Dr. C. G. Lakshmipati
ಲೋಕದೃಷ್ಟಿ
ಲೋಕದೃಷ್ಟಿ
Publisher -
- Free Shipping Above ₹250
- Cash on Delivery (COD) Available
Pages - 284
Type - Paperback
ಇಪ್ಪತ್ತನೆಯ ಶತಮಾನದ ಆರಂಭದಿಂದ ಹಿಡಿದು ಇಂದಿನವರೆಗೆ ಕನ್ನಡವನ್ನು ಜ್ಞಾನದ ಭಾಷೆಯನ್ನಾಗಿಸುವ ಪ್ರಯತ್ನಗಳು ನಮ್ಮ ನಾಡಿನಲ್ಲಿ ನಿರಂತರವಾಗಿ ನಡೆದು ಬಂದಿವೆ. 20ನೆಯ ಶತಮಾನದಲ್ಲಿ ತಮ್ಮ ಅಮೂಲ್ಯ ಚಿಂತನೆಗಳಿಂದ ಲೋಕದ ತಿಳುವಳಿಕೆಯನ್ನು ವಿಸ್ತರಿಸಿದ ಜಗತ್ತಿನ ಆಯ್ದ ಸಾಮಾಜಿಕ ಚಿಂತನೆಯನ್ನು ಸಂಕ್ಷಿಪ್ತವಾಗಿ ಕನ್ನಡದಲ್ಲಿ ಪರಿಚಯಿಸುವ ಪುಸ್ತಕವನ್ನು ನಮ್ಮ ನಡುವಿನ ಜನಪರ ಸಮಾಜಶಾಸ್ತ್ರಜ್ಞರಾಗಿರುವ ಡಾ. ಸಿ. ಜಿ. ಲಕ್ಷ್ಮೀಪತಿಯವರು ರೂಪಿಸಿದ್ದಾರೆ. ಈ ಕೃತಿಯು ಸಾಹಿತ್ಯ ಮತ್ತು ಮಾನವಿಕ ಜ್ಞಾನ ಶಾಖೆಗಳ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಒಂದು ಉಪಯುಕ್ತ ಆಕರವಾಗಿದೆ. ಈ ಶ್ರೇಷ್ಠ ಚಿಂತಕರ ಹೆಸರುಗಳು ನಮ್ಮ ಸಾಹಿತ್ಯ ಮತ್ತು ಸಮಾಜ ವಿಜ್ಞಾನದ ಭಾಗವಾಗಿವೆ. ಆದರೂ ಇವರ ಚಿಂತನೆಗಳು ಕನ್ನಡ ನುಡಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಲಭ್ಯವಿಲ್ಲದಿರುವುದು ವಾಸ್ತವದ ಸಂಗತಿಯಾಗಿದೆ. ಈ ಕೃತಿಯು ಜಗತ್ ಚಿಂತಕರ ವೈಚಾರಿಕ ಲೋಕಕ್ಕೆ ಉತ್ತಮ ಪ್ರವೇಶಿಕೆಯಾಗಿದೆ. ಲೋಕ ಚಿಂತಕರ ವ್ಯಕ್ತಿತ್ವದ ಹಿನ್ನೆಲೆ ಚಾರಿತ್ರಿಕ ಸಂದರ್ಭ ಮತ್ತು ಸಿದ್ಧಾಂತಗಳನ್ನು ಪ್ರಸ್ವಗೊಳಿಸಿ ನಿರೂಪಿಸಲಾಗಿದೆ. ಅಧಿಕಾರ ಮತ್ತು ಅಧೀನತೆ, ಮಾನವ ಜ್ಞಾನದ ವಿಕಾಸ, ತರತಮಗಳ ನಿರ್ವಹಣೆ, ಅಂತರ್ಗತ ಒಳನೋಟ, ಒಳತೋಟಿ, ಮುಕ್ತ ಮಾರುಕಟ್ಟೆ ಮತ್ತು ಪ್ರಭುತ್ವದ ಸಂಬಂಧ ಪ್ರತಿಯೊಬ್ಬರ ಮೇಲು ಕಣ್ಣಾವಲು ಮತ್ತು ಆಧುನಿಕತೆಯ ಬಿಕ್ಕಟ್ಟನ್ನು ಈ ಚಿಂತನೆಗಳು ತೆರೆದಿಟ್ಟಿವೆ. ಮಾರ್ಕ್ಸ್ ವಾದೋತ್ತರ ಮತ್ತು ಆಧುನಿಕೋತ್ತರ ಚಿಂತಕರನ್ನು ಓದುಗರಿಗೆ ಪರಿಚಯಿಸುವ ಬೌದ್ಧಿಕ ಹೊಣೆಯನ್ನು ಲಕ್ಷ್ಮೀಪತಿ ಶ್ರದ್ಧೆಯಿಂದ ನಿಭಾಯಿಸಿದ್ದಾರೆ. ವಿಚಾರಗಳನ್ನು ಸರಳವಾಗಿ ಮತ್ತು ಕನ್ನಡತನಕ್ಕೆ ಅರ್ಥ ಪೆಡಸಾಗದಂತೆ ನಿರೂಪಿಸಿರುವುದು ಈ ಹೊತ್ತಿಗೆಯ ಹೆಚ್ಚುಗಾರಿಕೆ.
-ಕೆ. ವೈ. ನಾರಾಯಣಸ್ವಾಮಿ
ಕನ್ನಡದ ಖ್ಯಾತ ನಾಟಕಕಾರರು ಮತ್ತು ಕವಿ
Share
Subscribe to our emails
Subscribe to our mailing list for insider news, product launches, and more.