Skip to product information
1 of 1

Sahana Vijaykumar

ಕಶೀರ

ಕಶೀರ

Publisher - ಸಾಹಿತ್ಯ ಭಂಡಾರ

Regular price Rs. 420.00
Regular price Rs. 420.00 Sale price Rs. 420.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ತಮ್ಮ ಮೊದಲ ಕಾದಂಬರಿಯಲ್ಲಿ ರಮ್ಯ ಪ್ರೇಮದ ವಸ್ತುವನ್ನು ಕರ್ತವ್ಯದ ಮೌಲ್ಯದ ದೃಷ್ಟಿಯಿಂದ ವಿಶ್ಲೇಷಿಸಿ ಪ್ರಜ್ಞಾವಂತ ಓದುಗರ ಮನ್ನಣೆಯನ್ನು ಪಡೆದ ಸಹನಾ ಅವರು ಈ ಎರಡನೆಯ ಕಾದಂಬರಿಯಲ್ಲಿ ಮಹತ್ತರವಾದ ವಸ್ತುವನ್ನು ಕಂಡುಕೊಂಡು ಬಹುತೇಕ ಸಫಲರಾಗಿದ್ದಾರೆ. ಮಹತ್ತರವಾದ ಕಾದಂಬರಿ ಬರೆಯಲು, ಕಳೆದ ಎಪ್ಪತ್ತು ವರ್ಷಗಳಿಂದ ಕುದಿಯುತ್ತಿರುವ ಕಶ್ಮೀರದ ಸಮಸ್ಯೆಗಿಂತ ಬೇರೆ ವಸ್ತು ಯಾವುದಿದೆ? ಎರಡು ಸಂಸ್ಕೃತಿಗಳ ಘರ್ಷಣಿ, ಅದರ ಇತಿಹಾಸ, ಭಾರತದ ಎಲ್ಲ ದಿಕ್ಕುಗಳಿಂದಲೂ ವಿದ್ವಾಂಸರನ್ನು, ಮುಮುಕ್ಷುಗಳನ್ನು ಆಕರ್ಷಿಸುತ್ತಿದ್ದ ಸರ್ವಜ್ಞಪೀಠದ ನಾಶ, ತಮ್ಮತಮ್ಮ ಭಾಗಗಳಲ್ಲಿ ಕ್ಷುದ್ರ ಓಟಿಗಾಗಿ ಕಶ್ಮೀರದ ಉಗ್ರರಿಗೆ ಡೊಗ್ಗು ಸಲಾಮು ಹಾಕುತ್ತಿರುವ ಮಹಾನ್ ದೇಶದ ಮಹಾನ್ ಪ್ರಜಾಪ್ರಭುತ್ವದ ರಾಜಕಾರಣ, ಸೈನಿಕರ ಎರಡೂ ಕೈಗಳನ್ನು ಹಿಂದುಗಡೆಗೆ ಸೆಳೆದು ಜೋಡಿಸಿ ಕಟ್ಟಿ ಉಗ್ರರನ್ನು ನಿಗ್ರಹಿಸು ಎಂದು ಹುಕುಂ ಮಾಡುವ ಉತ್ತರಕುಮಾರನ ಸರ್ಕಾರ, ಹೀಗೆ ಒಂದೊಂದು ಮುಖವೂ ಈ ಆಧುನಿಕ ಮಹಾಭಾರತದ ಅಂಗವೇ.

ಇಡೀ ರಾಷ್ಟ್ರದ, ಇಡೀ ಮಾನವ ಜನಾಂಗದ ಸಾಂಸ್ಕೃತಿಕ ಸಂಘರ್ಷವನ್ನು ಕಾಣಿಸುವ ವಸ್ತುವನ್ನು ಹಿಡಿಯುವುದು, ಅದಕ್ಕೆ ಬೇಕಾದ ಅಧ್ಯಯನ, ಧೈರ್ಯ, ಚಿಂತನೆ, ಅನ್ವೇಷಣೆಗಳಲ್ಲಿ ತೊಡಗುವುದು ದೊಡ್ಡ ಭವಿಷ್ಯದ ಭರವಸೆ. ಈ ಲೇಖಕಿಯು ಈ ಕಾದಂಬರಿಯ ಮೂಲಕ ಅಂಥ ಭರವಸೆಯನ್ನು ಕೊಟ್ಟಿದ್ದಾರೆ.

ಡಾ. ಎಸ್.ಎಲ್. ಭೈರಪ್ಪ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)