Uday Kumar Habbu
ಕೊನೆಯ ಮುಘಲ್ ಸಾಮ್ರಾಟನ ಅಂತಿಮ ದಿನಗಳು
ಕೊನೆಯ ಮುಘಲ್ ಸಾಮ್ರಾಟನ ಅಂತಿಮ ದಿನಗಳು
Publisher -
- Free Shipping Above ₹250
- Cash on Delivery (COD) Available
Pages -
Type -
ಈ ಮೊದಲು ದಾರಾ ಶುಕೋಹನ ಕುರಿತಾದ ಅಪೂರ್ವ ಐತಿಹಾಸಿಕ ಕಾದಂಬರಿಯ ಸಹಿತ ಅನೇಕ ಕಾದಂಬರಿಗಳನ್ನು, ಅನುವಾದ ಗ್ರಂಥಗಳನ್ನು ತಾತ್ವಿಕ ವಿಚಾರ ವಿರ್ಮಶೆಯ ಕೃತಿಗಳನ್ನು ನೀಡಿರುವ ಹಿರಿಯ ಸಾಹಿತಿ, ನಿವೃತ್ತ ಪ್ರಾಧ್ಯಾಪಕ ಶ್ರೀ ಉದಯಕುಮಾರ ಹಬ್ಬು ಅವರು ನಿರಂತರ ಅಧ್ಯಯನಶೀಲರು, ಇದೀಗ ಅವರು ೧೮೫೭ರ ಮಹಾಬಂಡಾಯದ ಹಿನ್ನೆಲೆಯಲ್ಲಿ ಕೊನೆಯ ಮುಘಲ್ ಬಾದಶಾಹ ಬಹಾದ್ದೂರ್ ಜಾಫರ್ ಶಾ ಅವರ ಬದುಕಿನ ಕೊನೆಯ ದಿನಗಳ ಚಿತ್ರಣವನ್ನು ಕಾದಂಬರಿಯ ರೂಪದಲ್ಲಿ ನೀಡುತ್ತಿದ್ದಾರೆ. ಇತಿಹಾಸದ ವಿಷಯಗಳನ್ನು ಅತ್ಯಂತ ಸೂಕ್ಷ್ಮವಾಗಿ ಮತ್ತು ಆಳವಾಗಿ ಅಭ್ಯಸಿಸಿ ಬರೆಯುವ ಅವರು ಇಲ್ಲಿಯೂ ಮುಘಲ್ ದೊರೆಯ ಬದುಕಿನ ಜೊತೆಗೆ ಆಗಿನ ವಾತಾವರಣ, ಸಮಯ ಸನ್ನಿವೇಶಗಳನ್ನು ಪರಿಣಾಮ ಕಾರಿಯಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಐತಿಹಾಸಿಕ ಸಂಗತಿಗಳನ್ನು ಬರೆಯುವಾಗ ವಾಸ್ತವದ ತಳಹದಿಯ ಮೇಲೆ ಕಾದಂಬರಿ ಸ್ವರೂಪಕ್ಕೆ ಬೇಕಾದ ರೀತಿಯಲ್ಲಿ ಕಾಲ್ಪನಿಕವಾದ ಆದರೆ ಮೂಲ ಅಂಶಗಳಿಗೆ ಧಕ್ಕೆಯಾಗದಂತಹ ಭಾವನ್ಮಾಕ ಅಂಶಗಳನ್ನು ಹೆಣೆಯಬೇಕಾಗುತ್ತದೆ. ಹಬ್ಬು ಅವರ ಅನುಭವ, ಕಾದಂಬರೀಶಿಲ್ಪ ಕಟೆಯುವಲ್ಲಿ ಅವರಿಗಿರುವ ಪರಿಣತಿ, ಪಳಗಿದ ಬರವಣಿಗೆಯ ಶೈಲಿ ಈ ಕೃತಿ ರಚನೆಯಲ್ಲಿ ನೆರವಾಗಿದೆ. ಓದುಗರ ಕುತೂಹಲ ಕೆರಳಿಸುವುದರ ಜೊತೆಗೆ ಅಂದಿನ ಐತಿಹಾಸಿಕ ಮಹಾಬಂಡಾಯದ ಕುರಿತು ಸಾಕಷ್ಟು ಮಾಹಿತಿಗಳನ್ನು ಒದಗಿಸುತ್ತದೆ. ಇಂತಹ ವಿಶಿಷ್ಟ ಕಾದಂಬರಿಯನ್ನು ನೀಡಿರುವ ಉದಯಕುಮಾರ ಹಬ್ಬು ಅವರಿಗೆ ಅಭಿನಂದನೆ ಹೇಳುವುದರೊಡನೆ, ಅವರಿಂದ ಇಂತಹ ಇನ್ನಷ್ಟು ಅಪರೂಪದ ಕೃತಿಗಳು ಕನ್ನಡ ಓದುಗರಿಗೆ ಲಭಿಸುವಂತಾಗಲಿ ಎಂದು ಆಶಿಸುತ್ತೇನೆ.
-ಎಲ್.ಎಸ್. ಶಾಸ್ತ್ರಿ
ಹಿರಿಯ ಸಾಹಿತಿ-ಪತ್ರಕರ್ತ, ಬೆಳಗಾವಿ
Share
Subscribe to our emails
Subscribe to our mailing list for insider news, product launches, and more.