Skip to product information
1 of 1

D. N. Shreenath

ಲೂಸ್ ಕ್ಯಾರೆಕ್ಟರ್

ಲೂಸ್ ಕ್ಯಾರೆಕ್ಟರ್

Publisher - ರವೀಂದ್ರ ಪುಸ್ತಕಾಲಯ

Regular price Rs. 180.00
Regular price Rs. 180.00 Sale price Rs. 180.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಇಂಗ್ಲಿಷ್ ಮೂಲಕ ಕನ್ನಡಕ್ಕೆ ಅಗಾಧ ಪ್ರಮಾಣದ ಸಾಹಿತ್ಯ ಅನುವಾದಗೊಳ್ಳುತ್ತಲಿದೆ. ಆದರೆ ಭಾರತೀಯ ಭಾಷೆಗಳ ನಡುವಣ ಅನುವಾದ ತೀರ ಕಡಿಮೆ, ಅನುವಾದಗಳ ಮೂಲಕ ಜರ್ಮನ್, ಜಪಾನ್, ಅಮೆರಿಕಾ, ಚೀನಾ ಮುಂತಾದ ದೇಶಗಳ ಲೇಖಕನೊಬ್ಬ ನಮಗೆ ಆಪ್ತನಾಗುತ್ತಾನೆ. ಆದರೆ ನಮ್ಮ ಭಾರತೀಯ ಭಾಷೆಗಳ ಅನುವಾದಗಳ ಕೊರತೆಯಲ್ಲಿ ಅಸ್ಸಾಮಿ, ಡೋಗ್ರಿ, ಸಿಂಧಿ, ಉರ್ದು ಅಥವಾ ಕೊಂಕಣಿ ಭಾಷೆಗಳ ಲೇಖಕರು ಅಪರಿಚಿತರಾಗಿಯೇ ಉಳಿದುಬಿಡುತ್ತಾರೆ.

ಭಾರತೀಯ ಭಾಷೆಗಳ ಸಾಹಿತ್ಯವನ್ನು ಗಮನಿಸುವುದರಿಂದ ಭಾರತದ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಕ್ಷೇತ್ರಗಳ ಸಮಗ್ರ ದೃಷ್ಟಿಕೋನದ ಪರಿಚಯವಾಗುತ್ತದೆ. ನಮ್ಮ-ನಮ್ಮ ರಾಜ್ಯಗಳ ನಡುವೆ ನೆಲ, ಜಲ, ಭಾಷೆ ಇತ್ಯಾದಿ ಕಾರಣಗಳಿಂದಾಗಿ ವೈಮನಸ್ಸು, ಸಂಘರ್ಷಗಳು ಸಂಭವಿಸುವ ಈ ಕಾಲದಲ್ಲಿ ಭಾರತೀಯ ಸಾಹಿತ್ಯವನ್ನು ಅವಲೋಕಿಸುವುದರಿಂದ ಸಂಕುಚಿತ ಮತ್ತು ಸಂಕೀರ್ಣ ಭಾವನೆಗಳು ಬಾಡಿಹೋಗಲು ಸಾಧ್ಯ. ಭಾರತೀಯ ಭಾಷೆಗಳ ಸಾಹಿತ್ಯವನ್ನು ಗಮನಿಸುವುದರಿಂದ ಒಂದು ರಾಜ್ಯದ ಜನ ಜೀವನದ ಕಷ್ಟ-ಸುಖಗಳು, ನೋವು-ನಲಿವು ಇನ್ನೊಂದು ರಾಜ್ಯದ ಜನರ ಕಷ್ಟ-ಸುಖಗಳು, ನೋವು-ನಲಿವಿಗಿಂತ ಭಿನ್ನವಾಗಿಲ್ಲ ಎಂಬುದು ಮನದಟ್ಟಾಗುತ್ತದೆ. ನಮ್ಮ ಜಾಯಮಾನಕ್ಕಿಂತ ವಿಭಿನ್ನವಾದ ಭಾಷೆಯ ಸಾಹಿತ್ಯವನ್ನು ಗಮನಿಸಿದಾಗ ಸಾಹಿತ್ಯದ ವಿಭಿನ್ನ ಆಯಾಮದ ಪರಿಚಯವೂ ಆಗುತ್ತದೆ. ಇದರಿಂದಾಗಿ ಭಾರತ ಹಲವು ಜನಾಂಗ, ಸಂಸ್ಕೃತಿ, ಭಾಷೆ, ಸಮುದಾಯಗಳನ್ನು ಮೇಳೈಸಿಕೊಂಡಿರುವ ಒಂದು ಜೀವಂತ ಶರೀರ ಎನ್ನುವುದು ತಿಳಿಯುತ್ತದೆ. ಭಾರತೀಯ ಸಾಹಿತ್ಯ ಒಂದೇ, ಅವುಗಳನ್ನು ಬೇರೆ-ಬೇರೆ ಭಾಷೆಗಳಲ್ಲಿ ರಚಿಸಲಾಗಿದೆ ಎಂದು ನೆಹರೂರವರು ಹೇಳಿದ್ದು ಇಲ್ಲಿ ಉಲ್ಲೇಖನೀಯ.

ಈ ಕಥಾ ಸಂಕಲನದಲ್ಲಿ ಭಾರತದ ೨೦ ಭಾಷೆಗಳ ಹೆಸರಾಂತ ಕಥೆಗಾರರ ೨೦ ಕಥೆಗಳಿವೆ. ಕನ್ನಡ ಮತ್ತು ಹಿಂದಿಯಲ್ಲಿ ಪರಸ್ಪರ ಅನುವಾದವನ್ನು ನಿರಂತರವಾಗಿ ಮಾಡುತ್ತಿರುವ, ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಪ್ರಶಸ್ತಿ, ಕೇಂದ್ರೀಯ ಹಿಂದಿ ನಿರ್ದೆಶನಾಲಯ, ಭಾರತ ಸರ್ಕಾರದ ಅನುವಾದ ಪ್ರಶಸ್ತಿ, ಉತ್ತರ ಪ್ರದೇಶ ಹಿಂದಿ ಸಂಸ್ಥಾನದ ಸೌಹಾರ್ದ ಸಮ್ಮಾನ್ ಪ್ರಶಸ್ತಿ ಮುಂತಾದ ಪ್ರತಿಷ್ಠಿತ ಪುರಸ್ಕಾರಗಳಿಗೆ ಭಾಜನರಾದ ಡಿ.ಎನ್‌. ಶ್ರೀನಾಥರು ತಮ್ಮ ಸತತ ಶ್ರಮದಿಂದ ಈ ಮಹತ್ವದ ಕಥಾ ಸಂಕಲನವನ್ನು ಕನ್ನಡಕ್ಕೆ ಕೊಟ್ಟಿದ್ದಾರೆ.

-ಪ್ರಕಾಶಕರು,
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)