Dr. C. R. Chandrashekar
ಮೈಮನಸ್ಸಿನ ಆರೋಗ್ಯದೀಪ
ಮೈಮನಸ್ಸಿನ ಆರೋಗ್ಯದೀಪ
Publisher - ಡಿ.ವಿ.ಕೆ ಮೂರ್ತಿ
Regular price
Rs. 120.00
Regular price
Sale price
Rs. 120.00
Unit price
/
per
- Free Shipping Above ₹250
- Cash on Delivery (COD) Available
Pages -
Type -
ಈಗ ನಮ್ಮ ಸಮಾಜದಲ್ಲಿ ಆರೋಗ್ಯವಂತರಿಗಿಂತ ಅನಾರೋಗ್ಯವಂತರೇ ಹೆಚ್ಚಾಗುತ್ತಿದ್ದಾರೆ. ಪ್ರತಿಯೊಂದು ಮನೆಯಲ್ಲಿ, ಒಂದಲ್ಲ ಒಂದು ಅಸ್ವಸ್ಥತೆ ಇರುತ್ತದೆ. ಅದು ಡಯಾಬಿಟಿಸ್, ಬಿಪಿ, ಅಸ್ತಮಾ, ಕೀಲುನೋವು, ಪದೇಪದೇ ಬರುವ ಮೈಗ್ರೇನ್ ತಲೆನೋವು, ಅಸಿಡಿಟಿ, ಅಲ್ಸರ್, ಖಿನ್ನತೆ, ಆತಂಕದ ಮನೋಬೇನೆ, ಅನೀಮಿಯಾ, ಥೈರಾಯಿಡ್ ಕೊರತೆ ಇತ್ಯಾದಿ ಇತ್ಯಾದಿ. ಈ ಕಾಯಿಲೆಗಳು ಬಂದಾಗ ನಾವು ಚಿಂತಿತರಾಗುತ್ತೇವೆ. ನಮಗೇಕೆ ಕಾಯಿಲೆ ಬಂತು ಎಂದು ಬೇಸರಪಟ್ಟು ಕೊಳ್ಳುತ್ತೇವೆ. ನೂರಕ್ಕೆ ೮೦ರಷ್ಟು ರೋಗಗಳನ್ನು ನಾವೇ ಸಂಪಾದಿಸುತ್ತೇವೆ. ಅನಾರೋಗ್ಯಕರ ಜೀವನಶೈಲಿಯಿಂದ ಹಾಗೂ ಮಾನಸಿಕ ಒತ್ತಡದಿಂದ ಹೆಚ್ಚಿನ ಕಾಯಿಲೆಗಳು ಬರುತ್ತವೆ ಎಂಬುದು ಈಗ ಸ್ಪಷ್ಟವಾಗಿ ನಿರೂಪಿತವಾಗಿದೆ. ಮನಸ್ಸು ಪ್ರಶಾಂತವಾಗಿದ್ದರೆ ಆರೋಗ್ಯ, ಮನಸು ಪ್ರಕ್ಷುಬ್ಧವಾಗಿದ್ದರೆ ಅನಾರೋಗ್ಯ, ಮಾನಸಿಕ ಆರೋಗ್ಯ, ವ್ಯಕ್ತಿಯ ಆರೋಗ್ಯಕ್ಕೆ ಬುನಾದಿ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಘೋಷಿಸಿದೆ.
ನಮ್ಮ ಪ್ರಾಥಮಿಕ ಕೆಲಸಗಳಾದ ಹಸಿವು, ನಿದ್ರೆಯ ಬಗ್ಗೆ, ಭಾವನೆಗಳಾದ ದುಃಖ, ಭಯ, ಕೋಪ, ಮತ್ಸರಗಳ ಬಗ್ಗೆ, ವಿವಿಧ ಮಾನಸಿಕ ಕಾಯಿಲೆಗಳ ವಿಚಾರವಾಗಿ, ಮಕ್ಕಳು, ಮಹಿಳೆಯರು ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ, ಕಾಯಿಲೆಗಳ ಕಾರಣಗಳು, ತಪಾಸಣೆಯ ಮಹತ್ವ, ಟಾನಿಕ್, ನೋವಿನ ಮಾತ್ರೆಗಳ ಬಗ್ಗೆ, ಅಪರಾಧಪ್ರವೃತ್ತಿ, ಸಲಿಂಗ ಕಾಮ, ಆಲ್ಕೋಹಾಲ್ ಸೇವನೆಯ ಬಗ್ಗೆ, ಮನಸ್ಸಿನ ಪ್ರಸನ್ನತೆಯಬಗ್ಗೆ ಲೇಖನಗಳಿದ್ದು ನಿಮ್ಮ ಅರಿವನ್ನು ಹೆಚ್ಚಿಸಲಿವೆ.
ಡಿ.ಎ.ಕೆ. ಮೂರ್ತಿ ಪ್ರಕಾಶನ ಮೈಸೂರು

Share
Subscribe to our emails
Subscribe to our mailing list for insider news, product launches, and more.