Skip to product information
1 of 2

Shreedhara Balagaara

ಮಾರ ಮಿಂದನು

ಮಾರ ಮಿಂದನು

Publisher -

Regular price Rs. 200.00
Regular price Rs. 200.00 Sale price Rs. 200.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 160

Type - Paperback

ಬದುಕನ್ನು ಕುರಿತು ಯಾವುದೇ ಸರಳ ಸಾಮಾನ್ಯಿಕೃತ ಬೀಸು ಹೇಳಿಕೆಗಳನ್ನು ಮಾಡದೆ ವ್ಯಕ್ತಿವಿಶಿಷ್ಟ ಚಹರೆಗಳನ್ನುಳ್ಳ ತುಂಬು ಪಾತ್ರಗಳ ಮೂಲಕವೇ ಮನುಷ್ಯಲೋಕದ ಸಂಕೀರ್ಣತೆಗಳನ್ನು ಶೋಧಿಸುವುದು ಶ್ರೀಧರ ಬಳಗಾರ ಅವರ ಕತೆಗಳ ಹೆಚ್ಚಳವಾಗಿದೆ. 'ಮಾರ ಮಿಂದನು' ಸಂಕಲನದಲ್ಲಿ ಬಳಗಾರರ ಪರಿಣತಿ ಪ್ರಬುದ್ಧತೆಗಳು ಹೊಸ ಎತ್ತರಗಳನ್ನು ಮುಟ್ಟಿವೆ. ಮನುಷ್ಯ ಸ್ವಭಾವ ಮತ್ತು ಸಂಬಂಧಗಳಲ್ಲಿನ ನಿಗೂಢತೆಗಳನ್ನು ಅನಾವರಣಗೊಳಿಸುವ ಪ್ರಕ್ರಿಯೆಯಲ್ಲಿಯೇ ಆಯಾ ಪಾತ್ರಗಳು ಜೀವಿಸುವ ಸಾಮಾಜಿಕ, ರಾಜಕೀಯ, ಆರ್ಥಿಕ ಸಂದರ್ಭಗಳಲ್ಲಿರುವ ಕಗ್ಗಂಟುಗಳನ್ನು ಕಾಣಿಸುವ ಮಹತ್ವಾಕಾಂಕ್ಷೆ ಈ ಕತೆಗಳಲ್ಲಿ ಎದ್ದುಕಾಣುವಂತಿದೆ. ಸುಲಭದ ಅವಸರದ ತೀರ್ಮಾನಗಳನ್ನು ಉಸುರದೆ ಎಲ್ಲರನ್ನೂ ಅವರು ಬಯಸದ ವಿಧಿಗಳ ಇಕ್ಕಟ್ಟುಗಳಲ್ಲಿಯೇ ಗಮನಿಸುವ ಮನುಷ್ಯಪ್ರೀತಿ ಇಲ್ಲಿ ಢಾಳಾಗಿ ಹರಿದಿದೆ. ಸಾಧಾರಣರೆಂದು ಮೇಲುನೋಟಕ್ಕೆ ಕಾಣುವ ವ್ಯಕ್ತಿಗಳ  ಅಸಾಧಾರಣತೆಯನ್ನು ಗುರುತಿಸುವ ಅಂತಃಕರಣ ಶ್ರೀಧರ ಬಳಗಾರರ ಕಥನದ ಪ್ರಧಾನ ಅಂಶವಾಗಿದೆ. ನಿರ್ದಿಷ್ಟ ಕಾಲ ದೇಶಗಳಲ್ಲಿ ಆಳವಾಗಿ ಬೇರುಬಿಟ್ಟಿದ್ದರೂ ಸಾರ್ವತ್ರಿಕದೆಡೆಗೆ ತುಯ್ಯುವ ಈ ಕತೆಗಳು ಓದುಗರ ಮನಸ್ಸನ್ನು ಹಲವು ಬಗೆಗಳಲ್ಲಿ ತಟ್ಟುವಂತಿವೆ.

-ಟಿ.ಪಿ. ಅಶೋಕ

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)