Dr. Meenagundi Subrahmanya
Publisher - ನವಕರ್ನಾಟಕ ಪ್ರಕಾಶನ
- Free Shipping
- Cash on Delivery (COD) Available
Couldn't load pickup availability
ಲೇಖಕರ ಭಾಷೆ, ಶೈಲಿ ಹಾಗೂ ವಿಷಯ ಮಂಡನಾ ವಿಧಾನ ಆಕರ್ಷಣೀಯವಾಗಿದೆ. ಪುಸ್ತಕದ ಮೊದಲ ಭಾಗ 'ಮುಗಿಸಿದ ಯುದ್ಧಗಳು' ಬಹಳ ಆಕರ್ಷಣೀಯವಾಗಿದ್ದು, ಸುಲಭವಾಗಿ ಓದಿಕೊಂಡು ಹೋಗುತ್ತದೆ. ಕುತೂಹಲ ಕೆರಳಿಸುವ ವೃತ್ತಾಂತಗಳು ಓದುಗರನ್ನು ಮೆಚ್ಚಿಸುತ್ತದೆ. ಈ ಪುಸ್ತಕ ಕನ್ನಡಕ್ಕೆ ಒಂದು ಉತ್ತಮ ಕೊಡುಗೆ.
-ಡಾ||ಸಿ, ಆರ್. ಚಂದ್ರಶೇಖರ್
ವಿವರಿಸಿರುವ ಶೈಲಿ, ತುಂಬ ಸ್ವಾರಸ್ಯವಾಗಿದ್ದು, ಪುಸ್ತಕವನ್ನು ಕೈಗೆತ್ತಿಕೊಂಡ ನಂತರ ಕೆಳಗಿಡಲು ಮನಸ್ಸು ಬರುವುದಿಲ್ಲ. ನಮ್ಮ ಮನೋರೋಗಿಗಳು ಅಥವಾ ಅವರ ಕುಟುಂಬ ಸದಸ್ಯರು ಈ ಪುಸ್ತಕ ಓದಿದರೆ ಖಂಡಿತವಾಗಿ ನಮ್ಮ ಮೇಲೆ ಅವರು ಹಾಕುವ ಒತ್ತಡ ಸಾಕಷ್ಟು ಕಡಿಮೆ ಆಗುತ್ತದೆ.'
-ಡಾ. ಎಚ್. ಎಸ್. ವೆಂಕಟೇಶ್
'ಮನಸ್ಸು' ಇಲ್ಲದ ಮಾರ್ಗ ಒಂದು ಕಲಾತ್ಮಕ ಕೃತಿ. ಓದುಗ ತಾನೇನು ವೈಜ್ಞಾನಿಕ ಕೃತಿಯನ್ನು ಓದುತ್ತಿದ್ದೇನೋ ಅಥವಾ ಕಾದಂಬರಿಯನ್ನು ಓದುತ್ತಿದ್ದೇನೋ ಎಂದು ಆಶ್ಚರ್ಯಗೊಳ್ಳುತ್ತಾ, ಕಲೆ ಮತ್ತು ವಿಜ್ಞಾನದ ಸಂಗಮದಲ್ಲಿ ಈಜುತ್ತಾ, ಕೆಲವೊಮ್ಮೆ ಹಾಯಾಗಿ ತೇಲುತ್ತಾ , ಆದರೆ ನಿರಂತರವಾಗಿ ತನ್ನ ಬಗ್ಗೆ ಅರಿವನ್ನು ಹೆಚ್ಚಿಸಿಕೊಳ್ಳುತ್ತಾ 'ಮನಸ್ಸು ಇಲ್ಲದ ಮಾರ್ಗವನ್ನು ಮುಗಿಸುತ್ತಾನೆ
-ಡಾ|| ಬಿ. ಕೃಷ್ಣಮೂರ್ತಿ
