Shruthi B. S.
Publisher -
- Free Shipping
- Cash on Delivery (COD) Available
Couldn't load pickup availability
ಬದುಕಿನ ಅರ್ಥವನ್ನು ಹುಡುಕ್ತಾ ಇಡೀ ಬದುಕೇ ವ್ಯರ್ಥವಾಗಿ ಬದುಕ ಸಂಜೆಯಲ್ಲಿ ವಿಷಾದವನ್ನು ಹೊದ್ದು, ಪ್ರತೀಕ್ಷೆಯಲ್ಲಿರುವ ಅತೃಪ್ತ ಅತ್ಮಗಳನ್ನ ಎಷ್ಟೋ ಕಂಡಿದ್ದೇನೆ. ಪಾಪ ಅನಿಸಿದ್ದಿದೆ! ಅನುಭವಿಸಿ ಅಲಿಯುವಂಥದ್ದನ್ನ ಅವರವರ ಸೀಮಿತ ತರ್ಕ, ಕುತರ್ಕ, ವಿತರ್ಕಗಳಲ್ಲಿ ವಿಶ್ಲೇಷಿಸಿ ದಕ್ಕದ ಅರ್ಥ ಸಿಕ್ಕಿತು ಎನ್ನುವ ಭ್ರಮೆಯಲ್ಲಿ ಪೂರ್ತಾ ಬದುಕನ್ನ ಹಣವಾಗಿ ಕಳೆದಿರ್ತಾರೆ, ಸಾವೆಲ್ಲ ಬಂದೀತು? ಸತ್ತವರಿಗೆ ಮತ್ತೆಲ್ಲಿ ನಾವು?
ಶ್ರುತಿಯವರ ಪುಸ್ತಕ 'ಕರ್ತೃ' ಸಾವ ನೆರಳಲ್ಲಿ ಜೀವಂತ ವಿಜೃಂಭಿಸುವ ಬದುಕ ಬಣ್ಣಗಳ ದಾಖಲು, ಅಭಾವವಿಲ್ಲದಿದ್ದಲ್ಲ, ಕೇವಲ ಸಮೃದ್ಧಿಯಲ್ಲಿ, ತೃಪ್ತಿಯೂ ಇಲ್ಲ, ರುಚಿಯೂ ಇಲ್ಲ, ಸುಖವೂ ಇಲ್ಲ. ಅಮರತ್ವದಲ್ಲಿ ಬದುಕೇ ಇಲ್ಲ. ಬದುಕು ಸುಖವೂ ಅಲ್ಲ, ಲೋಲುಪತೆಯೂ ಅಲ್ಲ ಹಾಗೆಯೇ ವೈರಾಗ್ಯವೂ ಅಲ್ಲ. ಅದೊಂದು ಸಂಭ್ರಮ. ಸಂಭ್ರಮ ಯಾವತ್ತೂ ಒಂದು ವರ್ತಮಾನದ ಭಾವ. ಆ ಕಣದ್ದು. ಕಣಿಕ, ಹಾಗಾಗಿ ಸಂಭ್ರಮ. ನಿರಂತರವಾದರೆ ನರಕವಾದೀತೇನೋ?
ಶ್ರುತಿಯವರು, ತಮ್ಮ ಮೂರನೆಯ ಪುಸ್ತಕದಲ್ಲಿ ಮೊದಲೆರಡು ಪುಸ್ತಕಗಳ ಆತ್ಮಕಥನದ ಚೌಕಟ್ಟನ್ನು ಮೀಲ ಬದುಕ ಭಾವಗಳನ್ನ ಕದಕ ಹೊರಟಿದ್ದಾರೆ. ಬದುಕು ಅನಿಶ್ಚಿತ ಅನ್ನುವ ಭಾವಕ್ಕಿಂತ ಸಾವು ನಿಶ್ಚಿತ ಅನ್ನುವ ಭಾವ ಬದುಕ ರುಚಿಯನ್ನ ಮತ್ತೆ ಬದುಕುವ ಆಸ್ಥೆಯನ್ನ ಹೆಚ್ಚಿಸುತ್ತದೇನೋ?! ಈ ಪುಸ್ತಕ ನನ್ನಲ್ಲಿ ಇಷ್ಟು ಕೆದಕಿದೆ.
ಹಾರೈಕೆಯೊಂದಿಗೆ, · ಸೇತುರಾಮ್.
ಗೋಮಿನಿ ಪ್ರಕಾಶನ
