Dr. D. N. Shankara Batt
ಮಾತು ಮತ್ತು ಬರಹದ ನಡುವಿನ ಗೊಂದಲ
ಮಾತು ಮತ್ತು ಬರಹದ ನಡುವಿನ ಗೊಂದಲ
Publisher - ಡಿ. ಎನ್. ಶಂಕರ ಬಟ್
- Free Shipping Above ₹300
- Cash on Delivery (COD) Available
Pages -
Type -
Pickup available at 67, South Avenue Complex, DVG Road, Basavanagudi
Usually ready in 24 hours
ಮಾತು ಮತ್ತು ಬರಹಗಳ ನಡುವಿನ ಸಂಬಂಧವೆಂತಹುದು, ಮತ್ತು ಅವಕ್ಕೂ ನುಡಿ ಇಲ್ಲವೇ ಭಾಷೆಗೂ ನಡುವಿರುವ ಸಂಬಂಧವೆಂತಹುದು ಎಂಬುದರ ಕುರಿತಾಗಿ ಜನರಲ್ಲಿ ಗೊಂದಲವಿದೆ; ಈ ಗೊಂದಲದಿಂದಾಗಿ, ಅವರಲ್ಲಿ ನುಡಿಯ ಕುರಿತಾಗಿ ಹಲವು ತಪ್ಪು ಅನಿಸಿಕೆಗಳು ಮೂಡಿಬಂದಿವೆ. ಇವನ್ನು ಹೋಗಲಾಡಿಸುವುದಕ್ಕಾಗಿ, ಈ ಎರಡು ಬಗೆಯ ಸಂಬಂಧಗಳು ಎಂತಹವು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ನುಡಿ ಎಂಬುದು ಮಾತಲ್ಲದೆ ಬರಹವಲ್ಲ; ನುಡಿಯ ಇಲ್ಲವೇ ಮಾತಿನ ಒಂದು ಕೃತಕ ರೂಪವೇ ಬರಹ. ಮಾತು ಮಕ್ಕಳ ಬೆಳವಣಿಗೆಯ ಅಂಗವಾಗಿ ತಲೆಮಾರಿನಿಂದ ತಲೆಮಾರಿಗೆ ಸಾಗುತ್ತಾ ಹೋಗುತ್ತದೆ; ಹಾಗಾಗಿ, ಅದು ಯಾವಾಗಲೂ ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿರುತ್ತದೆ.
Share
ಯಾವುದೇ ನುಡಿಯಾದರು ಅದನ್ನು ನಾವು "ಮಾತು" ಮತ್ತು "ಬರಹ" ಬಗೆಗಳಲ್ಲಿ ಬಳಸುತ್ತೇವೆ. ಆದರೆ ಮಾತು ಮತ್ತು ಬರಹ ನಡುವಿನ ನಂಟು ನಾವು ಅಂದುಕೊಳ್ಳುವ ಹಾಗೆ ಅಶ್ಟು ಸುಳುವಲ್ಲ. ಇವುಗಳ ನಡುವಿನ ನಂಟಿನ ಕುರಿತು ನಮಗೆ ಇನ್ನೂ ಗೊಂದಲಗಳಿವೆ. ಒಂದು ನುಡಿಗೆ ಮಾತೇ ಮೊದಲು. ಹಿಂದೆ ಅಂದರೆ ಹಲವು ಸಾವಿರ ವರುಶಗಳ ಹಿಂದೆ ಅದನ್ನು ಹೆಚ್ಚು ಹೊತ್ತು ನೆನಪಿನಲ್ಲಿಟ್ಟಿಕೊಳ್ಳುವುದಕ್ಕೆ ಮತ್ತು ಹೆಚ್ಚು ಮಂದಿಗೆ ತಲುಪುವ ಸಲುವಾಗಿ ಬರಹ ಅಳವಡಿಸಲಾಗಿತ್ತು. ಒಂದು ನುಡಿಗೆ ಮಾತೇ ಮೊದಲು ಬರಹ ಆಮೇಲೆ. ಮಾತು, ಬರಹ ನಡುವಿನ ನಂಟನ್ನು ಕುರಿತು ತಿಳಿದುಕೊಳ್ಳಲು ಹಲವು ಮಾತುಗಳು ಈ ಹೊತ್ತಗೆಯಲ್ಲಿ ತಿಳಿಸಲಾಗಿದೆ. ಹೊತ್ತಗೆ ಓದಿದ ಮೇಲೆ ಮಾತು, ಬರಹ ನಡುವಿನ ನಂಟಿನ ಕುರಿತು ಎಂತಹದೆಂದು ತಿಳಿಯುತ್ತದೆ.
ಮಾತು ಮತ್ತು ಬರಹದ ನಡುವಿನ ನಂಟಿನ ಗೊಂದಲದಿಂದ ಇನ್ನು ಕೆಲವು ತಪ್ಪು ತಿಳಿವಳಿಕೆ ಉಂಟಾಗಿದೆ, ಒಂದು ಎತ್ತುಗೆ ಹೇಳುವುದಾದರೆ, "ಕನ್ನಡ ನುಡಿ ಎಶ್ಟು ಹಳೆಯದು ?" ಕುರಿತು ಮಾತನಾಡುವಾಗ ನಾವು ಕನ್ನಡ ಬರಹದ ಹಳಮೆ ಕುರಿತು ಮಾತನಾಡಿದರೆ ಅದೇ ಕನ್ನಡ ಹಳಮೆ ಎಂದು ತಪ್ಪಾಗಿ ತಿಳಿದುಕೊಂಡಿರುವುದು. ಬರಹ ಬರುವ ಮುನ್ನವೇ ಮಾತಿತ್ತು, ಕನ್ನಡದ ಬರಹ ನೋಡಿ ಕನ್ನಡ ಎಶ್ಟು ಹಳೆಯದು ಎಂದು ಅಳೆಯುವುದು ಸರಿಯಲ್ಲವೆಂದು ಈ ಹೊತ್ತಗೆ ಓದಿದ ಮೇಲೆ ತಿಳಿಯುತ್ತದೆ. ಕನ್ನಡ ಮಾತಿನ ಕುರುಹುಗಳನ್ನು ಗಮನಿಸದೆ ಕನ್ನಡ ಹಳಮೆ ಕುರಿತು ಮಾತನಾಡುವುದು ಸರಿಯಲ್ಲವೆಂದು ಈ ಹೊತ್ತಗೆ ಓದಿದ ಮೇಲೆ ಹೇಳಬಹುದು.
ಒಟ್ಟಿನಲ್ಲಿ ಈ ಹೊತ್ತಗೆ ಓದಿದ ಮೇಲೆ ಮಾತು ಮತ್ತು ಬರಹದ ನಡುವಿನ ನಂಟು ಎಂತಹದೆಂದು ತಿಳಿಯುವುದರ ಜೊತೆ ಇದ್ದ ಗೊಂದಲಗಳಿಗೆ ಒಂದು ಕೊನೆ ಬೀಳುತ್ತದೆ ಜೊತೆ ಗೊಂದಲದಿಂದ ಉಂಟಾದ ತಪ್ಪು ತಿಳಿವಳಿಕೆಗಳಿಗು ಒಂದು ಕೊನೆ ಬೀಳುತ್ತದೆ. ಈ ಹೊತ್ತಗೆ ಎಲ್ಲ ಕನ್ನಡಿಗರು ಓದಬೇಕೆಂದು ನನ್ನ ಕಳಕಳಿ.
Subscribe to our emails
Subscribe to our mailing list for insider news, product launches, and more.