T. S. Goravara
ಮಲ್ಲಿಗೆ ಹೂವಿನ ಸಖ
ಮಲ್ಲಿಗೆ ಹೂವಿನ ಸಖ
Publisher -
- Free Shipping Above ₹300
- Cash on Delivery (COD) Available
Pages - 83
Type - Paperback
Couldn't load pickup availability
ಬೆಳಕಿನ ಕೋಲಿನಂತೆ ಕಾಣುವ ಈ ಕತೆಗಾರ, ಬಳಸುವ ಭಾಷೆ ಹಾಗು ಆಯ್ಕೆ ಮಾಡಿಕೊಂಡ ವಸ್ತುಗಳು ಎಷ್ಟು ತಾಜಾ ಆಗಿವೆಯೆಂದರೆ ಮಹಾಸೃಜನಶೀಲರೆಂದು ಕೂಗು ಹೊಡೆಯುವ ಅಕಾಡೆಮಿಕ್ ದರಿದ್ರರ ಮುಖಕ್ಕೆ ತಿಕ್ಕಿದ ಕನ್ನಡಿ ಹಿಡಿದಂತಿದೆ. ಕನ್ನಡದ ಹೊಸ ಆಶಯದ ಕತೆಗಳು 'ಮಲ್ಲಿಗೆ ಹೂವಿನ ಸಖ' ಕಥಾಸಂಕಲನದಲ್ಲಿವೆ. ಗ್ರಾಮೀಣ ಪ್ರದೇಶದ ಮನಸ್ಸು ಬದುಕಿನ ಅನುಭವಗಳಿಗೆ ಮುಖಾಮುಖಿಯಾಗುವ, ಮೂಲ ಮುಗ್ಧತೆಯನ್ನು ಉಳಿಸಿಕೊಂಡು ಮೌಲಿಕ ಪರಂಪರೆಗೆ ಆವರಣವಾಗುವ ಅತ್ಯಂತಿಕವಾದ ದೈವಿಕ ಹಂಬಲ ಎಲ್ಲ ಕತೆಗಳಲ್ಲಿಯೂ ಪುಟಿದೆದ್ದು ಬಂದಿದೆ.
-ಎಸ್. ಎಫ್. ಯೋಗಪ್ಪನವರ್
ದಟ್ಟವಾದ ವಿವರಗಳಲ್ಲಿ ಊರಿ ನಿಂತಿರುವ ತಮ್ಮ ಕತೆಗಳು ಯಾವ ಬಿಂದುವಿನಲ್ಲಿ ಲೌಕಿಕವನ್ನು ಮೀರುವ ಧ್ವನಿಶಕ್ತಿಯನ್ನು ಪಡೆದು ಕೊಳ್ಳುತ್ತವೆಂಬುದು ಗೊರವರ ಅವರಿಗೆ ಚೆನ್ನಾಗಿ ತಿಳಿದಿದೆ. ಸಾಮಾನ್ಯವೆನಿಸುವ ವಿವರಗಳ ಮೂಲಕ ಕಾಣೆಯನ್ನು ಸಾಧಿಸುವುದು ಹೇಗೆಂಬ ತಿಳವಳಿಕೆಯು ಉತ್ತಮ ಮತ್ತು ಸಾಮಾನ್ಯ ಕತೆಗಾರರನ್ನು ಬೇರ್ಪಡಿಸುವ ಒಂದು ಲಕ್ಷಣವಾಗಿದೆ. ಈ ಪ್ರಜ್ಞೆಯಿದ್ದಾಗ ಕತೆಗಾರ ಅನಗತ್ಯವಾದದ್ದನ್ನು ಕತೆಯೊಳಗೆ ತುರುಕದೇ, ಕಾಯಿ ಸಹಜವಾಗಿ ಹಣ್ಣಾಗುವುದಕ್ಕೆ ಸಂಯಮದಿಂದ ಕಾಯುತ್ತಾನೆ. ಇಂಥ ವಿಶೇಷವಾದ ಕಲಾಪ್ರಜ್ಞೆಯಿರುವ ಲೇಖಕ ಟಿ.ಎಸ್.ಗೊರವರ.
-ವಿವೇಕ ಶಾನಭಾಗ
ನಿಮ್ಮ ಸಂಕಲನದ ಎಲ್ಲ ಕಥೆಗಳನ್ನು ನಿಧಾನಕ್ಕೆ ಮತ್ತೊಮ್ಮೆ ಓದಿ ಮುಗಿಸಿದೆ. ನಿಮ್ಮ ಬರಹಗಳಲ್ಲಿ (ಕಥೆಗಳನ್ನೂ ಒಳಗೊಂಡು ಎಲ್ಲ ರೀತಿಯ ಬರಹಗಳು) ನಾನು ಬಹುವಾಗಿ ಮೆಚ್ಚುವ ಅಂಶ ಭಾವತೀವ್ರತೆ ಮತ್ತು ರೂಪಕಗಳ ಮೂಲಕ ಲೋಕದ ಅನುಭವಗಳನ್ನು ಕಟ್ಟುವ ವಿಧಾನ. ಅದು ಈ ಕಥೆಗಳಲ್ಲೂ ಮುಂದುವರೆದಿರುವುದು ಒಬ್ಬ ಲೇಖಕನಾಗಿ ನನ್ನ ಮಟ್ಟಿಗೆ ಹೇಳುವುದಾದರೆ ದೊಡ್ಡ ಸಾಧನೆ. ಕಟ್ಟುವ ರೀತಿಯಲ್ಲಿ ತೋರಿರುವ ಸಾತತ್ಯ ಮತ್ತು ಸಂಯಮಗಳು ಸಹ ಗಮನಾರ್ಹವಾಗಿವೆ.
-ಕೇಶವ ಮಳಗಿ
Share


Subscribe to our emails
Subscribe to our mailing list for insider news, product launches, and more.