R. B. Gurubasavaraja
Publisher -
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಇದು ಕೇವಲ ಮಿಲ್ಟಾಸಿಂಗ್ ಒಬ್ಬರ ಜೀವನ ಕಥೆಯಲ್ಲ. ಇದರಲ್ಲಿ ದೇಶ ವಿಭಜನೆಯ ನೋವಿದೆ, ಮಿಲ್ಟಾಸಿಂಗ್‌ನ ಸಾಧನೆಗಳ ಸೌಖ್ಯವಿದೆ ಮತ್ತು ನಮ್ಮೆಲ್ಲರ ಭವಿಷ್ಯದ ಮಾರ್ಗವಿದೆ. ಸತತ ಮೂರು ವರ್ಷ ಬರಿಗಾಳನಲ್ಲ ಓಡಿ ಚಿನ್ನದ ಪದಕ ಗಳಿಸಿದ ಭಾರತದ ಏಕೈಕ ಓಟಗಾರನ ರೋಚಕ ಜೀವನ ಕಥನ ಇಲ್ಲದೆ. ದೇಶ ವಿಭಜನೆಯ ವೇಳೆ ತನ್ನ ಕಣ್ಣ ಮುಂದ ತಂದೆ ಮತ್ತು ಕುಟುಂಬದವರನ್ನು ಕಳೆದುಕೊಂಡ ಆ ಘಟನೆ ಓದತೊಡಗಿದರೆ ಕಠಿಣ ಮನಸ್ಸಿನವರೂ ಕಣ್ಣೀರು ಸುರಿಸುತ್ತಾರೆ. ಸೈನ್ಯಕ್ಕೆ ಸೇರಿದ ಯುವಕ ಅಂತರರಾಷ್ಟ್ರೀಯ ಮಟ್ಟದ ಓಟಗಾರನಾಗುವ ಪರಿಶ್ರಮ ಎಲ್ಲರಿಗೂ ಮಾದರಿಯಾಗುತ್ತದೆ. ಓಲಂಪಿಕ್ಸ್‌ನಲ್ಲಿ ಭಾರತ ಚಿನ್ನದ ಪದಕ ಗಳಿಸುವುದನ್ನು ನೋಡಲು ಹಾತೊರೆದು ಮರೆಯಾದ ಅಪ್ರತಿಮ ಸಾಧಕನ ಜೀವನದ ಮೈಲುಗಲ್ಲುಗಳ ಪಯಣ ಇಲ್ಲದೆ. ಏಷ್ಯನ್ ಕ್ರೀಡಾಕೂಟದ 400 ಮೀ ಓಟದಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಓಟಗಾರನ ಕೌಶಲ್ಯದ ಹಿಂದಿನ ತಂತ್ರಗಾರಿಕೆ ತಿಳಿಯಲು ಈ ಕೃತಿ ಸಹಾಯಕ 45.6 ಸೆಕೆಂಡುಗಳಲ್ಲಿ 400 ಮೀಟರ್ ಓಡಿ ವಿಶ್ವದಾಖಲೆ ಮಾಡಿದ ಮಾಂತ್ರಿಕ ಶಕ್ತಿಯ ಹಿಂದಿನ ಗುಟ್ಟು ತಿಳಿಯಲು ಓದಲೇಬೇಕಾದ ಪುಸ್ತಕ.
ಪ್ರಕಾಶಕರು - ಸಾಹಿತ್ಯ ಲೋಕ ಪಬ್ಲಿಕೇಷನ್ಸ್
