Skip to product information
1 of 1

Dr. Satyanarayana Bhat

ಮಂಗರಸನ MENU - ಅರಮನೆಯ ಅಡುಗೆಗಳು

ಮಂಗರಸನ MENU - ಅರಮನೆಯ ಅಡುಗೆಗಳು

Publisher - ಸಾಹಿತ್ಯ ಲೋಕ ಪ್ರಕಾಶನ

Regular price Rs. 130.00
Regular price Rs. 130.00 Sale price Rs. 130.00
Sale Sold out
Shipping calculated at checkout.

- Free Shipping above ₹1,000

- Cash on Delivery (COD) Available

Pages -

Type -

ನಾಲಿಗೆಯ ರುಚಿ ಮನುಷ್ಯ ಸಂಸ್ಕೃತಿಯ ಅವಿಭಾಜ್ಯ ಅಂಗ. ಅವರಿವರನ್ನು ಬೈಯ್ದು ತೀಟೆ ತೀರಿಸಿಕೊಳ್ಳುವುದಕ್ಕಿಂತಲೂ ಸೊಗಸಾದ ಆಹಾರ ಪದಾರ್ಥಗಳನ್ನು ಸವಿದರೆ ನಾಲಿಗೆಗೂ ಒಂದು ಸಾರ್ಥಕತೆ. ಮಂಗರಸನ ಸೂಪಶಾಸ್ತ್ರ ನಿಮ್ಮ ನಾಲಿಗೆ ರುಚಿಯನ್ನು ತಣಿಸುವ ಒಂದು ಉತ್ತಮ ಗ್ರಂಥ. ಅಡಿಗೆ, ಯುದ್ಧ, ಕಾಮ, ಕಟ್ಟಡ ದೇವಾಲಯ ನಿರ್ಮಾಣ, ವಿಷವೈದ್ಯ, ಅಶ್ವಶಾಸ್ತ್ರ, ಗಜಶಾಸ್ತ್ರ, ಮಾಟ ಮಂತ್ರಗಳವರೆಗೂ ಕನ್ನಡಿಗರ ಪ್ರಜ್ಞೆ ಕೆಲಸಮಾಡಿತ್ತು. ಅಡುಗೆಯನ್ನು ಶುಚಿಯಾಗಿ, ರುಚಿಯಾಗಿ ಒಂದು ಸಾತ್ವಿಕ ಅಭಿರುಚಿಯಾಗಿ ರುಚಿಕಟ್ಟು ಮಾಡಿದ ನಾಡು ನಮ್ಮದು. ಮಂಗರಸ ಒಬ್ಬ ಪಾಕವಿಜ್ಞಾನಿ. ಅಡುಗೆ ಮಾಡುವುದು ಏನು ಮಹಾ ಎನ್ನುವವರು ನಾಲ್ಕು ಜನರ ನಾಲಿಗೆ ಮೆಚ್ಚುವಂತೆ ಅಡುಗೆ ಮಾಡಿ ಬಡಿಸಿ ನೋಡಬೇಕು. ಮಂಗರಸ ನಾಡಿನ ಜನರಿಗೆ ಸಾತ್ವಿಕ ಜೈನ ಸಸ್ಯಾಹಾರ ಪದ್ಧತಿಯ ಶುಚಿ-ರುಚಿ ತಿಳಿಸಿಕೊಟ್ಟ ರಸಿಕ ಶಿಖಾಮಣಿ, ಅವನ ಈ ಪಾಕಶಾಸ್ತ್ರ ಗ್ರಂಥ ಆಧುನಿಕ ಕನ್ನಡ ಭಾಷೆಯ ಪಾಕದಲ್ಲಿ ಡಾ|| ಸತ್ಯನಾರಾಯಣ ಭಟ್ ಕೈಯಲ್ಲಿ ಜಿನುಗಿದೆ. ಆಯುರ್ವೇದ ವೈದ್ಯರು ಪ್ರಾಚೀನ ಅಡುಗೆ ಪುಸ್ತಕವನ್ನು ಹೊಸಗನ್ನಡಕ್ಕೆ ಬಸಿದು 'ಆರೋಗ್ಯ ಶಾಸ್ತ್ರ' ಕೃತಿಯನ್ನಾಗಿ ಮಾಡಿದ್ದಾರೆ. ಎಷ್ಟಾದರೂ ಆಹಾರವೇ ಔಷಧ ಎಂದ ನಾಡು ನಮ್ಮದಲ್ಲವೆ? ಕನ್ನಡ ಭಾಷೆ ಸಂಸ್ಕೃತಿ ಅಧ್ಯಯನ ಮಾಡುವವರಿಗೆ, ಹೊಟೇಲ್ ಮ್ಯಾನೇಜ್‌ಮೆಂಟ್‌ ವಿದ್ಯಾರ್ಥಿಗಳಿಗೆ, ಪಾಕಶಾಸ್ತ್ರ ಪ್ರಯೋಗಿಗರಿಗೆ ಈ ಪುಸ್ತಕ ಓದುವುದೆಂದರೆ ಆನೆಯನ್ನು ಕಬ್ಬಿನ ಗದ್ದೆಯಲ್ಲಿ ಮೇಯಲು ಬಿಟ್ಟಂತೆ!

ಡಾ. ಜಿ. ಬಿ. ಹರೀಶ್ ಸಂಶೋಧಕರು, ಚಿಂತಕರು

ಸಾಹಿತ-ಲೋಕ ಪಬ್ಲಿಕೇಷನ್
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)