Skip to product information
1 of 1

Chandrashekara Kambara

ಕರಿಮಾಯಿ - ಕಾದಂಬರಿ

ಕರಿಮಾಯಿ - ಕಾದಂಬರಿ

Publisher - ಅಂಕಿತ ಪುಸ್ತಕ

Regular price Rs. 195.00
Regular price Rs. 195.00 Sale price Rs. 195.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 211

Type - Paperback

'ಕರಿಮಾಯಿ' ಕೇವಲ ತನ್ನ ಕಥನ ಸ್ವರೂಪದಲ್ಲಿ ಆಧುನಿಕ ಓದುಗರನ್ನು ಮೆಚ್ಚಿಸಬಯಸುವ ಕೃತಿಯಲ್ಲ. ಅದು ಅನೇಕ ಮುಖ್ಯ ಸಂಗತಿಗಳನ್ನು ತನ್ನ ಮೈಮೇಲೆ ಹಾಕಿಕೊಂಡಿರುವ ಮಹತ್ವಾಕಾಂಕ್ಷಿ ರಚನೆ. ಹೊಸ ಮೌಲ್ಯಗಳ ಪ್ರವೇಶದಿಂದ ಒಂದು ನಂಬಿಕೆಗಳ ಲೋಕ ಕಂಪಿಸುವ, ಸಮುದಾಯ ಪ್ರಜ್ಞೆ ಆಘಾತಕ್ಕೆ ಒಳಗಾಗುವ, ಹೊಸದೊಂದು ಆರ್ಥಿಕ ಸಾಮಾಜಿಕ ಜೀವನ ಕ್ರಮದ ಮುನ್ಸೂಚನೆ ಕಾಣಿಸುವ ಚಿತ್ರಗಳನ್ನು ಅದು ದಟ್ಟವಾಗಿ ಆದರೆ ತನಗೇ ಅನನ್ಯವೆನ್ನಿಸುವ ಕಾಮಿಕ್ ಧಾಟಿಯಲ್ಲಿ ಕಟ್ಟಿಕೊಡುತ್ತದೆ. 'ಕರಿಮಾಯಿ'ಯ ಮಿಥ್ ಒಡೆಯುವುದಕ್ಕೂ, ಶಿವಾಪುರದ ಜನರ ಸಮುದಾಯ ಪ್ರಜ್ಞೆ ಅಳ್ಳಕಗೊಳ್ಳುವುದಕ್ಕೂ ಸಂಬಂಧ ಇದ್ದೇ ಇದೆ. ಹೊಸ ಮೌಲ್ಯಗಳು ಕೇವಲ ಗ್ರಾಮಪಂಚಾಯಿತಿ ಮೂಲಕ ಬರುವುದಿಲ್ಲ. ಅವು ಬೆಳಗಾವಿ ಸೃಷ್ಟಿಸುವ ಹೊಸ ಕನಸುಗಳ ರೂಪದಲ್ಲಿಯೂ ಬರುತ್ತವೆ. ಗುಡಸೀಕರ ಶಿವಾಪುರಕ್ಕೆ ತರುವ ವಿದೇಶೀ ಬ್ರಾಂದಿ, ಸಿಗರೇಟು ಮುಂತಾದ ಅನೇಕ ಭೌತಿಕ ವಸ್ತುಗಳ ರೂಪದಲ್ಲಿ ಕಾಣಿಸಿಕೊಳ್ಳುವಂತೆ, ಪೊಲೀಸ್ ಸ್ಟೇಷನ್, ಕೋರ್ಟ್ ಮುಂತಾದ ವಸಾಹತುಶಾಹಿ ಸಂಸ್ಥೆಗಳ ರೂಪದಲ್ಲಿಯೂ ವ್ಯಕ್ತವಾಗುತ್ತವೆ. ಒಂದು ಕಡೆ ಬ್ರಿಟಿಷ್ ಸರಕಾರ; ಇನ್ನೊಂದು ಕಡೆ ಗಾಂಧಿ ನೇತೃತ್ವದ ಸ್ವಾತಂತ್ರ್ಯ ಚಳುವಳಿ. ಒಂದು ಪರಂಪರಾಗತ ಜಮೀನ್ದಾರಿ ವ್ಯವಸ್ಥೆಗೆ ಒಗ್ಗಿಹೋದ ಜನಪದಕ್ಕೆ ಈ ಎರಡೂ ಹೊಸವು; ಅನ್ಯ ಸ್ವಾರಸ್ಯದ ಸಂಗತಿ ಎಂದರೆ ಹಳೆಯ ವ್ಯವಸ್ಥೆಯ ಪ್ರತಿನಿಧಿಯಾದ ಗೌಡ, ಹೊಸ ವ್ಯವಸ್ಥೆಯ ಪ್ರತಿನಿಧಿಯಾದ ಗುಡಸೀಕರ ಇಬ್ಬರೂ ಗಾಂಧಿಯನ್ನು ನೆನಸುತ್ತಾರೆ! ಕಾದಂಬರಿಯು ವಸಾಹತುಶಾಹಿ ಕೌರ್ಯವನ್ನೂ, ಸ್ವರಾಜ್ಯದ ಹಂಬಲಿಕೆಯನ್ನೂ ಸೂಕ್ಷ್ಮವಾಗಿ ಧ್ವನಿಸುತ್ತದೆ.

ಹಳೆಯ ವ್ಯವಸ್ಥೆ ಅದೆಷ್ಟೇ ಸುಂದರವಾಗಿ ತೋರುತ್ತಿರಲಿ, ಹೊಸ ವ್ಯವಸ್ಥೆ ಎಷ್ಟೇ ಭಯಾನಕವಾಗಿ ಕಾಣಿಸುತ್ತಿರಲಿ ಅಥವಾ ಅದರ ಬಗ್ಗೆ ವಿರೋಧವಿರಲಿ, ಚಲನೆ ಅನಿವಾರವೆಂಬ ಸತ್ಯವನ್ನು ಒಂದು ನಿರ್ಣಾಯಕ ಐತಿಹಾಸಿಕ ಸಂದರ್ಭದ ಹಿನ್ನೆಲೆಯಲ್ಲಿ ಕಾದಂಬರಿ ಧ್ವನಿಸುತ್ತದೆ.

- ಟಿ.ಪಿ. ಅಶೋಕ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)