Pro. H. T. Pothe
ಮಹಾಬಿಂದು
ಮಹಾಬಿಂದು
Publisher - ಅಂಕಿತ ಪುಸ್ತಕ
Regular price
Rs. 195.00
Regular price
Rs. 195.00
Sale price
Rs. 195.00
Unit price
/
per
- Free Shipping Above ₹250
- Cash on Delivery (COD) Available
Pages -
Type -
ಸಾಹಿತ್ಯಕೃತಿಗಳು ಅನಾದಿಕಾಲದಿಂದಲೂ ಮಾನವೀಯ ಸಂಬಂಧದ ನೆಲೆಗಳನ್ನು ಹುಡುಕುತ್ತಿವೆ. ಈ ನೆಲೆ-ಬೆಲೆಗಳ ಹುಡುಕಾಟದಲ್ಲಿ ಅವು ಸದಾ ಮಗ್ನವಾಗಿವೆ. ಪ್ರೊ.ಎಚ್.ಐ.ಪೋತೆ ಹಿಂದಿನ ಕಥನಗಳ ನೇಯ್ಗೆಯನ್ನು ಬಳಸಿಕೊಂಡು ಇಂದಿನ ಮಾನವೀಯ ಸಂಬಂಧಗಳನ್ನು ಅನ್ವೇಷಿಸುತ್ತಿದ್ದಾರೆ. ಇಂಥ ಸಂಬಂಧಗಳ ಸೂಕ್ಷ್ಮ ಹುಡುಕಾಟದ ಫಲವೇ 'ಮಹಾಬಿಂದು' ಕಾದಂಬರಿ. ಪ್ರೊ. ಪೋತೆ ಜಾನಪದ ಸಾಹಿತ್ಯ, ಶಿಷ್ಟ ಸಾಹಿತ್ಯ, ವಿಚಾರ ಸಾಹಿತ್ಯ ಮುಂತಾದ ಹಲವು ನೆಲೆಗಳಿಂದ ಹೊರಟವರು. ಪ್ರಥಮವಾಗಿ ಇವರು ವೈಚಾರಿಕ ಪ್ರತ್ಯಭಿಜ್ಞರು. ಈ ಪ್ರವೃತ್ತಿಯು ಸೃಜನಶೀಲತೆಯ ಬೆನ್ನನ್ನು ಏರಿದಾಗ “ಮಹಾಬಿಂದು'ವಿನಂಥ ಕೃತಿ ಹೊರಬರಲು ಸಾಧ್ಯ. ಈ ಮಾತಿಗೆ ಪ್ರಸ್ತುತ ಕೃತಿಯೇ ಸಾಕ್ಷಿ. ವರ್ತಮಾನದ ಕೊರೊನ' ಪಿಡುಗು ಒಂದು ಸೃಜನಶೀಲ ರೂಪಕದ ನೇಯ್ಕೆಯಾಗಿದೆ. ಬುದ್ಧನ ಕಾಲದಿಂದ ಹಿಡಿದು ಈ ಕಾಲದ ಅಂಬೇಡ್ಕರ್‌ವರೆಗೆ ಬಿಡಿಬಿಡಿ ಕಥನಗಳೆಲ್ಲವೂ ಕಾದಂಬರಿಯ ಸೂಕ್ಷ್ಮಹೆಣಿಗೆಯಲ್ಲಿ ಪಡಿಮೂಡಿಸಿಗೊಂಡಿವೆ. ಹೀಗಾಗಿ, ಇದೊಂದು ಹೊಸ ಬಗೆಯ ಪ್ರಯತ್ನವಾಗಿದೆ. ಹುಡುಕಾಟವೇನೊ ಹಳೆಯದು. ಆದರೆ, ನೋಡುವ ಕಣ್ಣು ಮಾತ್ರ ಇಂದಿನದು. ವೈಚಾರಿಕ ಸಂಕಥನ ಮತ್ತು ಸೃಜನಶೀಲ ಸಂವೇದನೆಯ ಜೋಡು ಹೆಣಿಗೆಯಾಗಿ 'ಮಹಾಬಿಂದು' ನಿಮ್ಮ ಮುಂದಿದೆ.
ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ
ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ
Share
Subscribe to our emails
Subscribe to our mailing list for insider news, product launches, and more.