Skip to product information
1 of 1

Dr. B. R. Suhas

ಕಿರಿಯರ ಕಥಾಸರಿತ್ಸಾಗರ

ಕಿರಿಯರ ಕಥಾಸರಿತ್ಸಾಗರ

Publisher - ಸಪ್ನ ಬುಕ್ ಹೌಸ್

Regular price Rs. 350.00
Regular price Rs. 350.00 Sale price Rs. 350.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 368

Type - Paperback

ಕಥಾಸರಿತ್ಸಾಗರವು ನಮ್ಮ ದೇಶದ ಪ್ರಾಚೀನ ಅಮೂಲ್ಯ ಗ್ರಂಥಗಳಲ್ಲೊಂದು. ಹನ್ನೊಂದನೆಯ ಶತಮಾನದಲ್ಲಿ ಕಾಶ್ಮೀರದಲ್ಲಿ, ಸೋಮದೇವ ಭಟ್ಟನೆಂಬ  ಮಹಾಕವಿಯಿಂದ ಸಂಸ್ಕೃತದಲ್ಲಿ ರಚಿತವಾದ ಈ ಗ್ರಂಥದ ಅರ್ಥ, ಕಥೆಗಳೆಂಬ ನದಿಗಳು ಸೇರಿ ಆಗಿರುವ ಸಾಗರ ಎಂದು. ನಿಜಕ್ಕೂ ಇದು ವೈವಿಧ್ಯಮಯವಾದ ಅನೇಕ ಕಥೆಗಳ ಬೃಹತ್ ಆಗರವೇ ಹೌದು. ಹದಿನೆಂಟು ಲಂಬಕಗಳೆಂಬ ಭಾಗಗಳಾಗಿ ವಿಭಾಗಿಸಲ್ಪಟ್ಟು, ಇಪ್ಪತ್ತೆರಡು ಸಾವಿರ ಶ್ಲೋಕಗಳನ್ನುಳ್ಳ ಈ ಗ್ರಂಥ ಒಂದು ದೊಡ್ಡ ಪದ್ಯಕಾವ್ಯ. ಗುಣಾಡ್ಯನೆಂಬ ಮಹಾಕವಿಯು ಪೈಶಾಚೀಪ್ರಾಕೃತವೆಂಬ ಭಾಷೆಯಲ್ಲಿ ರಚಿಸಿದ ಬೃಹತ್ಕಥೆಯೆಂಬ ದೊಡ್ಡ ಕಥಾಗ್ರಂಥದ ಸಂಸ್ಕೃತ ರೂಪಾಂತರವಿದು. ಇಂದು ಲಭ್ಯವಿಲ್ಲದ ಬೃಹತ್ಕಥೆಯನ್ನು ಸಾಕ್ಷಾತ್ ಶಿವನೇ ಪಾರ್ವತಿಗೆ ಹೇಳಿದನೆಂದು ಹೇಳಲಾಗಿದೆ.  ಬೃಹತ್ಕಥೆಯು, ಅರೇಬಿಯನ್ ನೈಟ್ಸ್ನಂಥನಂಥ ಕಥಾಗ್ರಂಥಗಳೂ ಸೇರಿದಂತೆ ಎಲ್ಲ ಲೋಕಕಥೆ ಅಥವಾ ಜಾನಪದ ಕಲೆಗಳಿಗೆ ಮೂಲವಾಗಿದೆ. ಅಂತೆಯೇ, ಇದರ ಸಂಸ್ಕೃತ ರೂಪಾಂತರವಾದ ಕಥಾಸರಿತ್ಸಾಗರದಲ್ಲಿ ರಾಜಕುಮಾರ, ರಾಜಕುಮಾರಿಯರ, ಪ್ರೇಮಿಗಳ, ಬುದ್ಧಿವಂತರ, ಮೂರ್ಖರ, ಕಳ್ಳರ, ಮೋಸಗಾರರ, ಮಂತ್ರವಾದಿಗಳ, ಪಶುಪಕ್ಷಿಗಳ, ಯಕ್ಷರಾಕ್ಷಸರ, ನೀತಿವಂತರ, ಮೊದಲಾದ ಬಗೆಬಗೆಯ ಸ್ವಾರಸ್ಯಕರವಾದ ಕಥೆಗಳಿವೆ. ಪಂಚತಂತ್ರ, ಬೇತಾಳ ಕಥೆಗಳಿಗೂ ಇದೇ ಆಧಾರ. ಮೂಲಕಥೆ, ಪಾಂಡವ ವಂಶೋತ್ಪನ್ನವಾದ ಉದಯನ ಮಹಾರಾಜ ಹಾಗೂ ವಿದ್ಯಾಧರ ಚಕ್ರವರ್ತಿಯಾಗುವ ಅವನ ಮಗ ನರವಾಹನದತ್ತರ ಸಾಹಸಗಳನ್ನುಳ್ಳದ್ದಾಗಿದ್ದು, ವಿವಿಧ ಪಾತ್ರಗಳು ಇತರ ಉಪಕಥೆಗಳನ್ನು ಹೇಳುತ್ತವೆ. ಈ ಗ್ರಂಥದ ಮೂಲಕಥೆ ಹಾಗೂ ಇತರ ಕೆಲವು ಉಪಕಥೆಗಳನ್ನು ಕಿರಿಯರಿಗಾಗಿ ಸರಳಭಾಷೆಯಲ್ಲಿ ಇಲ್ಲಿ ಹೇಳಲಾಗಿದೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)