B. R. Lakshman Rao
ಮೂರು ನಗೆ ನಾಟಕಗಳು
ಮೂರು ನಗೆ ನಾಟಕಗಳು
Publisher -
- Free Shipping Above ₹250
- Cash on Delivery (COD) Available
Pages -
Type -
Couldn't load pickup availability
ಬಿ ಆರ್ ಎಲ್ ಅವರ ಈ ಮೂರು ಕಾವ್ಯನಾಟಕಗಳ ಪುನರ್ ಸೃಷ್ಟಿ ಓದುಗರಿಗೆ ಪ್ರಿಯವಾಗುವುದಕ್ಕೆ, ಪ್ರಸ್ತುತವಾಗುವುದಕ್ಕೆ ಆತ್ಮೀಯ ಕಾರಣಗಳಿವೆ: ಯಾವುದೇ ಪುನರ್ ಸೃಷ್ಟಿಯ ಹಿಂದೆ ಲೇಖಕನ ಸಾಂಸ್ಕೃತಿಕ ಆಯ್ಕೆ- ಜವಾಬ್ದಾರಿಯಿರುತ್ತದೆ. ಈ ರಚನೆಗಳಲ್ಲಿರುವ ವಸ್ತುವಿನ ಸಮಕಾಲೀನತೆ ಮತ್ತು ಪ್ರಸ್ತುತತೆಯಲ್ಲೇ ಬಿ ಆರ್ ಎಲ್ ಈ ಜವಾಬ್ದಾರಿಯನ್ನು ನಿರ್ವಹಿಸುವ ರೀತಿ ಓದುಗರಿಗೆ ಗೊತ್ತಾಗುತ್ತದೆ. ಮೂರೂ ಪುನರ್ ಸೃಷ್ಟಿಗಳು ನಮ್ಮ ಕಾಲಕ್ಕೆ ಪ್ರಸ್ತುತವೆನ್ನುವುದೇ ಮುಖ್ಯವಾದದ್ದು.
ಅಧಿಕಾರಸ್ಥರಿಗೆ ನಾವು ನಿಜ ಹೇಳುವುದಿಲ್ಲ. ಮಾತ್ರವಲ್ಲ, ನಮಗೂ ಕೂಡ ನಾವು ನಿಜವನ್ನು ಹೇಳಿಕೊಳ್ಳುವುದಿಲ್ಲ. ಈ ವರಸೆ ನಮ್ಮ ಕಾಲದಲ್ಲಿ, ನಮ್ಮಲ್ಲಿ, ನಾಚಿಕೆ ಪಡುವಷ್ಟು ಹೆಚ್ಚಾಗಿದೆ. 'ಶೇಮ್ ಶೇಮ್ ರಾಜ' ನಮ್ಮನ್ನು ನಮಗೆ ಅನಾವರಣಗೊಳಿಸುತ್ತದೆ. ನಾಚಿಕೆ ಪಡುವಂತೆ ಮಾಡುತ್ತದೆ.
'ಕೌಟುಂಬಿಕ ವ್ಯವಸ್ಥೆ'ಯ ವಿಘಟನೆ, 'ದಾಂಪತ್ಯದೊಳಗಿನ ಸಂಬಂಧ' ನಮ್ಮ ಕಾಲದಲ್ಲಿ ನಮ್ಮ ಮನೆಯೊಳಗೇ ಎದುರಿಸುತ್ತಿರುವ ಬಿಕ್ಕಟ್ಟು ತೀವ್ರವಾದದ್ದು. ಆದರೆ ಇದು ನಮ್ಮ ಕಾಲದ ವಿಶೇಷವಾಗಿರುವಂತೆ ಎಲ್ಲ ಕಾಲದ ಎಲ್ಲ ಮನುಷ್ಯರ ಸ್ವಭಾವವೂ ಹೌದು. ಈ ವಿಹ್ವಲತೆಯನ್ನು ನವಿರಾದ ಹಾಸ್ಯದಲ್ಲಿ 'ನಂಗ್ಯಾಕೋ ಡೌಟು' ನಮ್ಮ ಮುಖಕ್ಕೆ ರಾಚುತ್ತದೆ.
ಸಾಮಾಜಿಕ ಪ್ರಗತಿ, ಸಮಾನತೆ ಕುರಿತು ನಮ್ಮ ಕಾಳಜಿಯಲ್ಲಿರುವ ಗೋಸುಂಬೆತನ ಮತ್ತು ಅಸಾಂಗತ್ಯವನ್ನು ತೀಕ್ಷ್ಯ ವ್ಯಂಗ್ಯ ಮತ್ತು ಅಸಹಾಯಕತೆಯಲ್ಲಿ 'ಭಲೇ ಮಲ್ಲೇಶಿ' ಅನಾವರಣಗೊಳಿಸುತ್ತದೆ.
ಇದೆಲ್ಲಕ್ಕಿಂತ ಮುಖ್ಯವಾಗಿ ಕವಿ ಬಿ ಆರ್ ಎಲ್ ರವರ ಚೇತೋಹಾರಿ ಕನ್ನಡದ ಪಲುಕುಗಳು ಈ ನಾಟಕಗಳನ್ನು ನಮಗೆ ಆತ್ಮೀಯವಾಗಿಸುತ್ತವೆ. ಈ ನಾಟಕಗಳು ಮತ್ತೆ ಮತ್ತೆ ಪ್ರದರ್ಶನ ಕಾಣುತ್ತಿರುವುದೇ ಈ ಪುನರ್ ಸೃಷ್ಟಿಗಳ ಸಮಕಾಲೀನತೆ ಮತ್ತು ಪ್ರಸ್ತುತತೆಗೆ ಸಾಕ್ಷಿಯಾಗಿದೆ.
-ಕೆ.ಸತ್ಯನಾರಾಯಣ
Share


Subscribe to our emails
Subscribe to our mailing list for insider news, product launches, and more.