Skip to product information
1 of 1

Shalini Murthy

ಕಥೆಗಳ ತೋರಣ - 2

ಕಥೆಗಳ ತೋರಣ - 2

Publisher - ನವಕರ್ನಾಟಕ ಪ್ರಕಾಶನ

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಮಹಾತಾಯಿಯ ಅಂತಃಕರಣದ
ಪ್ರತಿಬಿಂಬ

ಕರ್ನಾಟಕದ ಕರಾವಳಿಯ ತಟ, ಉಡುಪಿ ಮೂಲದ ಸೇವಾ ನಿಲುವಿರುವ ಸೂಕ್ಷ್ಮ ಮನಸ್ಸಿನ ಲೇಖಕಿ ಮೂಲತಃ ಉದ್ಯಮಿ ಯಾಗಿರುವ ಅವರು ಏರ್ಕಾಡಿ ಸಿಸ್ಟಮ್ಸ್ ಎಂಬ ಸಂಸ್ಥೆಯ ಸ್ಥಾಪಕರ ಪೈಕಿ ಒಬ್ಬರು. ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯ ಎಲ್ಲ ಆಗುಹೋಗುಗಳನ್ನು ನೋಡಿಕೊಳ್ಳುವ ಎಲ್ಸಿಯ ಟ್ರಸ್ಟ್‌ ನಲ್ಲಿ ಪದಾಧಿಕಾರಿಯಾಗಿ ಹನ್ನೆರಡು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದಾರೆ. ಆ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ಸ್ ಸಿಟಿಗೆ ಹಸಿರು ಹೊದಿಸಿದ ತಂಡದ ಪ್ರಮುಖ ರೂವಾರಿ ಇವರು. ಅದೇ ಸಂದರ್ಭದಲ್ಲಿ ಸುತ್ತಮುತ್ತಲಿನ ಹದಿಮೂರು ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಕೂಡ ಇವರ ಪಾತ್ರ ಬಹಳ ದೊಡ್ಡದಿದೆ. ಎಳೆಯ ಮಕ್ಕಳು ಮತ್ತು ಅವರ ಅಭಿವೃದ್ಧಿಯ ಬಗ್ಗೆ ಅಪಾರ ಕಾಳಜಿಯಿರುವ ಶಾಲಿನಿ ಮೂರ್ತಿ ಅವರು ಈಗಾಗಲೇ 'ಅಜಾತಶತ್ರು' ಎಂಬ ಕೃತಿ ರಚಿಸಿದ್ದಾರೆ. ಅದು ಅವರ ಸಹೋದರ, ದಿವಂಗತ ಡಾ. ಯು ಚಿತ್ತರಂಜನ್‌ ಅವರ ಕುರಿತಾದ ಕೃತಿ

'ಕಥೆಗಳ ತೋರಣ' ಅವರ ಎರಡನೇ ಕೃತಿ ಕನ್ನಡದಲ್ಲಿ ಮಕ್ಕಳ ಸಾಹಿತ್ಯದಲ್ಲಿನ ಕೊರತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಇದು ಒಂದು ಮಹತ್ವದ ಕೃತಿ. ಅದಲ್ಲದೇ ಒಬ್ಬ ಮಹಾತಾಯಿಯ ಅಂತಃಕರಣದ ಪ್ರತಿರೂಪದಂತಿರುವ ಲೇಖಕಿ ಅವರ ಮುಂದಿನ ಸೃಜನಶೀಲ ಬದುಕನ್ನು ಮಕ್ಕಳ ಸಾಹಿತ್ಯಕ್ಕಾಗಿಯೇ ಮೀಸಲಿಡಲು ನಿರ್ಧರಿಸಿ ಇಟ್ಟ ಮೊದಲ ಪರಿಣಾಮಕಾರಿ ಹೆಜ್ಜೆಯೇ ಈ ಕೃತಿ.

ಮುಂದಿನ ದಿನಗಳಲ್ಲಿ ಶಾಲಿನಿ ಮೂರ್ತಿ ಅವರಿಂದ ಇಂತಹುದೇ ಅನೇಕ ಮಕ್ಕಳ ಸಾಹಿತ್ಯ ಗುಚ್ಛಗಳು ಒಡಮೂಡಲಿ. ಆ ಮೂಲಕ ಕನ್ನಡ ಮಕ್ಕಳ ಸಾಹಿತ್ಯ ಕ್ಷೇತ್ರ ಶ್ರೀಮಂತವಾಗಲಿ. ಲೇಖಲೆಗೆ ಮಕ್ಕಳು ಮತ್ತು ಮಕ್ಕಳ ಸಾಹಿತ್ಯದ ಕುರಿತು ಇರುವ ಅಪಾರವಾದ ಕಾಳಜಿ ಹೀಗೆಯೇ ಮುಂದುವರಿಯಲಿ.
-ಸತೀಶ್ ಚಪ್ಪರಿಕೆ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)