ಟಿ. ಎಸ್. ಗೋಪಾಲ್
Publisher: ನವಕರ್ನಾಟಕ ಪ್ರಕಾಶನ
Couldn't load pickup availability
ಶ್ರೀ. ಟಿ. ಎಸ್. ಗೋಪಾಲ್ ಕಲಿಕೆಯ ದಿನಗಳಿಂದಲೂ ಕನ್ನಡ ಭಾಷೆ-ಸಾಹಿತ್ಯಗಳ ನೈಷ್ಠಿಕ ವಿದ್ಯಾರ್ಥಿ. ಮೊದಲಿನಿಂದಲೂ ಸಾಹಿತ್ಯ, ಶಾಸ್ತ್ರಗಳಲ್ಲಿ ಅವರಿಗೆ ಅಪಾರವಾದ ಆಸಕ್ತಿ. ಅದರ ಫಲವೇ ನವಕರ್ನಾಟಕ ಕನ್ನಡ ಕಲಿಕೆ ಮಾಲಿಕೆಗಾಗಿ ಅವರು ಬರೆದಿರುವ ಹಲವಾರು ಹೊತ್ತಗೆಗಳು. ಭಾಷಾ ಕೇಂದ್ರಿತವಾದ ಈ ಕಿರುಪುಸ್ತಿಕೆಗಳು ನಾಡಿನಾದ್ಯಂತ ಜನಪ್ರಿಯವಾಗಿವೆ. ಹಳಗನ್ನಡ ಕಲಿಕೆ, ಪ್ರಬಂಧ ರಚನೆ, ಗಾದೆಗಳ ವಿಸ್ತರಣೆ, ಪದಸಂಪತ್ತು, ಕವಿಪರಿಚಯ, ಕವಿಸೂಕ್ತಿಗಳು ಹೀಗೆ ಕನ್ನಡ ನುಡಿಯ ನಾನಾ ಪದರಗಳನ್ನು ಇವು ಬಿಚ್ಚಿಟ್ಟಿವೆ. ಸರಳವಾದ ಭಾಷೆ, ನಿಸ್ಸಂದಿಗ್ಧ ನಿರೂಪಣೆ, ಸಂಗ್ರಹಶೀಲ ಅಭಿವ್ಯಕ್ತಿಗಳಿಂದ ವಿದ್ಯಾರ್ಥಿಗಳಿಗೂ ಅಧ್ಯಾಪಕರಿಗೂ ಇವು ಭಾಷಾದರ್ಶಿಕೆಗಳಾಗಿವೆ. ಸರ್ವಾದರಣೀಯವೂ ಸಂಗ್ರಹಯೋಗ್ಯವೂ ಆದ ಸರಣಿ ಸಂಪುಟಗಳು, ಕ್ಷೀಣಿಸುತ್ತಿರುವ ಶಾಸ್ತ್ರಾಸಕ್ತಿಯನ್ನು ವರ್ಧಿಸಲು ಸಹಕಾರಿ. ಏಕಕಾಲಕ್ಕೆ ಕೈಪಿಡಿಯಂತೆಯೂ ಕೋಶದಂತೆಯೂ ರೂಪು ಗೊಂಡಿರುವ ಈ ಒಂದೊಂದು ಪುಸ್ತಕವೂ ಬೊಗಸೆಯೊಳಗಿನ ನುಡಿಗಡಲು.
