Aparna H. S.
Publisher - ಕಾನ್‌ಕೇವ್ ಮೀಡಿಯಾ
- Free Shipping
- Cash on Delivery (COD) Available
Pages -
Type -
Couldn't load pickup availability
"ಕೆಂಪು" ಕತೆಯಲ್ಲಿ ಸ್ತ್ರೀ ವಿಶಿಷ್ಟ ಅನುಭವಲೋಕವನ್ನು ಮುಗ್ಧವಾಗಿ ಹುಡುಕಿಕೊಳ್ಳಲು ಯತ್ನಿಸಲಾಗಿದೆ. ಹದಿಹರೆಯದ ಹುಡುಗಿಯೊಬ್ಬಳ ಹೆಣ್ತನದ ಅರಿವು, ಆ ಘಟ್ಟದ ಆತಂಕ ಹಾಗೂ ಅವ್ಯಕ್ತ ಪುಳಕಗಳ ಲೋಕವೊಂದು ಅವಳ ಇನ್ನಿತರ ಗೆಳತಿಯರ ಅನುಭವಗಳೊಂದಿಗೆ ಬೆರೆತು ಸಾರ್ವತ್ರಿಕವಾಗುವ ರೀತಿಯಿಂದಾಗಿ ಕೂಡ ಈ ಕತೆ ಗಮನಾರ್ಹವಾಗಿದೆ.
ಕೇಶವ ಮಳಗಿ ಮತ್ತು ನಟರಾಜ್ ಹುಳಿಯಾರ್ ವಿಜಯವಾಣಿ ದೀಪಾಳಿ ವಿಶೇಷಾಂಕ - 2014ರ ತೀರ್ಪುಗಾರರ ಟಿಪ್ಪಣಿಯಿಂದ
"ಶುದ್ಧಿ" ಕತೆಯಲ್ಲಿ ಮಗನು ಮಾಡುವ ಭೌತಿಕ ಶುದ್ಧಿಗೂ, ತನ್ನ ಅಪ್ಪನು ಮಾಡುವ ಅಂತರಂಗದ ಮಲಿನ ಎಂದು ಭಾವಿಸುವ ಭೌತಿಕ ಶುದ್ಧಿಗೂ ಇರುವ ವೈರುಧ್ಯವನ್ನು ಕತೆಗಾರರು ಸಮರ್ಥವಾಗಿ ಗ್ರಹಿಸಿದ್ದಾರೆ ಇದು ತಲೆಮಾರುಗಳ ನಡುವಿನ, ವಿಚಾರಧಾರೆಗಳ ನಡುವಿನ ಘರ್ಷಣೆಯಾಗಿ ಮಾತ್ರ ಉಳಿಯದೆ ಓದುಗರನ್ನು ಇತರ ಅರ್ಥಗಳನ್ನು ಬಿಡಿಸಿಕೊಂಡು ನೋಡುವುದಕ್ಕೆ ಪ್ರೇರೇಪಿಸುತ್ತದೆ. ಗಟ್ಟಿ ನಿರೂಪಣಾ ತಂತ್ರದಿಂದ, ಸಂಕೀರ್ಣ ವಸ್ತುವನ್ನು ಸಮರ್ಥವಾಗಿ ನಿಭಾಯಿಸಿದೆ.
ಅಬ್ದುಲ್ ರಶೀದ್ ಮತ್ತು ಎಂ. ಎಸ್. ಶ್ರೀರಾಮ್ ವಿಜಯವಾಣಿ ದೀಪಾಳಿ ವಿಶೇಷಾಂಕ -2015ರ ತೀರ್ಪುಗಾರರ ಟಿಪ್ಪಣಿಯಿಂದ
"ಫೀನಿಕ್ಸ್" ತನ್ನ ಕಥನಶೈಲಿ ಮತ್ತು ವಸ್ತುವಿನಿಂದ ಗಮನ ಸೆಳೆಯಿತು. ಇಂದಿನ ಸಮಾಜದ ಪ್ರಮುಖ ಒಳಸುಳಿಯಾದ ಸಂಬಂಧಗಳ ನಡುವಣ ಪಲ್ಲಟವನ್ನು ಹೇಳುವ ಕಥೆ ಇದು. ಜೊತೆಗೆ ವ್ಯಕ್ತಿತ್ವಗಳಲ್ಲನ ತಾತ್ವಿಕ ವೈರುಧ್ಯ, ಅದರಿಂದಾಗಿಯೇ ವ್ಯಕ್ತಿತ್ವಗಳು ಬೆತ್ತಲಾಗುವ ಬಗೆಯನ್ನು ಇದು ಹೇಳುವುದರಿಂದ ಕಥೆಯ ಕಟ್ಟುವಿಕೆ ಇನ್ನಷ್ಟು ಗಾಢವಾಗುತ್ತದೆ.
ಪಿ ಚಂದ್ರಿಕಾ ಮತ್ತು ಪಿ ಶೇಷಾದ್ರಿ ವಿಜಯ ಕರ್ನಾಟಕ ಯುಗಾದಿ ವಿಶೇಷಾಂಕ – 2017ರ ಸಂಚಿಕೆಯಿಂದ
