R. P. Hegde
Publisher -
- Free Shipping
- Cash on Delivery (COD) Available
Couldn't load pickup availability
ಮುಳ್ಳು ಗಳ್ಳಿ
ಭಾರತದ ಶಿಷ್ಟ ಸಮಾಜ ಸಾವಿರಾರು ವರ್ಷಗಳಿಂದಲೂ ದಲಿತರ ಮೇಲೆ ನಡೆಸಿದ, ನಡೆಸುತ್ತಿರುವ ದೌರ್ಜನ್ಯಗಳಿಗೆ ಕೊನೆಯೇ ಇಲ್ಲ. ದಲಿತರನ್ನು ಅಪಮಾನಿಸುವುದು, ಅವರ ಮೇಲೆ ದಬ್ಬಾಳಿಕೆ ನಡೆಸುವುದು ತಮ್ಮ ಜನ್ಮಸಿದ್ಧ ಹಕ್ಕು ಎಂಬ ದುರ್ಭಾವನೆ ದಲಿತೇತರ ಜಾತಿಗಳ ರಕ್ತದಲ್ಲಿ ಬೆರೆತುಹೋಗಿದೆ ಎನ್ನಬಹುದು. ಆದರೂ ದಲಿತರು ತಮಗಾದ ನೋವು, ಅಪಮಾನ, ಕಹಿ ಅನುಭವಗಳನ್ನು ಲೆಕ್ಕಿಸದೆ ಬದುಕಿನ ಚೈತನ್ಯವನ್ನು ಆಶ್ಚರ್ಯಕರ ರೀತಿಯಲ್ಲಿ ಹೊಮ್ಮಿಸುತ್ತ ಬಂದಿದ್ದಾರೆ !
'ಮುಳ್ಳುಗಳಿ' ಹಿಂದಿ ಲೇಖಕ ರೂಪನಾರಾಯಣ ಸೋನಕರ ಅವರ ಆತ್ಮಕಥೆ, ಜಾತಿವಾದದ ಅಪಮಾನವನ್ನು ಸ್ವತಃ ಅನುಭವಿಸುವ ಬೆಳೆದ ಅವರು, ವಿದ್ಯೆಯ ಮೂಲಕ ಅದನ್ನು ಎದುರಿಸಿದರೆ ಒಂದು ವಿಧದಲ್ಲಿ ಸೇಡು ತೀರಿಸಿಕೊಂಡವರು. ಇದು ಒಬ್ಬ ಪ ಆತ್ಮಕತೆಯಲ್ಲ, ಇಡೀ ದಲಿತ ಸಮಾಜದ ಆತ್ಮಕತೆಯಾಗ ಪೊಳ್ಳು ಧಾರ್ಮಿಕತೆಯ ವ್ಯವಸ್ಥೆಯನ್ನು ಬುಡಸಹಿತ ಕಿತ್ತೊಗೆಯುವ ಪ್ರಯತ್ನವಿದು, ಸರಕಾರಿ ಇಲಾಖೆಯಲ್ಲಿ ಅಧಿಕಾರಿಯಾಗಿರುವ ಇವರ ಎರಡು ಕಾವ್ಯ ಸಂಗ್ರಹಗಳು, ಇಪ್ಪತ್ತೇಳು ನಾಟಕಗಳು, ಎರಡು ಕಥಾಸಂಕಲನಗಳು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಪ್ರಕಟವಾಗಿವೆ.
ಶ್ರೀ ಆರ್. ಪಿ. ಹೆಗಡೆ ಅವರು ಇದನ್ನು ಕನ್ನಡಕ್ಕೆ ರೂಪಾಂತರಿಸಿ ಕೊಟ್ಟಿದ್ದಾರೆ. ಇವರು ಹಿಂದಿಯಿಂದ ಅನುವಾದಿಸಿರುವ ಶಿವಮೂರ್ತಿ ಅವರ 'ಕೊನೆಯ ಜಿಗಿತ' ನವಕರ್ನಾಟಕದಿಂದ ಪ್ರಕಟವಾಗಿದೆ.
ಪ್ರಕಾಶಕರು - ನವಕರ್ನಾಟಕ ಪ್ರಕಾಶನ
