Shashidhara Haladi
Publisher - ವೀರಲೋಕ ಬುಕ್ಸ್
Regular price
Rs. 200.00
Regular price
Rs. 200.00
Sale price
Rs. 200.00
Unit price
per
Shipping calculated at checkout.
- Free Shipping
- Cash on Delivery (COD) Available
Pages - 159
Type - Paperback
Couldn't load pickup availability
ಶಶಿಧರ ಹಾಲಾಡಿ
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿಯಲ್ಲಿ ಜನಿಸಿದ ಶಶಿಧರ ಹಾಲಾಡಿಯವರು, ಒಂದು ಚಿನ್ನದ ಪದಕ ಮತ್ತು ಮೊದಲನೆಯ ರ್ಯಾಂಕ್‌ನೊಂದಿಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಪದವಿ ಪಡೆದಿದ್ದಾರೆ. ಸಾಹಿತ್ಯದಲ್ಲಿ ಮೊದಲಿನಿಂದಲೂ ಆಸಕ್ತಿ ಹೊಂದಿರುವ ಶಶಿಧರ ಹಾಲಾಡಿಯವರು ಕಾದಂಬರಿ, ಸಣ್ಣ ಕಥೆ, ಪ್ರವಾಸ ಕಥನ, ಕವನ, ನುಡಿಚಿತ್ರ, ಅಂಕಣ ಬರಹ ಮತ್ತು ಲೇಖನಗಳನ್ನು ಬರೆದಿದ್ದು, ಇವರ ಸಾವಿರಕ್ಕೂ ಹೆಚ್ಚಿನ ಬರಹಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಚಾರಣ, ಪರಿಸರ ಅಧ್ಯಯನ ಮತ್ತು ಛಾಯಾಚಿತ್ರಗ್ರಹಣ ಇವರ ಆಸಕ್ತಿ ಕ್ಷೇತ್ರಗಳು.
ಕಾಲಕೋಶ (ಕಾದಂಬರಿ), ಅಬ್ಬೆ (ಕಾದಂಬರಿ), ಚಿತ್ತ ಹರಿದತ್ತ (ಅಂಕಣ ಬರಹ), ಮನದ ಹಾಯಿದೋಣಿ (ಅಂಕಣ ಬರಹ), ಬೆನಗಲ್ ನರಸಿಂಹ ರಾವ್ (ವ್ಯಕ್ತಿ ಪರಿಚಯ), ಅಮ್ಮಮ್ಮನ ದೀಪಾವಳಿ (ಪ್ರಬಂಧಗಳು), ಓಲಿ ಕೊಡೆ (ಅಂಕಣ ಬರಹಗಳು), ಟುವ್ವಿ ಹಕ್ಕಿಯ ಗೂಡು (ಪರಿಸರ ಸಂಬಂಧಿ ಬರಹಗಳು), ಪ್ರಕೃತಿ ಪ್ರಪಂಚ (ಅಂಕಣ ಬರಹ), ದೇವರು ಎಚ್ಚರಗೊಂಡಾಗ (ಪ್ರವಾಸ ಕಥನ), ಹಿತ್ತಲಿನಿಂದ ಹಿಮಾಲಯಕ್ಕೆ (ಚಾರಣ ಬರಹಗಳು) ಮುಂತಾದ ಕೃತಿಗಳು ಈಗಾಗಲೇ ಪ್ರಕಟಗೊಂಡಿವೆ. ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಪರಿಷತ್ತು ನೀಡುವ 'ಕನ್ನಡ ಸೇವಾ ರತ್ನ' ಮತ್ತು ಜ್ಞಾನಗಂಗಾ ಸಾಹಿತ್ಯ ರಂಗ ನೀಡುವ 'ಕರುನಾಡು ಸೇವಾ ರತ್ನ' ಪ್ರಶಸ್ತಿಗಳಿಗೆ ಶಶಿಧರ ಹಾಲಾಡಿಯವರು ಭಾಜನರಾಗಿದ್ದಾರೆ.