Dr. K. V. Ramakrishnegowda
ಕರ್ನಾಟಕ ಕಾವೇರಿ ಸಂಸ್ಕೃತಿ
ಕರ್ನಾಟಕ ಕಾವೇರಿ ಸಂಸ್ಕೃತಿ
Publisher -
- Free Shipping Above ₹250
- Cash on Delivery (COD) Available
Pages -
Type -
ಸಂಸ್ಕೃತಿ ಎನ್ನುವುದು ಸಾಮೂಹಿಕ ಸಮ್ಮತಿಯನ್ನು ಪಡೆದ ಜೀವನ ಪದ್ಧತಿಯಾಗಿದೆ. ಆದಿ ಮಾನವನಿಂದ ಹಿಡಿದು ಆಧುನಿಕ ನಾಗರಿಕನವರೆಗಿನ ಸಾಸ್ಕೃತಿಕ ಸ್ಥಿತ್ಯಂತರಕ್ಕೆ ನದಿಗಳು ಪ್ರಮುಖ ಕಾರಣವಾಗಿವೆ. ಸಂಸ್ಕೃತಿಯೊಂದರ ವಿಕಸನವನ್ನು ಜೀವನದಿಗೆ ಹೋಲಿಸಬಹುದು. ಹುಟ್ಟುವ ಎಡೆಯಲ್ಲಿ ನದಿಯೊಂದು ನಗಣ್ಯವಾಗಿ ಗೋಚರಿಸಿದರೂ ಮೂಲ ನೆಲೆಯಿಂದ ಮುಂದೆ ಸಾಗಿದಂತೆ ತನ್ನ ಒಡಲನ್ನು ವಿಸ್ತರಿಸಿಕೊಳ್ಳುತ್ತ, ಹೊಸ ಸೇರ್ಪಡೆಗಳನ್ನು ಲೀನಗೊಳಿಸಿ, ತನ್ನದಾಗಿಸಿಕೊಂಡು ಬೃಹತ್ತಾಗುವಂತೆ ಸಂಸ್ಕೃತಿಗಳು ನದಿ ತೀರದಲ್ಲಿ ವಿಕಸಿಸಿರುವುದನ್ನು ಲಕ್ಷಿಸಬಹುದು. ಜಗತ್ತಿನ ಪುರಾತನ ಸಂಸ್ಕೃತಿಗಳು ಕೃಷಿ ಪ್ರಧಾನವಾಗಿದ್ದುದರಿಂದ ನದಿ, ಮಳೆ ಮತ್ತು ಅಂತರ್ಜಲಗಳು ಅತ್ಯಂತ ಅವಶ್ಯಕವಾಗಿದ್ದವು. ನೀರು ಕೇವಲ ಪ್ರಾಕೃತಿಕ ಪದಾರ್ಥವೇ ಆಗಿರದೆ, ಜನರ ಧಾರ್ಮಿಕ ವಿಧಿಗಳಲ್ಲಿ ಪವಿತ್ರವಾಗಿ, ಹುಟ್ಟು-ಸಾವುಗಳ ಸೂತಕ ಶುದ್ದೀಕರಣಗೊಳಿಸುವ ಸಾಧನವಾಗಿ, ಸ್ವತಃ ದೇವತೆಯಾಗಿ, ಫಲವಂತಿಕೆಯನ್ನು ರೇಚನಗೊಳಿಸುವ ಪ್ರಚೋದಕವಾಗಿ, ರೋಗನಿರೋಧಕವಾಗಿ, ಮಾಂತ್ರಿಕ ಆಚರಣೆಯಲ್ಲಿ ಬಹುಮುಖ್ಯ ಶಕ್ತಿಯಾಗಿ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ನದಿ ತೀರಗಳ ಅಧ್ಯಯನವು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಡಾ. ಕೋ. ವೆಂ. ರಾಮಕೃಷ್ಣೇಗೌಡ ಅವರು ಬರೆದಿರುವ ಈ ಪುಸ್ತಕವನ್ನು ಕನ್ನಡ ಸಾಹಿತ್ಯ ಪರಿಷತ್ ಮುದ್ರಿಸಿದೆ.
Share
Subscribe to our emails
Subscribe to our mailing list for insider news, product launches, and more.