Fakir Muhammed Kattadi
ಕಯ್ಯೂರಿನ ರೈತ ವೀರರು
ಕಯ್ಯೂರಿನ ರೈತ ವೀರರು
Publisher -
- Free Shipping Above ₹250
- Cash on Delivery (COD) Available
Pages -
Type -
ಬ್ರಿಟಿಷ್ ಆಳ್ವಿಕೆಯ ರಕ್ಷಾಕವಚ ತೊಟ್ಟುಕೊಂಡಿದ್ದ ಮೇಲ್ಜಾತಿ ಮಡಿವಂತರು ಮತ್ತು ರೈತರ ಶೋಷಣೆಯನ್ನೇ ತಮ್ಮ ಪೋಷಣೆಯ ಮಾರ್ಗವನ್ನಾಗಿಸಿಕೊಂಡಿದ್ದ ಕೆಲವರು ನಡೆಸುತ್ತಿದ್ದ ಅಮಾನುಷ ಸುಲಿಗೆ - ದಬ್ಬಾಳಿಕೆ - ಅಪಮಾನಗಳ ವಿರುದ್ಧ ಕಯ್ಯೂರಿನ ರೈತರು ಸಿಡಿದೆದ್ದಿದ್ದರು. ಅವರೊಂದು ಪ್ರತಿಭಟನಾ ಜಾಥಾ ನಡೆಸಿದರು. ಅದರ ಎದುರು ಬಂದ ಉದ್ಧಟ ಪೊಲೀಸ್ ಪೇದೆಯೊಬ್ಬ ಜನರ ರೊಚ್ಚನ್ನು ಕಂಡು ಹೆದರಿ ಅಥವಾ ತಮ್ಮ ಸ್ವಂತ ಅಪರಾಧಗಳಿಂದ ಮತಿಭ್ರಮಣೆ ಹೊಂದಿ ಜನರಿಂದ ತಪ್ಪಿಸಲು ಓಡಿ ಹತ್ತಿರದ ಹೊಳೆಗೆ ಹಾರಿದ. ಈಜಲರಿಯದೆ ಮುಳುಗಿ ಸತ್ತ ಈ ಘಟನೆಯನ್ನು ಅನುಸರಿಸಿ ನಡೆದ ದಬ್ಬಾಳಿಕೆ, ಬಂಧನಗಳು, ಕ್ರಿಮಿನಲ್ ಖಟ್ಲೆ, ದಂಡನೆ, ನಾಲ್ವರು ಯುವಕರಿಗೆ ಗಲ್ಲು ಶಿಕ್ಷೆ - ಇವೇ ಫಕೀರ್ ಮುಹಮ್ಮದ್ ಕಟ್ಟಾಡಿ ಅವರ 'ಕಯೂರಿನ ರೈತ ವೀರರು' ಕೃತಿಯ ವಸ್ತು. ಇದೊಂದು ಇತಿಹಾಸ ಗ್ರಂಥವೆಂದರೂ ಸರಿಯೆ. ಇದು ಅಂದು ಕೋಮು ಭೇದವಿಲ್ಲದೆ ನಮ್ಮ ಜನರು ಶೋಷಣೆ ದಬ್ಬಾಳಿಕೆಗಳಿಂದ ಬಿಡುಗಡೆ ಹೊಂದಿ ಹೊಸ ಸಮಾಜ ವ್ಯವಸ್ಥೆಯೊಂದನ್ನು ನಿರ್ಮಿಸಲು ನಡೆಸಿದ್ದ ಹೋರಾಟದ ಒಡಲೊಳಗಿಂದ ಮೂಡಿ ಬಂದಿರುವ ಜೀವಂತ ಶಿಲ್ಪದಂತಿರುವ ಸಾಹಿತ್ಯ ಕೃತಿಯಾಗಿದೆ.
Share
Subscribe to our emails
Subscribe to our mailing list for insider news, product launches, and more.