Skip to product information
1 of 1

Sir Arthur Conan Doyle, Translated Vasudeva Rao

ನಾಲ್ವರ ಸಂಕೇತ

ನಾಲ್ವರ ಸಂಕೇತ

Publisher - ಅಂಕಿತ ಪುಸ್ತಕ

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type - Paperback

ಸ್ಕಾಟ್‌ಲ್ಯಾಂಡಿನ ಏಡಿಸ್ ಬರೋದಲ್ಲಿ 1859 ಮೇ 22 ರಂದು ಹುಟ್ಟಿದ ಸರ್ ಆರ್ಥರ್ ಕಾನನ್ ಡಾಯ್ಲ್‌ ಪತ್ತೇದಾರಿ ಸಾಹಿತ್ಯ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರಾದವರು.

1880ರ ದಶಕದ ಕೊನೆಯ ಭಾಗದಲ್ಲಿ ಬರವಣಿಗೆ ಆರಂಭಿಸಿದ ಆರ್ಥರ್ ಕಾನನ್ ಡಾಯ್ಲ್‌, ಕಾದಂಬರಿ ಮತ್ತು ಕಥಾ ಪ್ರಪಂಚದಲ್ಲಿ ಪ್ರಸಿದ್ಧನಾದ ಅತ್ಯುನ್ನತ ಪತ್ತೇದಾರ ಷರ್ಲಾಕ್ ಹೋಮ್ಸ್‌ರನ್ನು ಹುಟ್ಟು ಹಾಕಿದ ಲೇಖಕ. 1887ರಲ್ಲಿ ಪ್ರಪ್ರಥಮವಾಗಿ "ಎ ಸ್ಟಡಿ ಇನ್ ಸ್ಕಾರ್ಲೆಟ್' ಎಂಬ ಷರ್ಲಾಕ್ ಹೋಮ್ಸ್‌ನ ಕಾದಂಬರಿ ಸೃಷ್ಟಿಸಿದ ಕಾನನ್ ಡಾಯ್ಲ್‌, 1890ರ ದಶಕದಲ್ಲಿ ಹಲವಾರು ಸಣ್ಣಕಥೆಗಳನ್ನು ಬರೆದರು. ಕಥಾನಾಯಕ ಷರ್ಲಾಕ್ ಹೋಮ್ಸ್ ಮತ್ತು ಅವರ ಸಹಾಯಕ ಡಾ. ವಾಟ್ಸನ್ ಮನೆ ಮಾತಾದರು.

ಆರ್ಥರ್ ಕಾನನ್ ಡಾಯ್ಲ್‌ ಕಥೆಗಳ ಮುಖ್ಯ ಆಕರ್ಷಣೆ ಮೋಡಿ ಮಾಡುವ ಕಥಾನಕ ಮತ್ತು ಉತ್ತಮ ವ್ಯಕ್ತಿತ್ವ ಹೊಂದಿದ್ದ ಷರ್ಲಾಕ್ ಹೋಮ್ಸ್‌ನ ಪಾತ್ರಚಿತ್ರಣ. ಷರ್ಲಾಕ್ ಹೋಮ್ಸ್‌ನ ಹಮ್ಮು, ಸರ್ವಜ್ಞತೆ ಮತ್ತು ತೀವ್ರ ಮುಗ್ಧತೆಯ ಸ್ವಭಾವ, ಜೊತೆಗೆ ಅವನ ಅನುಕಂಪ ಗುಣ ಅವನನ್ನು ಬಹಳ ಪ್ರಭಾವಿ ಮತ್ತು ಪ್ರೀತಿಪಾತ್ರ ಕಥಾನಾಯಕನನ್ನಾಗಿಸಿತು. 7ನೇ ಜುಲೈ 1930ರಲ್ಲಿ ಇಂಗ್ಲೆಂಡಿನ ಕ್ರಾಸ್ ಬರೋನಲ್ಲಿ ನಿಧನರಾದ ಸರ್ ಆರ್ಥರ್ ಕಾನನ್ ಡಾಯ್ಲ್‌ ಸೃಷ್ಟಿಸಿದ ಷರ್ಲಾಕ್ ಹೋಮ್ಸ್ ಇಂದಿಗೂ ವಿಶ್ವಸಾಹಿತ್ಯದಲ್ಲಿ ಅಮರನಾಗಿದ್ದಾನೆ.

View full details