1
/
of
1
Dr. N. M. Girijapati
ಕೇಶಿರಾಜನ ಶಬ್ದಮಣಿ ದರ್ಪಣ
ಕೇಶಿರಾಜನ ಶಬ್ದಮಣಿ ದರ್ಪಣ
Publisher - ಐಬಿಹೆಚ್ ಪ್ರಕಾಶನ
Regular price
Rs. 450.00
Regular price
Rs. 450.00
Sale price
Rs. 450.00
Unit price
/
per
Shipping calculated at checkout.
- Free Shipping Above ₹300
- Cash on Delivery (COD) Available
Pages - 448
Type - Paperback
Couldn't load pickup availability
ಅಧ್ಯಾಪನ ವೃತ್ತಿಯಲ್ಲಿರುವ ಡಾ. ಎನ್. ಎಂ. ಗಿರಿಜಾಪತಿ ಅಧ್ಯಯನಶೀಲರು, ಸಂಶೋಧಕರು, ಬರಹಗಾರರು, ನಿಗರ್ವಿ, ಪ್ರೀತಿ ಹಾಗೂ ಮಾನವೀಯ ಅಂತಃಕರಣಿ, ಶಾಸ್ತ್ರ ಸಾಹಿತ್ಯ, ಸೃಜನಶೀಲ, ಅನುವಾದ ಮತ್ತು ರಂಗಭೂಮಿಗೆ ಸಂಬಂಧಿಸಿದ ಸಾಹಿತ್ಯ ಕ್ಷೇತ್ರಗಳಲ್ಲಿ ಗಣನೀಯ ಕೃಷಿ ಮಾಡಿದ ಬಹುಮುಖ ಪ್ರತಿಭಾವಂತರು.
ಕೇಶಿರಾಜನ ಶಬ್ದಮಣಿದರ್ಪಣದ ಸಮಗ್ರ ಸಂಕಲನದ ಈ ಕೃತಿ ಹಲವು ವೈಶಿಷ್ಟ್ಯಗಳಿಂದ ಕೂಡಿದೆ. ಜಾಗತೀಕರಣದ ಇಂಗ್ಲಿಷ್ ಹೇರಿಕೆಯ ದುಷ್ಪರಿಣಾಮಗಳ ನಡುವೆ 'ಕನ್ನಡಂಗಳನ್ನು' ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶಬ್ದಮಣಿದರ್ಪಣದ ಮರು ಓದು ಮತ್ತು ಮರುಸಂಪಾದನೆ ಏಕೆ? ಎಂಬುದನ್ನು ಕೃತಿಯ ಆರಂಭದಲ್ಲಿ ಡಾ. ಗಿರಿಜಾಪತಿಯವರು ಸ್ಪಷ್ಟವಾಗಿ ಹೇಳಿದ್ದಾರೆ. ಸೂತ್ರಗಳನ್ನು ಸರಳವಾಗಿ ಓದಲು ಸಹಕಾರಿಯಾಗುವಂತೆ ಪದವಿಭಾಗ, ವಿವರಣೆ, ಪೂರಕವಾದ ವ್ಯಾಕರಣಾಂಶಗಳ ಚರ್ಚೆ, ಪ್ರಯೋಗಗಳು ಮತ್ತು ಅಗತ್ಯವಿರುವ ಕಡೆ ಭಾಷಾವಿಜ್ಞಾನದ ಪ್ರಸ್ತಾವಗಳು ಕೃತಿಯ ಮಹತ್ವವನ್ನು ಹೆಚ್ಚಿಸಿವೆ.
ಕ್ರಿ.ಶ 1898ರಿಂದಲೂ ಸಂಪಾದನೆಗೊಂಡು ಹಲವಾರು ಸಂಶೋಧಕರ, ಭಾಷೆ ಮತ್ತು ವ್ಯಾಕರಣ ತಜ್ಞರ ಹಾಗೂ ಭಾಷಾ ವಿಜ್ಞಾನಿಗಳ ಮೂಲಕ ಇಂದಿಗೂ ಮರು ಅಧ್ಯಯನ, ಮರುಶೋಧ ಮತ್ತು ಮರುಸಂಪಾದನೆಗೆ ಒಳಗಾಗುತ್ತಿರುವ ಕೇಶಿರಾಜನ ದರ್ಪಣ ಕನ್ನಡದ ಸಂದರ್ಭದಲ್ಲಿ ಭಾರತೀಯ ಭಾಷಾವಿಜ್ಞಾನದ ಮಾತೃ ಕೃತಿ. ಪದಗಳ ಹುಟ್ಟು, ವಿನ್ಯಾಸಗಳಿಂದ ಹಿಡಿದು ಅದರ ಆಡುನುಡಿ, ಗ್ರಾಂಥಿಕ ಸ್ವರೂಪಗಳವರೆಗೆ ವಿಸ್ತರಿಸಿಕೊಂಡ ವೈಯಾಕರಣಿಯ ಈ ಸಂರಚನೆ ಅವಸ್ಥಾಭೇದ ಮತ್ತು ಕಾಲಭೇದಗಳನ್ನು ದರ್ಶಿಸುವ ನೈಜ 'ಕನ್ನಡಂಗಳ ದರ್ಪಣ' ವಿಶ್ವವಿದ್ಯಾಲಯಗಳು ಶಾಸ್ತ್ರ ಸಾಹಿತ್ಯಕ್ಕೆ ವಿಮುಖವಾಗುತ್ತಿರುವ ಇಂದಿನ ದಿನಗಳಲ್ಲಿ ಡಾ. ಎನ್. ಎಂ. ಗಿಲಿಜಾಪತಿಯವರು ಸ್ವ ಇಚ್ಛೆಯಿಂದ ಅತ್ಯಂತ ಅಸ್ಥೆವಹಿಸಿ ಕೇಶಿರಾಜನತ್ತ ಕನ್ನಡಿಗರು ಹೊರಳಿ ನೋಡುವಂತೆ ಮಾಡಿರುವುದು ಹೆಮ್ಮೆಯ ಸಂಗತಿ.
ಕೃತಿಯ ಮರು ನಿರೂಪಣಾ ಕ್ರಮ ಮತ್ತದರ, ಒಟ್ಟಂದದ ವಿನ್ಯಾಸ ಇಂದಿನ ಓದುಗರಿಗೆ ತೊಡಕಾಗದಂತಿದೆ. ಈ ಕೃತಿಯು ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ, ಸಂಶೋಧಕರಿಗೆ, ವಿದ್ವಾಂಸರಿಗೆ ಆಕರಗ್ರಂಥವಾಗಿ ನೆರವಾಗುತ್ತದೆ. ಅದಕ್ಕಾಗಿ ಕನ್ನಡಿಗರ ಪರವಾಗಿ ಡಾ. ಎನ್. ಎಂ. ಗಿರಿಜಾಪತಿ ಇವರನ್ನು ಅಭಿನಂದಿಸುತ್ತೇನೆ.
ಡಾ. ಬಿ.ವಿ. ವಸಂತಕುಮಾ
ಅಧ್ಯಕ್ಷರು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಲಳೂರು

Share

Subscribe to our emails
Subscribe to our mailing list for insider news, product launches, and more.