Skip to product information
1 of 1

Translated by K. Prabhakaran

ಮೂಕ ತೋಳ

ಮೂಕ ತೋಳ

Publisher - ನವಕರ್ನಾಟಕ ಪ್ರಕಾಶನ

Regular price Rs. 70.00
Regular price Rs. 70.00 Sale price Rs. 70.00
Sale Sold out
Shipping calculated at checkout.

- Free Shipping above ₹1,000

- Cash on Delivery (COD) Available

Pages - 64

Type - Paperback

'ಮೂಕ ತೋಳ' ಕಾದಂಬರಿಯು ಒಬ್ಬ ಅತಿ ನಿಷ್ಠಾವಂತ ಸೇವಕನ ಕಥೆಯಾಗಿದೆ. ಇಲ್ಲಿ ನಮಗೆ ಆಂಗ್ಲ ಅಧಿಕಾರಿಯೊಬ್ಬನ ಕೌರ್ಯ, ಬೇಟೆಯ ನೆಪದಲ್ಲಿ ಆನೆಯ ದಂತಕ್ಕಾಗಿ ಪ್ರಾಣಿಹಿಂಸೆ ಮತ್ತು ದರ್ಪದ ಪರಿಚಯ ಆಗುತ್ತದೆ. ಭಾರತದ ಎಲ್ಲವೂ ತಮಗಾಗಿ ಎಂಬ ಅಹಂ ತುಂಬಿಕೊಂಡ ಆಂಗ್ಲರು ನಮ್ಮನ್ನು ನಡೆಸಿಕೊಂಡ ರೀತಿಯ ಬಗ್ಗೆ ಜಿಗುಪ್ಪೆಯಿಂದ ರೋಷ ಉಕ್ಕುತ್ತದೆ. ಇಲ್ಲಿ ಪ್ರಾಮಾಣಿಕ ಸೇವಕನೊಬ್ಬ ಆತನ ಎಲ್ಲ ಕ್ರೌರ್ಯವನ್ನು ಸಹಿಸಿಕೊಂಡು ನಿರುಪಾಯನಾಗಿ ಆತನ ಅಡಿಯಾಳಂತಿದ್ದು ಬೇಟೆಗೆ ಸಹಕರಿಸಿ ಜೊತೆಗೆ ಆತನ ಪ್ರಾಣರಕ್ಷಣೆಯ ಹೊಣೆ ಹೊತ್ತು ತಾನೇ ಬಲಿಯಾದ ಕಥೆ ಮನಮಿಡಿಯುತ್ತದೆ. ಆಂಗ್ಲರು - ಅವರ ಬಂದೂಕು - ಬೇಟೆ - ಅವರ ಅನುಚಿತ ವರ್ತನೆ – ಜೊತೆಗೆ ಕುಡಿತ - ಮೋಜಿನ ಪರಿಚಯ ಇವೆಲ್ಲ ಇಲ್ಲಿ ಒಂದನ್ನೊಂದು ಹಿಂಬಾಲಿಸುತ್ತ ನಡೆದಿದೆ.

ಕೃತಿಯ ಲೇಖಕ ಶ್ರೀ ಜಯಮೋಹನ್ ತಮಿಳು ಹಾಗೂ ಮಲಯಾಳಂನ ಪ್ರಸಿದ್ಧ ಲೇಖಕರು. 'ರಬ್ಬರ್' ಇವರ ಮೊದಲ ಕಾದಂಬರಿ. ಏಳು ಸಂಪುಟಗಳಲ್ಲಿರುವ 'ಇಂತ್ಯನ್ ತತ್ವಚಿಂತ' ಹಾಗೂ ಮಹಾತ್ಮ ಗಾಂಧಿ ಕುರಿತಾದ ಸಮಗ್ರ ಅಧ್ಯಯನ 'ಇನ್ನತ್ತೆ ಗಾಂಧಿ' ಪ್ರಸಿದ್ಧ ಕೃತಿಗಳು. 30 ಸಾವಿರಕ್ಕೂ ಹೆಚ್ಚು ಓದುಗರಿರುವ ನೆಟ್ ಮಾಸಿಕವೊಂದಕ್ಕೆ ನಿರಂತರ ಬರವಣಿಗೆ. ಚಲನಚಿತ್ರಗಳಿಗೂ ಚಿತ್ರಕಥೆ ಬರೆದಿದ್ದಾರೆ. ಕಥಾ ಅವಾರ್ಡ್, ಸಂಸ್ಕೃತಿ ಸಮ್ಮಾನ್, ಕನ್ನಡ ಇಲಕ್ಕಿಯ ತೋಟ್ಟಂ ಅವಾರ್ಡ್‌ ಇವರಿಗೆ ಲಭಿಸಿದ ಪ್ರಶಸ್ತಿಗಳು.

ಕೃತಿಯ ಅನುವಾದಕ ಕೆ. ಪ್ರಭಾಕರನ್‌ ಕೆಪಿಟಿಸಿಎಲ್‌ನಲ್ಲಿ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯ‌ರ್ ಆಗಿ ನಿವೃತ್ತರು. ಮಲಯಾಳಂ ಮೂಲದ ಕನ್ನಡಿಗರೇ ಆದ ಇವರು ಶಿವಮೊಗ್ಗದಲ್ಲಿ ನೆಲೆಸಿದ್ದು 'ಸಮುದಾಯ ಕರ್ನಾಟಕ' ಸಂಘಟನೆಯಲ್ಲಿ 25 ವರ್ಷಗಳಿಂದಲೂ ಸಕ್ರಿಯರಾಗಿದ್ದಾರೆ. ಕನ್ನಡ ಸಾಹಿತ್ಯ ಮತ್ತು ಸಮಾಜಶಾಸ್ತ್ರದ ಸ್ನಾತಕೋತ್ತರ ಪದವೀಧರರು. ಮಲಯಾಳಂನಿಂದ ಕನ್ನಡಕ್ಕೆ ಹಲವು ಪುಸ್ತಕಗಳ ಅನುವಾದ. ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಕುವೆಂಪು ಭಾಷಾಭಾರತಿ ಪ್ರಾಧಿಕಾರಕ್ಕಾಗಿ ಹಲವು ಇಂಗ್ಲಿಷ್ ಲೇಖನಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)