Skip to product information
1 of 2

Pramod Mohan Hegde

ಮಾಯಾನಿಕೇತನ

ಮಾಯಾನಿಕೇತನ

Publisher - ಸ್ನೇಹ ಬುಕ್ ಹೌಸ್

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 80

Type - Paperback

ನಿದ್ರೆಯಲ್ಲಿ ನಡೆಯುವವನ ಪಾತ್ರಗಳು

ರಾತ್ರಿ ನಿದ್ರೆಗೆಟ್ಟು ಹಗಲಿಡೀ ಮಂಪರಿನಲ್ಲಿರುವವರು ಅತ್ಯುತ್ತಮ ಕತೆಗಳನ್ನು ಸೃಷ್ಟಿಸಿ ಹೇಳುತ್ತಾರೆ. ಇದಕ್ಕೆ ಯಕ್ಷಗಾನ ಕಲಾವಿದರೇ ಸಾಕ್ಷಿ. ಇಲ್ಲಿರುವ ಕತೆಯೊಂದರಲ್ಲಿ ರಾತ್ರಿಗಳಲ್ಲಿ ನಿದ್ರೆಯಿಲ್ಲದ ಕಾಯಿಲೆಯಿಂದ ಬಳಲುವ ವ್ಯಕ್ತಿಯೊಬ್ಬ ಆ ಶೂನ್ಯವನ್ನು ತುಂಬಿಕೊಳ್ಳಲು ನಿಜಜೀವನದಲ್ಲಿಯೇ ಅನೇಕ ಪಾತ್ರಗಳನ್ನು ನಟಿಸುತ್ತಾನೆ. ಈ ಕತೆಗಾರನೂ ಓದುಗನನ್ನು ನಂಬಿಸಲು ಹೀಗೆಯೇ ಅನೇಕ ಪಾತ್ರಗಳಲ್ಲಿ ಜೀವ ತು೦ಬಿಕೊ೦ಡು ಮರಳಿ ಮರಳಿ ಬರುತ್ತಾನೆ. ಮನಸ್ಸಿನಂತೆಯೇ ದೇಹಕ್ಕೂ ಒಂದು ಮಾತಿದೆ ಎಂದು ಖಾತ್ರಿಪಡಿಸಿಕೊಂಡಿರುವ ಕತೆಗಾರನ ಹರೆಯದ ಹುಮ್ಮಸ್ಸು, ಪ್ರೇಮ ಮತ್ತು ವಿಹ್ವಲತೆಗಳು ಎಲ್ಲ ಕತೆಗಳಲ್ಲಿ ಆವರಿಸಿಕೊಂಡಿದೆ. ನಿದ್ರೆಯಲ್ಲಿ ನಡೆಯುವವನಂತೆ ಕತೆಗಾರ ಇಲ್ಲಿನ ಕತೆಗಳಲ್ಲಿ ಒಂದರಿಂದ ಇನ್ನೊಂದಕ್ಕೆ ನಡೆಯುತ್ತ ಹೋಗಿದ್ದಾನೆ. ಕತೆಗಾರ ಥಟ್ಟನೆ ನಿದ್ರೆಯಿಂದ ಎಚ್ಚೆತ್ತಾಗ ಆ ಕನಸುಗಳು ಓದುಗನೊಳಗೆ ಪವಾಡಸದೃಶವಾಗಿ ಸೇರಿಕೊಂಡಿರುತ್ತವೆ. ಅಸ್ವಸ್ಥತೆಯೂ ಬದುಕಿನ ಅನಿವಾರ್ಯ ಅಂಗ ಎಂದು ಅರ್ಥ ಮಾಡಿಕೊಂಡವನಂತೆ ಪ್ರಮೋದ ಈ ಕತೆಗಳನ್ನು ಬರೆಯುತ್ತಾನೆ. ಈ ಕತೆಗಳ ರೋಲರ್ ಕೋಸ್ಟರ್ ರೈಡ್ನಲ್ಲಿ ನೀನು ನನಗೆ ಬೇಕು ಎಂದು ಹೇಳಬೇಕಾದ ಕ್ಷಣದಲ್ಲಿ ದೂರವಾಗೋಣ ಎಂದು ಹೇಳುವವನಿದ್ದಾನೆ, ಒಂದು ರಾತ್ರಿಯ ಪ್ರಣಯಾನುಬಂಧಕ್ಕೂ ಕಸಿವಿಸಿಯ ಆವರಣ ಕಟ್ಟುವ ಬಾಲ್ಯವಿದೆ, ದೇಹದ ಗಾಯಗಳಿಗಿಂತಲೂ ಮನಸ್ಸಿಗೆ ಮಾಡುವ ಗಾಯ ಅಳಿಸಿಹೋಗುವುದಿಲ್ಲ ಎನ್ನುವವಳು ಕತೆಗಾರನ ವಂಚನೆಯ ಪ್ರತಿಮೆಯಾಗಿ ಆತನ ಕ್ಯಾಮೆರಾದಲ್ಲಿ ಉಳಿದುಕೊಳ್ಳುತ್ತಾಳೆ. ನಿಮ್ಮ ಮೊದಲ ಪ್ರೇಮದ ಹುಡುಗಿಯ ಇನ್ಸ್ಟಾಗ್ರಾಂ ಪೋಸ್ಟ್ ಇನ್ನೇನು ನೀವು ಒತ್ತಲಿರುವ ಒಂದು ಲೈಕಿನ ಮುನ್ನಾಕ್ಷಣದ ನಡುಕದಂತೆ ಈ ಕತೆಗಳಿವೆ.

-ಹರೀಶ್ ಕೇರ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)