Dr. D. N. Shankara Batt
Publisher - ಡಿ. ಎನ್. ಶಂಕರ ಬಟ್
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಕನ್ನಡ ವ್ಯಾಕರಣ (ಸೊಲ್ಲರಿಮೆ) ಎಂಬುದು ಯಾವ ಕೆಲಸಕ್ಕೂ ಬಾರದ ಕಗ್ಗಂಟಲ್ಲ; ಕನ್ನಡದಲ್ಲಿ ಓದಲು-ಬರೆಯಲು ಕಲಿಯುವುದು, ಇಂಗ್ಲಿಶ್ನಂತಹ ಬೇರೆ ನುಡಿಗಳನ್ನು ಕಲಿಯುವುದು, ಕನ್ನಡದಿಂದ ಬೇರೊಂದು ನುಡಿಗೆ ಇಲ್ಲವೇ ಬೇರೊಂದು ನುಡಿಯಿಂದ ಕನ್ನಡಕ್ಕೆ ನುಡಿಮಾರುವುದು (ಅನುವಾದಿಸುವುದು) ಮೊದಲಾದ ನುಡಿಗೆ ಸಂಬಂಧಿಸಿದಂತಹ ಹಲವಾರು ಕೆಲಸಗಳನ್ನು ನಡೆಸುವಲ್ಲಿ ಅದು ನೆರವನ್ನು ಕೊಡಬಲ್ಲುದು ಎಂಬುದನ್ನು ಈ ಪುಸ್ತಕದಲ್ಲಿ ತೋರಿಸಿಕೊಡಲಾಗಿದೆ.
ಆದರೆ ಈ ರೀತಿ ನೆರವನ್ನು ಪಡೆಯಬೇಕಿದ್ದಲ್ಲಿ, ನಿಜವಾದ ಕನ್ನಡ ವ್ಯಾಕರಣ ಎಂತಹುದು ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಇವತ್ತು ಬಳಕೆಯಲ್ಲಿರುವ ಕನ್ನಡ ವ್ಯಾಕರಣಗಳು ನಿಜವಾದ ಕನ್ನಡ ವ್ಯಾಕರಣಗಳಲ್ಲ; ಹಾಗಾಗಿ, ಅವು ಮೇಲಿನ ಕೆಲಸಗಳನ್ನು ನಡೆಸುವಲ್ಲಿ ಯಾವ ನೆರವನ್ನೂ ಕೊಡುವುದಿಲ್ಲ.
ಕನ್ನಡದ ನಿಜವಾದ ವ್ಯಾಕರಣ ಎಂತಹುದು ಎಂಬುದನ್ನು ತಿಳಿಯುವುದರೊಂದಿಗೆ, ಕನ್ನಡಕ್ಕೆ ಸಂಬಂಧಿಸಿದಂತಹ ಒಂದೊಂದು ಕೆಲಸಕ್ಕೂ ಆ ತಿಳಿವನ್ನು ಬಳಸಿಕೊಳ್ಳುವ ಬಗೆ ಹೇಗೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ, ಮತ್ತು ಅಂತಹ ತಿಳಿವನ್ನು ಕೊಡಬಲ್ಲ ಹಲವಾರು ಬಳಕೆಯ ವ್ಯಾಕರಣಗಳನ್ನೂ ಬರೆಯಬೇಕಾಗುತ್ತದೆ. ಇವತ್ತು ಕನ್ನಡದಲ್ಲಿ ಈ ಎರಡು ಬಗೆಯ ಕೆಲಸಗಳನ್ನೂ ನಡೆಸಬೇಕಾಗುತ್ತದೆ.
