Skip to product information
1 of 2

B. Padmanabha Somayaji

ಮಹಾಕವಿ ಕಾಳಿದಾಸ

ಮಹಾಕವಿ ಕಾಳಿದಾಸ

Publisher -

Regular price Rs. 250.00
Regular price Rs. 250.00 Sale price Rs. 250.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 270

Type - Paperback

ಕಾಳಿದಾಸನ ಕೃತಿಗಳಲ್ಲಿ ಅವನ ವೈಯುಕ್ತಿಕ ಬದುಕು

ಮಹಾಕವಿ ಕಾಳಿದಾಸ ಜಗತ್ಪ್ರಸಿದ್ಧ. ಆದರೂ ಈತನ ಬಗ್ಗೆ ನಮಗೆ ಅಷ್ಟೇನೂ ತಿಳಿದಿಲ್ಲ. ಅವನ ಕಾವ್ಯಗಳು ಹಾಗೂ ನಾಟಕಗಳು ಇಂದಿಗೂ ಓದುಗರನ್ನು ಮಂತ್ರಮುಗ್ಧರನ್ನಾಗಿಸುತ್ತವೆ. ಮೇಘದೂತವನ್ನು ಓದುತ್ತಿರುವಂತೆಯೇ ಓದುಗನು ತನ್ನ ಪ್ರಣಯದ ನೋವು- ನಲಿವನ್ನು, ವಿರಹ ವೇದನೆಯನ್ನು ಹೇಳಿಕೊಳ್ಳಲಾಗದ ಹಿಂಸೆಯನ್ನು ನೆನೆಸಿಕೊಂಡರೆ ಆಶ್ಚರ್ಯವಿಲ್ಲ. ಕಾಳಿದಾಸನು ತಾನು ಅನುಭವಿಸುವ ವಿರಹವನ್ನೇ ಕಾವ್ಯ ರೂಪದಲ್ಲಿ ಬರೆದನೆ? ಅವನೇಕೆ ವಿರಹಿಯಾದ? ಅವನ ಪ್ರೇಯಸಿ ಯಾರು? ಯಾವ ಊರಿನವಳು? ಏಕೆ ಕಾಳಿದಾಸನನ್ನು ತೊರೆದಳು? ನಾವು ಪ್ರಶ್ನೆಯನ್ನು ಕೇಳಬಹುದೇ ಹೊರತು.. ಉತ್ತರವನ್ನು ಮಾತ್ರ ತಿಳಿಯಲು ಸಾಧ್ಯವಿಲ್ಲ. ಏಕೆಂದರೆ ಆತನ ವೈಯಕ್ತಿಕ ಬದುಕಿನ ಬಗ್ಗೆ ನಮಗೆ ಅಷ್ಟು ತಿಳಿದಿಲ್ಲ. ಕಾಳಿದಾಸನ ಬಗ್ಗೆ ದಂತಕಥೆಗಳು ಹಲವಾರು. ಅಂತಹ ದಂತಕಥೆಗಳಲ್ಲಿ ಒಂದನ್ನು ಆಧರಿಸಿ ಕನ್ನಡ, ತೆಲುಗು, ತಮಿಳು ಮುಂತಾದ ಭಾಷೆಗಳಲ್ಲಿ ನಿರ್ಮಾಣವಾದ ಚಲನಚಿತ್ರಗಳು ಕಾಳಿದಾಸನ ವಾಸ್ತವ ಬದುಕನ್ನು ಮರೆಮಾಡಿವೆ ಎಂದರೆ ಅದು ತಪ್ಪಾಗಲಾರದು. ದಡ್ಡ ಕುರುಬನನ್ನು ರಾಜಕುಮಾರಿಯು ಮದುವೆಯಾದದ್ದು, ರಾಜಕುಮಾರಿಯು ಕಾಳಿಯನ್ನು ಪ್ರಾರ್ಥಿಸುವಂತೆ ಸೂಚಿಸಿದ್ದು, ಕಾಳಿಯು ಸಾಹಿತ್ಯ-ಸಂಸ್ಕೃತಿಯ ವರವನ್ನು ನೀಡಿದ್ದು, ನಂತರ ಅವನು ಕಾಳಿದಾಸನಾಗಿ ಕಾವ್ಯ ನಾಟಕಾದಿಗಳನ್ನು ಬರೆದದ್ದು - ಈ ಕಥೆಯು ಜನಮಾನಸದಲ್ಲಿ ಅಚ್ಚಳಿಯದಂತೆ ನಿಂತಿದೆ. ಈ ಕಥನವನ್ನು ಜನಸಾಮಾನ್ಯರು ಆಸ್ವಾದಿಸಬಹುದಾದರೂ, ಕಾಳಿದಾಸನ ಕೃತಿಗಳನ್ನು ಓದಿದವರು ಈ ವಿಚಾರವನ್ನು ಒಪ್ಪಲಾರರು.

ಹಾಗಿದ್ದ ಮೇಲೆ ಕಾಳಿದಾಸನು ಯಾರು?
ಈ ರೋಚಕ ವಿಷಯವನ್ನು ಕೇಂದ್ರವನ್ನಾಗಿ ಇಟ್ಟುಕೊಂಡು ಕಾದಂಬರಿಯನ್ನು ಬರೆದವರು ವಿದ್ವಾನ್ ಬಂಟ್ವಾಳ ಪದ್ಮನಾಭ ಸೋಮಯಾಜಿಯವರು (1917-1977). ಸೋಮಯಾಜಿಯವರು ಸಂಸ್ಕೃತ ಮತ್ತು ಕನ್ನಡದಲ್ಲಿ ವಿದ್ವತ್ ಪರೀಕ್ಷೆಯನ್ನು ಪೂರ್ಣಗೊಳಿಸಿದವರು. ತಮ್ಮ ಸಾಧನೆಗಾಗಿ ಸ್ವಯಂ ಜಯಚಾಮರಾಜೇಂದ್ರ ಒಡೆಯರ್ ಅವರ ಕೈಯಿಂದ ಚಿನ್ನದ ಪದಕವನ್ನು ಪಡೆದವರು. ವಿದ್ಯಾರ್ಥಿಯಾಗಿದ್ದಾಗಲೇ ಕಾಳಿದಾಸನನ್ನು ಓದಿಕೊಂಡು ಅವನ ಜೀವನ ಚರಿತ್ರೆಯ ಬಗ್ಗೆ ಅಪಾರ ಕುತೂಹಲವನ್ನು ತಳೆದವರು. ಅವರು ತಮ್ಮದೇ ಆದ ಸಂಶೋಧನೆ, ಚಿಂತನ ಮತ್ತು ಮಂಥನಗಳನ್ನು ನಡೆಸಿ ಮಹಾಕವಿ ಕಾಳಿದಾಸ' ಎನ್ನುವ ಕಾದಂಬರಿಯನ್ನು ಬರೆದಿರುವರು. ಸೋಮಯಾಜಿಯವರು ಕಾಳಿದಾಸನ ಬದುಕಿನ ಸೂಕ್ಷ್ಮಗಳನ್ನು ಅವನ ಕೃತಿಗಳಲ್ಲಿಯೇ ಹುಡುಕಿದ್ದಾರೆ. ಅವುಗಳನ್ನಾದರಿಸಿ, ಒಂದಷ್ಟು ತಾರ್ಕಿಕ ಕಲ್ಪನೆಯನ್ನು ಬೆರೆಸಿ ಈ ಕಾದಂಬರಿಯನ್ನು ಬರೆದಿದ್ದಾರೆ. ಕಾಳಿದಾಸನ ಬದುಕಿನ ಬಗ್ಗೆ ಸೋಮಯಾಜಿಯವರು ಏನು ಹೊಸ ಹೊಳಹುಗಳನ್ನು ನೀಡಿದ್ದಾರೆ ಎನ್ನುವುದನ್ನು ತಿಳಿಯುವ ಸುಖ ನಿಮ್ಮದಾಗಲಿ.

-ಡಾ| ನಾ. ಸೋಮೇಶ್ವರ

 

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)