Dr. D. N. Shankara Batt
Publisher - ಡಿ. ಎನ್. ಶಂಕರ ಬಟ್
- Free Shipping
- Cash on Delivery (COD) Available
Couldn't load pickup availability
1978ರಲ್ಲಿ ಮೊದಲಿಗೆ ಪ್ರಕಟವಾಗಿದ್ದ ಕನ್ನಡ ವಾಕ್ಯಗಳು: ಆಂತರಿಕ ರಚನೆ ಮತ್ತು ಅರ್ಥವ್ಯವಸ್ಥೆ ಎಂಬ ಪುಸ್ತಕವನ್ನು ಕೆಲವು ಮಾರ್ಪಾಡುಗಳೊಂದಿಗೆ ಇದೀಗ ಕನ್ನಡ ವಾಕ್ಯಗಳ ಒಳರಚನೆ ಮತ್ತು ಅರ್ಥವ್ಯವಸ್ಥೆ ಎಂಬ ಹೆಸರಿನಲ್ಲಿ ಮರುಮುದ್ರಿಸಲಾಗುತ್ತಿದೆ. ಇದರಲ್ಲಿ ಮುಖ್ಯವಾಗಿ ಕನ್ನಡ ವಾಕ್ಯಗಳನ್ನು ಅರ್ಥಮಾಡಿಕೊಳ್ಳುವ ಬಗೆ ಹೇಗೆ ಎಂಬುದನ್ನು ವಿವರಿಸುವ ಉದ್ದೇಶದಿಂದ ಆ ವಾಕ್ಯಗಳ ಹಿಂದಿರುವ ವ್ಯಾಕರಣ ನಿಯಮಗಳನ್ನು ಪರಿಶೀಲಿಸಲಾಗಿದೆ.
ಸುಮಾರು ಒಂದು ಸಾವಿರ ವರ್ಷಗಳಿಂದಲೂ ಬಳಕೆಯಲ್ಲಿರುವ ಕನ್ನಡ ವ್ಯಾಕರಣಗಳೆಲ್ಲ ಮುಖ್ಯವಾಗಿ ಸಂಸ್ಕೃತದ ವ್ಯಾಕರಣ ನಿಯಮಗಳನ್ನು ಕನ್ನಡಕ್ಕೆ ಅಳವಡಿಸಿಕೊಳ್ಳುವ ಪ್ರಯತ್ನಗಳಾಗಿದೆ. ಆದರೆ, ಇಂಡೋ-ಯುರೋಪಿಯನ್ ಎಂಬ ನುಡಿಕುಟುಂಬಕ್ಕೆ ಸೇರಿದ ಸಂಸ್ಕೃತ ನುಡಿಯ ವ್ಯಾಕರಣಕ್ಕೂ ದ್ರವಿಡಿಯನ್ ಎಂಬ ಅದಕ್ಕಿಂತ ಬೇರಾಗಿರುವ ನುಡಿಕುಟುಂಬಕ್ಕೆ ಸೇರಿದ ಕನ್ನಡ ನುಡಿಯ ವ್ಯಾಕರಣಕ್ಕೂ ನಡುವೆ ಅಜಗಜಾಂತರವಿದೆ. ಹಾಗಾಗಿ, ಹಿಂದಿನ ಪ್ರಯತ್ನಗಳೆಲ್ಲ ಕನ್ನಡದ್ದೇ ಆದ ವ್ಯಾಕರಣ ನಿಯಮಗಳನ್ನು ವಿವರಿಸುವಲ್ಲಿ ಸೋತುಹೋಗಿವೆ.
ಕನ್ನಡದ್ದೇ ಆದ ವ್ಯಾಕರಣ ನಿಯಮಗಳನ್ನು ವಿವರಿಸುವ ಮೊದಲ ಪ್ರಯತ್ನ ಈ ಪುಸ್ತಕವಾಗಿದೆ.
