1
/
of
1
Dheeraj Poyyekonda
ಮಿತಿ - ಕಾದಂಬರಿ
ಮಿತಿ - ಕಾದಂಬರಿ
Publisher -
Regular price
Rs. 180.00
Regular price
Rs. 180.00
Sale price
Rs. 180.00
Unit price
/
per
Shipping calculated at checkout.
- Free Shipping Above ₹250
- Cash on Delivery (COD) Available
Pages -
Type -
Couldn't load pickup availability
ನಿನ್ನ ಕಣ್ಣ ಮುಂದೆಯೇ ನಡೆಯುವ ಘಟನೆಯನ್ನು ತಡೆಯುವ ಎಲ್ಲಾ ಅವಕಾಶಗಳಿದ್ದಾಗಲೂ ನೀನು ತಡೆಯಲಿಲ್ಲ. ಅಂದಮೇಲೆ, ಅದರ ಬಗ್ಗೆ ಮಾತನಾಡುವ ಮಾತ್ರವಲ್ಲ.. ಯೋಚಿಸುವ ಹಕ್ಕೂ ನಿನಗಿಲ್ಲ... ಹೀಗೊಂದು ಸಾಂದರ್ಭಿಕ ಸಾಲು ಕಾದ೦ಬರಿಯದ್ದು. ತುಂಬ ಚಂದದ ಸಾಲಿದು. ಅಷ್ಟೇ ಚಂದದ ಕಥಾವಸ್ತು ಈ ಕಾದಂಬರಿಯಲ್ಲಿದೆ. ಹತ್ತಾರು ಪಾತ್ರಗಳು ಇಲ್ಲಿ.ಹತ್ತಾರು ಪಾತ್ರಗಳಿಗೆ ಹತ್ತಾರು ಭಾವಗಳು. ಇಲ್ಲಿ ಕಾಡುವ ವಿಷಾದವಿದೆ. ಚಂದದ ಪ್ರೀತಿಯಿದೆ, ಬದುಕಿನೆಡೆಗೆ ಏನೋ ಒಂದು ಹುಡುಕಾಟವಿದೆ. ಒಂದಷ್ಟು ಆಷಾಡಭೂತಿತನದ ಅನಾವರಣವಿದೆ, ಚೂರು ಕೆಟ್ಟತನವಿದೆ. ನಿಡುಸುಯ್ಯುವಿಕೆ ಮತ್ತು ಮುಗಿಯದ ಅಸಹನೆಗಳಿವೆ. ಎಲ್ಲವನ್ನೂ ಬಹಳ ಚಂದವಾಗಿ ಪೋಣಿಸಿಟ್ಟಿದ್ದಾರೆ ಕತೆಗಾರ ಕಾದ೦ಬರಿಯಲ್ಲಿ ಎನ್ನುವುದು ವಿಶೇಷ. ಹತ್ತಾರು ಪಾತ್ರಗಳ ಸಂಕೀರ್ಣ ಕಾದಂಬರಿಯಾಗಿದ್ದರೂ ಕೊಂಚವೂ ಗೊಂದಲವಾಗದಂತೆ ಓದಿನ ಓಘ ಸಾಗುವುದು ಬರಹಗಾರರ ಕಥನಶಕ್ತಿಯ ಒಂದೇ ಮೂಲದಿಂದ ಕವಲೊಡೆದು ಹತ್ತಾರು ದಿಸೆಗಳೆಡೆಗೆ ಸಾಗಿ ಕೊನೆಗೊಮ್ಮೆ ಅಂತ್ಯ ಸಾಗರವಾಗುವ ಕಥನ ಶೈಲಿ ಓದುಗನಿಗೆ ಖಂಡಿತವಾಗಿಯೂ ಇಷ್ಟವಾಗುತ್ತದೆ. ನಮ್ಮದೇ ಸುತ್ತಮುತ್ತ, ನಮ್ಮದೇ ಜನರ ನಡುವೆ ನಡೆಯುತ್ತಿರುವ ಕತೆಯೇನೋ ಎಂಬ ಭಾವ ಹುಟ್ಟಿಸುವ ಸುಂದರ ಕತೆ. ತಮ್ಮ ಮೊದಲ ಕಾದಂಬರಿಯಲ್ಲಿಯೇ ಲೇಖಕರು ಗೆದ್ದಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು. ಕತೆಯಲ್ಲಿನ ಹಲವು ಸನ್ನಿವೇಶಗಳು ಓದುಗನದ್ದೂ ಆಗಿಬಿಡುವುದು ಇಲ್ಲಿನ ಮತ್ತೊಂದು ವಿಶೇಷ. ಓದುತ್ತ ಓದುತ್ತ ಹಲವು ಜಿಜ್ಞಾಸೆಗಳನ್ನು ಓದುಗನಲ್ಲಿ ಮೂಡಿಸುವ, 'ಮಿತಿ'ಯೊಳಗೆ ಬದುಕಾ ಅಥವಾ ಬದುಕಿಗೊಂದು ಮಿತಿಯಾ ಎಂಬ ಪ್ರಶ್ನೆಗಳ ನಡುವೆ ಸಂಘರ್ಷ ಹುಟ್ಟಿಸುವ ನೂರು ಚಿಲ್ಲರೆ ಪುಟಗಳ ಈ ಕಾದಂಬರಿಯನ್ನು ಒಮ್ಮೆ ಓದಿ ನೋಡಿ. ನಿಮಗಿಷ್ಟವಾದೀತು.
-ಗುರುರಾಜ ಕೊಡ್ಕಣಿ, ಸಾಹಿತಿ
-ಗುರುರಾಜ ಕೊಡ್ಕಣಿ, ಸಾಹಿತಿ
Share

Subscribe to our emails
Subscribe to our mailing list for insider news, product launches, and more.