Raveendra Vemshi
ಲೈಫ್ ಸಖತಾಗಿತ್ತು ಕಣ್ರೀ
ಲೈಫ್ ಸಖತಾಗಿತ್ತು ಕಣ್ರೀ
Publisher - ವೀರಲೋಕ ಬುಕ್ಸ್
- Free Shipping Above ₹250
- Cash on Delivery (COD) Available
Pages - 116
Type - Paperback
ರವೀಂದ್ರ ವೆಂಶಿಯವರ ಲೈಫ್ ಸಖತಾಗಿತ್ತು ಕಣ್ರೀ ಪುಸ್ತಕದಲ್ಲಿನ ಬರಹಗಳನ್ನು ಓದಿದ ಮೇಲೆ ನನ್ನ ಬಾಲ್ಯದ ಹಲವಾರು ಘಟನೆಗಳು ನೆನಪಾದದ್ದು ಸತ್ಯ. ಓದುವಾಗ ನನಗೆ ಇದು ಕಥೆಯಾ..? ಆತ್ಮಚರಿತ್ರೆಯಾ..? ಸುಲಲಿತ ಪ್ರಬಂಧವಾ..? ಎನ್ನುವ ಪ್ರಶ್ನೆ ಕಾಡುತ್ತಲೇ ಓದಿಸಿಕೊಂಡಿತು. ಓದಿಯಾದ ಮೇಲೆ ನನಗನ್ನಿಸಿದ್ದು ಇದು ಎಲ್ಲವೂ ಹೌದು ಎಂದು.
ಭಾಗ-1ರಲ್ಲಿನ ಬರಹಗಳಲ್ಲಿ ತಿಳಿ ಹಾಸ್ಯದ ಮೂಲಕ ಘಟನೆಗಳನ್ನು ಕಟ್ಟಿಕೊಡುತ್ತಾ ನಿಧಾನಕ್ಕೆ ನಮ್ಮನ್ನು ಬರಹದೊಳಕ್ಕೆ ಸೆಳೆದುಕೊಂಡು ಬಿಡುತ್ತಾರೆ ಲೇಖಕರು. ಇಸ್ತ್ರೀಪೆಟ್ಟಿಗೆಯ ಪ್ರಸಂಗ, ಹೇರ್ ಕಟ್ ಸುತ್ತಲಿನ ವೃತ್ತಾಂತಗಳು, ಸಿನಿಮಾಗಳನ್ನು ಟೆಂಟ್ ನಲ್ಲಿ ನೋಡುವ ಸೊಬಗು - ಇವುಗಳನ್ನು ಲಘುಹಾಸ್ಯಮಯವಾಗಿ ಬರೆಯುತ್ತಾ, ಕಲಿಸಿದ್ದು ಕಲಿತದ್ದು ಲೇಖನದ ಮೂಲಕ ಚಿಂತನೆಗೆ ದೂಡುತ್ತಾರೆ.
ಭಾಗ-2 ರಲ್ಲಿ ಕತೆಗಳ ಸ್ವರೂಪದಲ್ಲಿ ಬದುಕನ್ನು ತೆರೆದಿಡುತ್ತಾರೆ. ಒಂದೊಂದು ಕತೆಯೂ ಬೇರೆ ಬೇರೆಯದೇ ಆದ ದ್ರವ್ಯ, ನಿರೂಪಣೆ ಮತ್ತು ಭಾಷೆಯನ್ನು ಹೊಂದಿರುವುದು ರವೀಂದ್ರ ವೆಂಶಿಯವರ ವಿಶೇಷವೆನಿಸುವ ವಸ್ತುಗ್ರಹಿಕೆ ಮತ್ತು ಕತೆಯ ಕಟ್ಟುವಿಕೆಗೆ ಹಿಡಿದ ಕೈಗನ್ನಡಿ ಎನ್ನಬಹುದು.
ಸರಳವಾದ, ಅರ್ಥಪೂರ್ಣವಾದ, ನಮ್ಮದೇ ಬದುಕಿನ ಸನ್ನಿವೇಶಗಳು ಎನ್ನುವ ಆತ್ಮೀಯತೆ ಬೆಳೆಸುವ ಬರವಣಿಗೆಯ ಈ ಹೊತ್ತಗೆ ಪ್ರತಿಯೊಬ್ಬರೂ ಓದಲೇಬೇಕಾದದ್ದಾಗಿದೆ.
-ಬಿ.ಎಸ್. ಚಂದ್ರಶೇಖರ್
ಚಲನಚಿತ್ರ ನಿರ್ಮಾಪಕರು - ಸ್ವರ್ಣಗಂಗಾ ಫಿಲ್ಡ್
Share
Subscribe to our emails
Subscribe to our mailing list for insider news, product launches, and more.