ ಒಳ ಹೊಳಹು ಬೇರೆಯದೇ ಆಗಿದೆ. 'ಬಲಪಂಥೀಯ'ವೆಂದು ಗುರುತಿಸಿಕೊಳ್ಳದ ಹಾಗೆ ತಪ್ಪಿಸಿಕೊಳ್ಳುತ್ತದೆ. 'ಎಡ'ವಂತೂ ಅಲ್ಲವೆ ಅಲ್ಲ. ಸಂಪ್ರದಾಯಸ್ಥ ಎನ್ನುವುದು ಹನ್ನೆರಡಾಣೆ ಸತ್ಯ. ಕೌಸಲೈಯ ಭಾವನೆಗಳು ಗ.ನಾ.ಭಟ್ಟರ ಬುದ್ಧಿ ಮಿಳಿತವಾಗಿರುವ ಸಾಹಿತ್ಯ ಕೃತಿ ಇದು.

ಧಾರ್ಮಿಕ, ವೈದಿಕ ಆಚರಣೆಗಳನ್ನು ಪ್ರಶ್ನೆಯಿಲ್ಲದೆ ಸ್ವೀಕರಿಸಿ, ಸಮರ್ಥಿಸುವಾಗ ಭಟ್ಟರು ಕೌಸಲೈಯ ರೂಪದಿಂದ ಕಳಚಿಕೊಂಡು ಗ.ನಾ.ಭಟ್ಟರೇ ಆಗಿಬಿಡುತ್ತಾರೆ. ತುನಃಶೇಫನ ಪ್ರಕರಣದಲ್ಲಿ ನಿರ್ವಹಣೆಯ ಭಾಗವಾದ 'ನಷ್ಟ ದುರಸ್ತಿ' (Damage Repair) ಯನ್ನು ಅವರು ನಿಭಾಯಿಸಿದ್ದು ವಿಶೇಷವಾಗಿದೆ. ವೇದಗಳನ್ನೂ, ವೈದಿಕ ಆಚರಣೆಗಳನ್ನೂ ಎತ್ತಿಹಿಡಿದು ಅವುಗಳ ಮೇಲೆ ನೀಡಲಾದ ಅಪವ್ಯಾಖ್ಯಾನಗಳನ್ನು ನಿವಾರಿಸುವ ಆದ್ಯತೆ ಆವಾಹನೆಯಾದಂತೆ ಭಟ್ಟರ ಕೌಸಲ್ಯ ಕೆಲವೆಡೆ ಕಾಣಿಸುತ್ತಾಳೆ. ತನ್ನ ಆತ್ಮಕತೆಯನ್ನು ಹೇಳಿಕೊಳ್ಳುವಾಗ ಹೆಣ್ಣಾಗಿ ತನ್ನ ತುಮುಲಗಳನ್ನು ಹೊರಹಾಕಿದ ಆರಂಭದ ಭಾಗದಲ್ಲಿ ಕೌಸಲ್ಯ ಬಹಳ ಆಪ್ತಳಾಗುತ್ತಾಳೆ. ಆ ಭಾಗದಲ್ಲಿ ಗ.ನಾ.ಭಟ್ಟರು ಕೌಸಲೈಯ ಪರಕಾಯ ಪ್ರವೇಶವನ್ನೇ ಮಾಡಿಬಿಡುತ್ತಾರೆ.

ಗ.ನಾ.ಭಟ್ಟರ ಈ ಕೃತಿ ರಾಮಾಯಣದ ವಿಮರ್ಶಾ ಕೃತಿಯಲ್ಲ; ಸಟೀಕಾ ಸಂಪುಟವಲ್ಲ; ಶಾಸ್ತ್ರ ಸಮರ್ಥನೆಯ ವ್ಯಾಖ್ಯಾನ ಗ್ರಂಥವಲ್ಲ. ಕೌಸಲ್ಯೆಯ ಸ್ವಗತದ ನೆಪದಲ್ಲಿ ಶಾಸ್ತ್ರವ್ಯಾಖ್ಯಾನವೂ ರೂಪುಗೊಳ್ಳುವುದು ಕಾದಂಬರಿಯ ಓಘಕ್ಕೆ ತಡೆಯುಂಟುಮಾಡುತ್ತದೆ ಎಂಬುದು ನನ್ನ ಅಭಿಪ್ರಾಯ.

-ಡಾ। ಧರಣೀದೇವಿ ಮಾಲಗತ್ತಿ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)