ಮಹಾಬಲ ಸೀತಾಳಭಾವಿ
Publisher: ಸಾವಣ್ಣ ಪ್ರಕಾಶನ
Couldn't load pickup availability
ಲೇಖಕ ಮಹಾಬಲ ಸೀತಾಳಭಾವಿ ಅವರ ಕೃತಿ-ಮ್ಯಾನೇಜ್ ಮೆಂಟ್ ಭಗವದ್ಗೀತೆ.
ಕುರುಕ್ಷೇತ್ರದಲ್ಲಿ ಅರ್ಜುನ ಯುದ್ಧ ಮಾಡಲಾರೆ ಎಂದು ಕೈಚೆಲ್ಲಿ ನಿಂತಾಗ ಶ್ರೀಕೃಷ್ಣ, ಭಗವದ್ಗೀತೆ ಬೋಧಿಸುವ ಮೂಲಕ ಮಾಡಿದ ಕೆಲಸ ಅಪ್ಪಟ ಬ್ರೇನ್‌ವಾಶ್! ಅದನ್ನು 21ನೇ ಶತಮಾನದ ಶೈಕ್ಷಣಿಕ ಭಾಷೆಯಲ್ಲಿ ಮೈಂಡ್ ಮ್ಯಾನೇಜ್‌ಮೆಂಟ್ ಎನ್ನುತ್ತಾರೆ.
ಮಾತಿಗೆ ಅರ್ಜುನ ಬಗ್ಗದಿದ್ದಾಗ ಶ್ರೀಕೃಷ್ಣ ತೋರಿಸಿದ್ದು ವಿಶ್ವರೂಪ. ಅದೊಂದು ರೀತಿಯಲ್ಲಿ
ಬ್ಲ್ಯಾಕ್‌ಮೇಲ್ ತಂತ್ರವೂ ಹೌದು, ಹೆದರಿಸಿ ಬಗ್ಗಿಸುವ ಉಪಾಯವೂ ಹೌದು.
ಯುದ್ಧದಲ್ಲಿ ಕರ್ಣನನ್ನು ಸೋಲಿಸಲು ಸಾಧ್ಯವೇ ಆಗದಿದ್ದಾಗ ಅವನ ರಥದ ಚಕ್ರ ಹೂತುಹೋಗುವಂತೆ ಮಾಡಿ ಅರ್ಜುನನ ಕೈಯಿಂದ ಶ್ರೀಕೃಷ್ಣ ಬಾಣ ಬಿಡಿಸಿದ್ದು ಅದ್ಭುತ ಸ್ಟಾಟಜಿಕ್ ಪ್ಲಾನಿಂಗ್. ಇದು ಇಲ್ಲದೆ ಇಂದಿನ ಕಾರ್ಪೊರೇಟ್ ವ್ಯವಹಾರಗಳು ಒಂದು ಹೆಜ್ಜೆಯೂ ಮುಂದೆ ಹೋಗುವುದಿಲ್ಲ.
ಇಂತಹ ನೂರಾರು ಮ್ಯಾನೇಜ್‌ಮೆಂಟ್ ಕೌಶಲಗಳನ್ನು ಶ್ರೀಕೃಷ್ಣ ಭಗವದ್ಗೀತ ಹಾಗೂ ಮಹಾಭಾರತದಲ್ಲಿ ಹೇಳಿದ್ದಾನೆ. ಆದ್ದರಿಂದಲೇ ಇಂದು ಪ್ರತಿಷ್ಠಿತ ಮ್ಯಾನೇಜ್‌ಮೆಂಟ್ ಕಾಲೇಜುಗಳಲ್ಲಿ ಭಗವದ್ಗೀತೆಯ ವಾರ ಮಾಡುತ್ತಾರೆ.
ಭಗವದ್ಗೀತೆಯನ್ನು ನಿತ್ಯದ ಬದುಕು ಹಾಗೂ ಬಿಸಿಸ್‌ಗೆ ಲಾಭದಾಯಕವಾಗಿ ಬಳಸಿಕೊಳ್ಳುವುದು ಹೇಗೆ? ಈ ಪುಸ್ತಕದಲ್ಲಿ ತಿಳಿದುಕೊಳ್ಳಿ.
