ಯಾಕೊವ್ ಪೆರೆಲ್ಮನ್ | ಕನ್ನಡಕ್ಕೆ: ಕೆ.ಎಲ್.ಗೋಪಾಲಕೃಷ್ಣ ರಾವ್
Publisher: ನವಕರ್ನಾಟಕ ಪ್ರಕಾಶನ
Couldn't load pickup availability
ರಷ್ಯಾದ ಗಣಿತ ತಜ್ಞ ಯಾಕೊವ್ ಪೆರೆಲ್ಮನ್ ಗಣಿತದ ಗಾರುಡಿಗನೆಂದೇ ಖ್ಯಾತಿ ಹೊಂದಿದ್ದವರು. ಜರಡಿಯಲ್ಲಿ ನೀರು ಒಯ್ಯಬಹುದೇ? ಕುದಿಯುವ ನೀರಿನಲ್ಲಿ ಮಂಜು ಕರಗುವುದೇ? ತಪ್ಪು ತಕ್ಕಡಿಯಿಂದ ಸರಿಯಾದ ತೂಕ ಸಾಧ್ಯವೇ? ಕಾಗದದ ಪೆಟ್ಟಿಗೆಯಲ್ಲಿ ನೀರು ಕಾಯಿಸಬಹುದೇ? ಮಂಜಿನಿಂದ ಬೆಂಕಿ ಹೊತ್ತಿಸಲಾದಿತೇ? ಇಂತಹ ನೂರಾರು ಸ್ವಾರಸ್ಯಕರ ಸಮಸ್ಯೆಗಳನ್ನು ಬಿಡಿಸಿ ತನ್ಮೂಲಕ ಮಕ್ಕಳಿಗೆ ಭೌತಶಾಸ್ತ್ರದ ಮೂಲ ನಿಯಮಗಳನ್ನು ತಿಳಿಯಪಡಿಸುವುದು, ಈ ನಿಯಮಗಳು ನಿಜಜೀವನದಲ್ಲಿ ಹೇಗೆ ಅನ್ವಯಗೊಂಡಿವೆ ಅನ್ನುವುದನ್ನು ಮಕ್ಕಳ ಮನದಲ್ಲಿ ಅಚ್ಚೊತ್ತುವುದು ಈ ಕೃತಿಯ ಆಶಯ. ಮನರಂಜನೆಯ ಜೊತೆಗೆ ಕುತೂಹಲ ಕೆರಳಿಸಿ ಓದುಗರು ವೈಜ್ಞಾನಿಕವಾಗಿ ಚಿಂತಿಸುವಂತೆ ಮಾಡುವುದು ಈ ಪುಸ್ತಕದ ಗುರಿಯಾಗಿದೆ. ಈ ಕೃತಿಯನ್ನು ಕನ್ನಡಕ್ಕೆ ಕೆ.ಎಲ್.ಗೋಪಾಲಕೃಷ್ಣ ರಾವ್ ಅವರು ಅನುವಾದಿಸಿದ್ದಾರೆ. ಇದು ಕೃತಿಯ ಎರಡನೆಯ ಭಾಗವಾಗಿದೆ.
