English : Joshua Mathew, Kannada : L. G. Meera
ಕೊನೆಯ ಬಿಳಿ ಬೇಟೆಗಾರ
ಕೊನೆಯ ಬಿಳಿ ಬೇಟೆಗಾರ
Publisher -
Regular price
Rs. 395.00
Regular price
Rs. 395.00
Sale price
Rs. 395.00
Unit price
/
per
- Free Shipping Above ₹250
- Cash on Delivery (COD) Available
Pages - 383
Type - Paperback
ವನ್ಯ ಸಾಹಿತ್ಯದಲ್ಲಿ ಹೆಸರಾಂತ ಬೇಟೆಗಾರರಾಗಿದ್ದ ಕೆನ್ನೆತ್ ಅಂಡರ್ಸನ್‌ರವರ ಪುತ್ರನೇ ಡೊನಾಲ್ಡ್ ಆಂಡರ್ಸನ್ (1934-2014). ಬೇಟೆಯ ಕೌಶಲ್ಯದಲ್ಲಿ, ವನ್ಯಜೀವಿಗಳ ವಿನಾಶದಲ್ಲಿ ತಂದೆಯನ್ನೂ ಮೀರಿದ ಮಗ ಅವನ ಕೊನೆಗಾಲದಲ್ಲಿ ಆಸರೆ ಕೊಟ್ಟ ಜೋಷುವಾ ಮ್ಯಾಥ್ಯೂ, ಡೊನಾಲ್ಡ್ ಆಂಡರ್ಸನ್ ಹೇಳಿದ ಅಪಾರ ವನ್ಯ ಅನುಭವಗಳನ್ನೂ ಅವನ ರಸಿಕ ಜೀವಿತದ ರಂಜಿಕ ಘಟನೆಗಳನ್ನೂ ಇಂಗ್ಲಿಷ್‌ನಲ್ಲಿ ದಾಖಲಿಸಿ ಓದುಗರಿಗೆ ಈಗಾಗಲೇ ನೀಡಿದ್ದಾರೆ. ಈಗ ಖ್ಯಾತ ಲೇಖಕಿ ಎಲ್ ಜಿ ಮೀರಾ ಅವರು ಆ ಇಂಗ್ಲಿಷ್ ಕಥನಕ್ಕೆ ಇನ್ನಷ್ಟು ಮೆರುಗು ನೀಡಿ ಅನುವಾದಿಸಿ ಕನ್ನಡದ ಓದುಗರ ಮುಂದೆ ಇಟ್ಟಿದ್ದಾರೆ. ವನ್ಯಾಸಕ್ತ ಓದುಗರಿಗೆ ಈ ಹೊತ್ತಿಗೆಯಲ್ಲಿ ಆಂಡರ್ಸನ್‌ನ ಕಾಡಿನ ಸಾಹಸಗಳ ಬಗ್ಗೆ, ವನ್ಯಜೀವಿಗಳ ಬಗ್ಗೆ, ಹಾಗೂ ಅವುಗಳನ್ನು ದೇಶ ಸ್ವತಂತ್ರವಾಗುವ ಮೊದಲೇ ವಿನಾಶದ ಅಂಚಿಗೆ ತಳ್ಳಿದ ಬೇಟೆಗಾರರ ಬಗ್ಗೆ ರೋಚಕ ವಿವರಗಳು ಸಾಕಷ್ಟು ದೊರೆಯುತ್ತವೆ. ಅಷ್ಟೇ ಮುಖ್ಯವಾಗಿ ದೇಶ ಸ್ವತಂತ್ರವಾಗುತ್ತಿದ್ದಂತೆ ಬದಲಾವಣೆಯ ಬಿರುಗಾಳಿಗೆ ಸಿಲುಕಿದ ಬೆಂಗಳೂರಿನ ಆಂಗ್ಲೋ ಇಂಡಿಯನ್ ಸಮಾಜ ಅತಂತ್ರವಾದ ನೈಜ ಚಿತ್ರಣವೂ ಈ ಕಥಾನಕದಲ್ಲಿ ಸೊಗಸಾಗಿ ಮೂಡಿಬಂದಿದ್ದು, ಒಟ್ಟಾರೆಯಾಗಿ ಕನ್ನಡ ಓದುಗರಿಗೆ ಒಂದು ಹೊಸ ಪ್ರಪಂಚವನ್ನು ತೆರೆದಿಟ್ಟದೆ ಎಂಬುದು ನನ್ನ ಅಭಿಪ್ರಾಯ.
-ಕೆ. ಉಲ್ಲಾಸ ಕಾರಂತ
-ಕೆ. ಉಲ್ಲಾಸ ಕಾರಂತ
Share
P
Prasad Pustakamare ಚೆನ್ನಾಗಿದೆ. ಇಷ್ಟ ಆಯ್ತು.
Subscribe to our emails
Subscribe to our mailing list for insider news, product launches, and more.