B. R. Lakshman Rao
ಮಣಿ ಮಾಲೆ
ಮಣಿ ಮಾಲೆ
Publisher - ಅಂಕಿತ ಪುಸ್ತಕ
- Free Shipping Above ₹250
- Cash on Delivery (COD) Available
Pages - 208
Type - Paperback
ಕವಿ ಬಿ.ಆರ್. ಲಕ್ಷ್ಮಣರಾವ್ ಅವರು ತನ್ನ ಆಪ್ತರ ಕುರಿತು ಬರೆದ ನುಡಿಚಿತ್ರಗಳು ಇವು. ಈ ಚಿತ್ರಗಳಲ್ಲಿನ ಅವರ ಹಿರಿ-ಕಿರಿಯ ಗೆಳೆಯರನೇಕರು ಕನ್ನಡ ಸಾಹಿತ್ಯ, ಸಂಗೀತ, ಸಿನೆಮಾಗಳಲ್ಲಿ ಹೆಸರು ಮಾಡಿದವರು. ಕನ್ನಡ ಪ್ರಪಂಚದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಓದಿ ಕೇಳಿ ಪರಿಚಿತರು. ಇಂಥವರ ಜತೆಗಿನ ತನ್ನ ಒಡನಾಟದ ಪರಿಯನ್ನು ಒಬ್ಬ ಕವಿ ಹೇಳಹೊರಟರೆ ಆ ವಿವರಣೆಗೆ ದಕ್ಕುವ ದೀಪ್ತತೆ ಬೇರೆಯೇ. ಈ ಸಂಕಲನ ಅದಕ್ಕೆ ಉದಾಹರಣೆಯಂತಿದೆ.
ಕವಿಗೇ ಸ್ವತಃ ಅರಿಯದಂತೆ ಇಲ್ಲಿ ಅರಳಿರುವುದು ಅವನೊಳಗೆ ಹುದುಗಿದ್ದ ಹೃದಯಂಗಮ ಗದ್ಯಶೈಲಿ. ಕಣ್ಮುಂದೆ ಕಡೆದು ನಿಲ್ಲಿಸಿದ ಕನ್ನಡದ ಸಾಂಸ್ಕೃತಿಕ ವ್ಯಕ್ತಿತ್ವಗಳ ಮುಖ್ಯ ಮಾದರಿಗಳಷ್ಟೇ ಅಲ್ಲ ಇವು. ಒಂದು ದೃಷ್ಟಿಯಲ್ಲಿ ಲೇಖಕರ ಆತ್ಮಕಥನದ ಚಿತ್ರಪಟಗಳು ಕೂಡ. ಮನೆಜಗಲಿಯಲ್ಲಿ ಕುಳಿತು ತನ್ನ ಒಡನಾಡಿಗರ ಸುತ್ತಾ ಮಾತು-ಕತೆ-ನೆನಕೆಯಲ್ಲಿ ಲವಲವಿಕೆಯಿಂದ ಹಂಚುವ ಅನುಭವದ ಸಂಚಿಯೂ.
ವಿಶೇಷವೆಂದರೆ ಈ ನುಡಿರೇಖೆಗಳ ಮೂಲಕವೇ ಹಾಸ್ಯ, ಚೇಷ್ಟೆ ಗುಣ, ಲೋಕಾಭಿರಾಮಗುಣ, ದೇಶಾವರಿ ನಗೆ, ಗಾಂಭೀರ್ಯ, ವಿಷಾದ, ತಳಮಳ, ಭಾವನಾಶೀಲತೆ ಮುಂತಾದವು ತೀವ್ರವಾಗಿ ಸಮ್ಮಿಳಿತಗೊಂಡ ಗೆಳೆಯ ಲಕ್ಷ್ಮಣರಾವ್ ಅವರ ವ್ಯಕ್ತಿವಿಶಿಷ್ಟತೆಯೂ ತಾನಾಗಿ ಅನಾವರಣಗೊಂಡಿದೆ. ತಾಯಿ ಕುರಿತ ಲೇಖನ ಇದಕ್ಕೆ ದೃಷ್ಟಾಂತದಂತಿದೆ.
-ವೈದೇಹಿ
Share
Subscribe to our emails
Subscribe to our mailing list for insider news, product launches, and more.