Shivamurthy
Publisher -
Regular price
Rs. 60.00
Regular price
Rs. 60.00
Sale price
Rs. 60.00
Unit price
per
Shipping calculated at checkout.
- Free Shipping
- Cash on Delivery (COD) Available
Pages -
Type -
Couldn't load pickup availability
ಕೊನೆಯ ಜಿಗಿತ
ಹಿಂದಿ ಲೇಖಕ ಶಿವಮೂರ್ತಿಯವರು ಬರೆದಿರುವ 'ಕೊನೆಯ ಜಿಗಿತ' ಕಾದಂಬರಿ ರೈತರ ಸಾವಿನ ಹೆಜ್ಜೆಯ ಹಿಂದಿರುವ ನೋವನ್ನು ಉತ್ತೇಕ್ಷೆಯಿಲ್ಲದಂತೆ ಎಲ್ಲರ ಸೂಕ್ಷ್ಮಗಳಿಗೆ ತಾಗುವಂತೆ ಚಿತ್ರಿಸುತ್ತದೆ. ಇತ್ತೀಚಿನ ದಿನಗಳಲ್ಲಿ ನನ್ನನ್ನು ಅತ್ಯಂತ ಗಾಢವಾಗಿ ಕಾಡಿದ ಕಾದಂಬರಿಗಳಲ್ಲಿ ಕೊನೆಯ ಜಿಗಿತ' ಅತಿ ಮುಖ್ಯವಾದದ್ದು
ದೈಹಿಕವಾಗಿ ಅತಿ ಶಕ್ತಿವಂತನಾದ, ಎಲ್ಲರನ್ನೂ ಸೋಲಿಸಿ ಪದಕಗಳನ್ನು ಗೆದ್ದು ತಂದ ಪೈಲವಾನ ಎಂಬ ರೈತ ಪ್ರತಿ ಹೆಜ್ಜೆಯಲ್ಲೂ ನಲುಗುತ್ತಲೇ ಹೋಗುವ ರೋಚಕ ಕಥೆ ಇದು. ಪೈಲವಾನ ತನ್ನ ಬದುಕಿನ ಮಡಕೆಯ ನೂರು ತೂತುಗಳನ್ನು ಮುಚ್ಚುವ ವ್ಯರ್ಥ ಸಾಹಸ ಮಾಡುತ್ತಾ ಕೊನೆಗೆ ಬದುಕಿನ ಆರ್ಥಿಕ ಸವಾಲುಗಳನ್ನು ಎದುರಿಸಲು ಶಕ್ತಿಯಿಲ್ಲದೆ ಸಾವನ್ನಪ್ಪುವ ಕಥೆ 'ಕೊನೆಯ ಜಿಗಿತದ್ದು.
ಇದು ಪೈಲವಾನನೊಬ್ಬನ ಕಥೆಯಲ್ಲ, ಇಡಿಯ ಭಾರತದ ಗ್ರಾಮ ಜಗತ್ತು ಎದುರಿಸುತ್ತಿರುವ ಆತಂಕಗಳ ಚಿತ್ರಣ. ಒಂದು ವೈಯಕ್ತಿಕ ಸಾವು ಸಾಮೂಹಿಕವಾಗುತ್ತಿರುವಂತೆಯೇ ಅದು ತನ್ನ ಸೂಕ್ಷ್ಮವನ್ನು ಕಳೆದು ಕೊಂಡು ಸಾರ್ವಜನಿಕ ಸುದ್ದಿಯ ರೂಪ ಪಡೆಯುತ್ತದೆ. ಆದರೆ ಶಿವಮೂರ್ತಿಯವರ 'ಕೊನೆಯ ಜಿಗಿತ' ಕಾದಂಬರಿ ವೈಯಕ್ತಿಕ ಸೂಕ್ಷ್ಮವನ್ನು ಕಳೆದುಕೊಳ್ಳದೆ ಗ್ರಾಮ ಭಾರತದ ನೋವಿನಲ್ಲಿ ನಮ್ಮ ಹೃದಯವನ್ನು ಅತ್ಯಂತ ಸಮರ್ಥವಾಗಿ ಮುಟ್ಟುತ್ತದೆ. ನಮ್ಮೆದೆಯಲ್ಲಿ ರೋಷದ ಕಿಡಿಯನ್ನು ಹೊತ್ತಿಸುತ್ತದೆ. ಗಾರ್ಕಿಯ ಕಥೆಗಳನ್ನು ಅನೇಕ ಕಡೆ ನೆನಪಿಸುವ ಶಕ್ತಿ ಈ 'ಕೊನೆಯ ಜಿಗಿತ'ಕ್ಕಿದೆ. ವಿಪರ್ಯಾಸವೆಂದರೆ ಗಾರ್ಕಿಯ ದಿನಗಳಲ್ಲಿ ಹೋರಾಟ ಹುಟ್ಟುತ್ತಿತ್ತು. ಹೋರಾಟ ಚಟುವಟಿಕೆ | ಗಳೆಲ್ಲವೂ ಸತ್ತು ನಿಂತಿರುವ ಇಂದಿನ ಸ್ಥಿತಿಯಲ್ಲಿ ಇಂಥ ಮಹತ್ತರವಾದ ಕಾದಂಬರಿಯನ್ನು ಶಿವಮೂರ್ತಿಯವರು ಬರೆದು ನಮ್ಮೆಲ್ಲರಲ್ಲೂ ಒಂದು ಬಗೆಯ ಅಸಹಾಯಕ ಉದ್ವಿಗ್ನತೆಯನ್ನು ಹುಟ್ಟಿಸುತ್ತಾರೆ.
– ಟಿ. ಎನ್. ಸೀತಾರಾಮ್ ಖ್ಯಾತ ಕಲಾವಿದ, ನಿರ್ದೇಶಕ