Dr. T. N. Vasudevamurthy
Publisher -
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ಖಲೀಲ್ ಗಿಬ್ರಾನ್ ಈ ಕೃತಿಯಲ್ಲಿ ಯೇಸುವಿನ ಸಮಕಾಲೀನರಾದ ಸುಮಾರು 79 ಮಂದಿಯ ಬಾಯಲ್ಲಿ ಯೇಸುವಿನ ಬಗ್ಗೆ ನುಡಿಸಿದ್ದಾನೆ. ಕೆಲವರು ಆತನನ್ನು ಹೊಗಳಿದ್ದಾರೆ. ಕೆಲವರು ನಿಂದಿಸಿದ್ದಾರೆ. ಕೆಲವರು ನೆನೆದು ಕಣ್ಣೀರಿಟ್ಟಿದ್ದಾರೆ. ಮತ್ತೆ ಕೆಲವರು ಆತನನ್ನು ಶಪಿಸಿದ್ದಾರೆ. ಆದರೆ ಅವೆಲ್ಲಕ್ಕೂ ಬೈಬಲ್ ಪವಿತ್ರ ಗ್ರಂಥದಲ್ಲಿ ಪ್ರಮಾಣಗಳು ಸಿಗುತ್ತವೆ. ಇದರಲ್ಲಿನ ಮಾತುಗಳು ಬೈಬಲ್ ಪವಿತ್ರ ಗ್ರಂಥದ ಯಾವ ವಾಕ್ಯಕ್ಕೂ ವ್ಯತಿರಿಕ್ತವಾಗಿಲ್ಲ. ಬದಲಾಗಿ ಎಷ್ಟೋ ಕಡೆಗಳಲ್ಲಿ ಬೈಬಲ್ ಪವಿತ್ರ ಗ್ರಂಥದ ವಾಕ್ಯಗಳೇ ಪುನರುಚ್ಚಾರಗೊಂಡಿವೆ. ಲೆಬನಾನ್‌ನ ಸಿರಿಯನ್ ಹಾಗೂ ಮಾರೊನೈಟ್ ಚರ್ಚ್‌ಗಳಲ್ಲಿ ಈಗಲೂ ಪ್ರತಿ ಭಾನುವಾರದ ಪ್ರಾರ್ಥನಾ ಸಭೆಯಲ್ಲಿ ಬೈಬಲ್ ಪವಿತ್ರ ಗ್ರಂಥದ ಪಠಣದೊಂದಿಗೆ ಖಲೀಲ್ ಗಿಬ್ರಾನ್‌ನ ಈ ಪುಸ್ತಕದ ಅಧ್ಯಾಯಗಳನ್ನು ಪಠಿಸಲಾಗುತ್ತಿದೆಯಂತೆ. ಇದು ಗಿಬ್ರಾನ್‌ನ ಹಿರಿಮೆಯನ್ನು ಸೂಚಿಸುತ್ತದೆ.
-ಸೋದರಿ ಡಾ. ಎಲಿಜಬೆತ್ ಸಿ.ಎಸ್.
ಸಾಂಸ್ಥಿಕ ಸ್ಥಾವರ 'ಕ್ರಿಸ್ತ'ನನ್ನು ಅನಿಕೇತನ ಜಂಗಮ 'ಯೇಸು'ವಾಗಿಸುವ ಕೃತಿಯಿದು. ಡಾ.ಟಿ.ಎನ್.ವಾಸುದೇವಮೂರ್ತಿಯವರು ಓದುಗರಿಗೆ ಇದು ಕನ್ನಡದ್ದೇ ಕೃತಿ ಎನಿಸುವಷ್ಟು ಸರಳವಾದ, ಸಹಜವಾದ ಭಾಷೆಯನ್ನು ಸಾಹಿತ್ಯದ ಸೊಗಡನ್ನು ಬೆರೆಸಿ ನಮ್ಮದಾಗಿಸಿದ್ದಾರೆ. ಇನ್ನು ಡಾ.ಗೂಳಪ್ಪ ವಕ್ಕುಂದ ಅವರು ತಮ್ಮ ಸಾಹಿತ್ಯದ ಓದು ಅಧ್ಯಾಪನಗಳ ದಶಕಗಳ ಅನುಭವವನ್ನು ಈ ಕೃತಿಯ ಸಂಶೋಧನೆಯ ಭಾಗಕ್ಕೆ ದುಡಿಸಿಕೊಂಡಿರುವುದು ಪ್ರತಿಪಟಗಳಲ್ಲೂ ಗೋಚರವಾಗುತ್ತದೆ. ಈ ಲೇಖಕದ್ವಯರ ಪ್ರಸ್ತಾವನೆಯಂತೂ ಕೃತಿಗೆ ಒಂದು ಪ್ರವೇಶದ್ವಾರವನ್ನು ನಿರ್ಮಿಸಿಕೊಟ್ಟಿದೆ. ಈ ಪ್ರಸ್ತಾವನೆಯ ಮೂಲಕ ಕೃತಿಯನ್ನು ಪ್ರವೇಶಿಸಿದಾಗ ಕ್ರಿಸ್ತನ ಲೋಕ ಇನ್ನೂ ಹಿರಿದಾಗಿ ಓದುಗನೆದುರು ಅನಾವರಣವಾಗುತ್ತದೆ.
ಕ್ರಿಸ್ತನ ಅಂತರಂಗದ ಶಿಷ್ಯ ಮೇರಿ ಮ್ಯಾಗ್ನಲಿನ್ “ಅವನು ಹೆಜ್ಜೆಯಿಟ್ಟು ನಡೆದ ಹಾಗೆ ಲೋಕದ ಯಾವ ಗಂಡಸೂ ನಡೆಯುತ್ತಿರಲಿಲ್ಲ' ಎಂದು ಯೇಸುವಿನ ಕೊನೆಯಿರದ ಒಲವಿನಿಂದ ನುಡಿಯುತ್ತಾಳೆ. ಈ ಸಾಲುಗಳು ಕನ್ನಡದ ಓದುಗರಿಗೆ ಮಹಾದೇವಿಯಕ್ಕ ನೆನಪಿಸುವಂತಿವೆ. ಹಾಗೂ ಚನ್ನಮಲ್ಲಿಕಾರ್ಜುನರ ಪ್ರೇಮ ಸಾಂಗತ್ಯವನ್ನು ನೆನಪಿಸುವಂತಿದೆ.
-ಡಾ.ಬಿ.ಸಿ.ನಾಗೇಂದ್ರ ಕುಮಾರ್.
ಪ್ರಕಾಶಕರು - ಸಾಹಿತ್ಯ ಲೋಕ ಪಬ್ಲಿಕೇಷನ್ಸ್
