ವಸುಧೇಂದ್ರ
Publisher:
Couldn't load pickup availability
ಹೇ ಕೃಷ್ಣ ನಿನ್ನನ್ನು ಮನಃಪೂರ್ವಕವಾಗಿ ಆರಾಧಿಸಿದ್ದೇನೆ, ಪ್ರೀತಿಸಿದ್ದೇನೆ. ನಿನ್ನ ಈ ಗೋಪಾಲನಿಗೆ ಇಂತಹ ಕಠಿಣ ಶಿಕ್ಷೆ ಕೊಡಬೇಡ, ಕಾಪಾಡು, ಒಂದಿಷ್ಟಾದರೂ ಕರುಣೆ ತೋರು ನೋವಿನ ಮಡುವಿನಲ್ಲಿ ಮುಳುಗುತ್ತಿರುವ ನನಗೆ ನಿನ್ನ ರಕ್ಷಣೆ ಒದಗುವುದು ಬೇಡವೆ. ಇಲ್ಲದಿದ್ದರೆ ನಿನ್ನೆಡೆಗೆ ಕರೆದುಕೊಂಡು ಬಿಡು. ಸತ್ತರೆ ಅಳುವವರು ಯಾರೂ ಇಲ್ಲವೋ ತಂದೆ. ಜೀವ ಹಿಂಡುವ ನೋವು. ಪರರ ಕಣ್ಣಲ್ಲಿ ಹೀನನಾಗಿ ಕಾಣುವುದಕ್ಕಿಂತ ಸಾಯುವುದೇ ಮೇಲು. ನೀನು ಸಹಾಯ ಮಾಡುವುದಿಲ್ಲವಲ್ಲವೆ? ಸುಮ್ಮನೆ ಕೆಲಸಕ್ಕೆ ಬಾರದ ಆ ಕೊಳಲನೂದುತ್ತಿರುವೆಯಲ್ಲವೆ? ನನ್ನ ನೋವಿಗೆ ನಾನೇ ಪರಿಹಾರ ಕಂಡುಕೊಳ್ಳುತ್ತೇನೆ. ನನಗೆ ತಿಳಿದಂತೆ ನಾನು ವರ್ತಿಸುತ್ತೇನೆ. ಇಗೋ ನೋಡಲ್ಲಿ ಫಳ ಫಳ ಹೊಳೆಯುವ ಚಾಕು. ನೀನು ಸೃಷ್ಟಿಸಿದ ದೇಹವನ್ನು ಹೇಗೆ ಕತ್ತರಿಸುತ್ತಿದೆ. ಹೆಬ್ಬರಳಿನ ತುದಿಯನ್ನು ಕತ್ತರಿಸಲು ಅದಕ್ಕೆ ಎಷ್ಟೊಂದು ಉತ್ಸಾಹ ನೋಡಿದೆಯ!...
ಈ ರೀತಿ, ರೋಚಕವಾಗಿ ವರ್ಣಿಸುತ್ತ, ತಮ್ಮ ಗೇ ಕಥೆಗಳಲ್ಲಿ ಬೇಕಾದ ವೈಶಿಷ್ಟ್ಯಗಳನ್ನು ತುಂಬುತ್ತ, ಕಥಾ ಗುಚ್ಛವನ್ನು ಲೇಖಕ ವಸುಧೇಂದ್ರ ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ.
