ಕನ್ನಡಕ್ಕೆ: ಮಂಜುನಾಥ ಚಾರ್ವಾಕ
Publisher:
Regular price
Rs. 175.00
Regular price
Rs. 175.00
Sale price
Rs. 175.00
Unit price
per
Shipping calculated at checkout.
Couldn't load pickup availability
ಜಪಾನ್ ಆರ್ಥಿಕವಾಗಿ ಬಂಡವಾಳಶಾಹಿಯಾಗಿ ಶರವೇಗದಲ್ಲಿ ಮುಂದುವರಿಯುತ್ತಾ ಹೋದಂತೆಲ್ಲ, ನಗರೀಕರಣವೂ ತೀವ್ರವಾಗಿ, ನಗರೀಕರಣದ ಬಳುವಳಗಳಾದ urban alienation, ರಾಜಕಾರಣದ ಕಡೆಗಿನ ನಿರಾಸಕ್ತಿ, ಧಾರ್ಮಿಕ ಆಧ್ಯಾತ್ಮದ ಅನುಪಸ್ಥಿತಿಯಲ್ಲಿ ತನ್ನ ಸಹ ಜೀವಿಗಳ ಜತೆ ಹೊಸ ಸಂಬಂಧಗಳ ಹುಡುಕಾಟದಲ್ಲಿ ನಿರತವಾಗಿರುವ ಪಾತ್ರಗಳು ಮುರಕಮಿ ಕತೆಗಳಲ್ಲಿ ಯಥೇಚ್ಛವಾಗಿ ಕಾಣಸಿಗುತ್ತವೆ. ಕೈಗಾರೀಕರಣಗೊಂಡ ನಂತರದ ಸಮಾಜವೊಂದರ ಎಲ್ಲಾ ಗುಣಲಕ್ಷಣಗಳು, ಸಾಮಾಜಿಕ ಬಿಕ್ಕಟ್ಟುಗಳು ಈ ಕತೆಗಳ ಜೀವಾಳ.
1990ರ ನಂತರದಲ್ಲಿ ಜರುಗಿದ ಬಾಬ್ರಿ ಮಸೀದಿ ಕೆಡವಿದ ಘಟನೆ, ಬಳಿಕ ಗ್ಯಾಟ್ ಒಪ್ಪಂದಕ್ಕೆ ಸಹಿ ಹಾಕಿ ಆರ್ಥಿಕ ಉದಾರೀಕರಣಕ್ಕೆ ತೆರೆದುಕೊಂಡ ನಂತರ ಜರುಗಿದ ವಿದ್ಯಮಾನಗಳು ಭಾರತವು ದೊಡ್ಡ ತಿರುವು ಕಾಣಲು ಕಾರಣವಾಯಿತು. ಆರ್ಥಿಕ ಉದಾರೀಕಣ ನೀತಿಯಿಂದ ಸೃಷ್ಟಿಯಾದ ಮೇಲ್ಮಧ್ಯಮ ವರ್ಗ, ನೆಲಮಟ್ಟದ ರಾಜಕೀಯದಿಂದ ಸಂಪೂರ್ಣ ವಿಮುಖವಾಗಿ, ತಮ್ಮದೇ ವೈಯಕ್ತಿಕ ಆಸಕ್ತಿಗಳಲ್ಲಿ ಕಳೆದುಹೋದವು. ಈ ವಿದ್ಯಮಾನಗಳನ್ನು 70-80ರ ದಶಕದ ಜಪಾನಿನಲ್ಲಿ ಉಂಟಾದ ಪಲ್ಲಟಗಳಿಗೆ ಒಂದು ಮಟ್ಟದಲ್ಲಿ ಸಮಾನಾಂತರವಾಗಿಯೂ ನೋಡಬಹುದು.
-ಮಂಜುನಾಥ ಚಾರ್ವಾಕ