Vikas Negiloni
ಮಳೆಗಾಲ ಬಂತು ಬಾಗಿಲು ತಟ್ಟಿತು
ಮಳೆಗಾಲ ಬಂತು ಬಾಗಿಲು ತಟ್ಟಿತು
Publisher - ಅಂಕಿತ ಪುಸ್ತಕ
- Free Shipping Above ₹250
- Cash on Delivery (COD) Available
Pages - 128
Type - Paperback
ಇಪ್ಪತ್ತೈದು ವರುಷಗಳ ನಂತರ ವಾಪಸ್ಸು ಬರುವ ಊರ್ಮಿಳಾ ಹೇಳುವ ಪ್ರೇಮಕತೆಯನ್ನು ಸತ್ಯ ಕೇಳಿಸಿಕೊಂಡನಾ? ಬಸ್ಸಿಳಿದು ಬಂದ ರಂಗನಾಥನೂ, ಕಾರಲ್ಲಿ ಬಂದ ರಂಗನಾಥನೂ ಒಬ್ಬನೇನಾ? ಮಗಳನ್ನು ತುಂಬ ಪ್ರೀತಿಸುವುದು ಕೂಡ ಈ ಜಗತ್ತಿನಲ್ಲಿ ಅಪರಾಧವಾ? ರಾಧಾಕೃಷ್ಣ ಪುಣಿಚಿತ್ತಾಯರು ಹೆಣ್ಣಾಗುತ್ತಾ ಹೋದದ್ದಕ್ಕೂ ಅವರ ಹೆಂಡತಿ ಗಂಡಾಗುತ್ತಾ ಸಾಗಿದ್ದಕ್ಕೂ ಸಂಬಂಧ ಇದೆಯಾ? ಆ ರಾತ್ರಿ ಸೀತಾಪಹರಣದ ಕತೆ ಕೇಳಿದ ಸೀತಾಲಕ್ಷ್ಮಿಗೆ ಅವನೊಟ್ಟಿಗೆ ಹೋಗುವ ಆಸೆಯಾಗಿತ್ತಾ?
ವಿಕಾಸ್ ಪಕ್ಕ ಕೂತುಕೊಂಡು ಇನ್ನೊಂಚೂರು ಕತೆ ಹೇಳಿ ಅಂತ ಕೇಳುವ ಆಸೆಯಾಗುತ್ತದೆ. ಅವರೊಳಗೊಂದು ನಾವ್ಯಾರೂ ನೋಡದ ಜಗತ್ತಿದೆ. ತೀರ್ಥಹಳ್ಳಿಯ ಹಸಿರು, ಉಡುಪಿಯ ಗಂಧ, ಉಜಿರೆಯ ನಿಗೂಢ- ಎಲ್ಲವೂ ವಿಕಾಸ್ ಭಾವಕೋಶದೊಳಗೆ ಸೇರಿಕೊಂಡು ಹೊಚ್ಚಹೊಸ ಕಥಾಜಗತ್ತೊಂದನ್ನು ರೂಪಿಸಿದೆ. ಆ ಜಗತ್ತಿನಲ್ಲಿ ಒಂದು ಹಳೆಯ ಮನೆ, ಎಂದೋ ತಿರುಗಿ ಬರುವ ಅಪ್ಪ ಪ್ರೇಮ ಕೂಡ ಕತೆಯಾಗುವ ವಿಷಾದ, ನೆನಪು ಮತ್ತು ಆಶೆಗಳು ಕಲೆಸಿಕೊಳ್ಳುವ ಪವಾಡ- ಎಲ್ಲವೂ ಜರಗುತ್ತದೆ. ಇಲ್ಲಿನ ಒಂದೊಂದು ಕತೆಗಳನ್ನು ಓದಿದ ನಂತರವೂ ನೀವು ಅಪೂರ್ವರಾಗವೊಂದು ಮೈತುಂಬಿಕೊಂಡ ಹಾಗೆ ಪುಳಕಿತರಾಗದೇ ಹೋದರೆ, ಸೀತಾಲಕ್ಷ್ಮಿ ಪ್ರೀತಿಸಿದ್ದೇ ಸುಳ್ಳು, ದಮಯಂತಿ ಕಾದಿದ್ದೇ ಸುಳ್ಳು.
ಪತ್ರಿಕೋದ್ಯಮದಲ್ಲಿ ಕಳೆದುಹೋಗದಂತೆ ಕಣ್ಣೊಳಗೆ ಬಚ್ಚಿಟ್ಟು ಕೊಂಡ ಲೋಕವೊಂದನ್ನು ಸಂಕೋಚದ ಕತೆಗಾರ, ಸಂಯಮದ ಓದುಗ ವಿಕಾಸ್ ಇಲ್ಲಿ ಅನಾವರಣಗೊಳಿಸಿದ್ದಾರೆ. ಮೋಟುಮರಕ್ಕೆ -ಫಕ್ಕನೆ ಮೂಡಿದ ಚಿಗುರಿನ ಮೇಲೆ ಹಾದಿತಪ್ಪಿ ಬಂದು ಕೂತ ಚಿಟ್ಟೆಯ ಹಾಗೆ ಈ ಕತೆಗಳು ನಮ್ಮನ್ನು ಪುಳಕಗೊಳಿಸುತ್ತವೆ.
-ಜೋಗಿ
Share
ಮಳೆಗಾಲ ಬಂತು ಬಾಗಿಲು ತಟ್ಟಿತು
Subscribe to our emails
Subscribe to our mailing list for insider news, product launches, and more.