Skip to product information
1 of 1

Many Authors

ಕನ್ನಡ ಕನ್ನಡಿಗ ಕರ್ನಾಟಕ

ಕನ್ನಡ ಕನ್ನಡಿಗ ಕರ್ನಾಟಕ

Publisher - ಸಪ್ನ ಬುಕ್ ಹೌಸ್

Regular price Rs. 325.00
Regular price Rs. 325.00 Sale price Rs. 325.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

'ಕನ್ನಡ-ಕನ್ನಡಿಗ-ಕರ್ನಾಟಕ'-ಒಂದು ವಿಶಿಷ್ಟ ಕೃತಿ

'ಕನ್ನಡ-ಕನ್ನಡಿಗ-ಕರ್ನಾಟಕ' ಒಂದು ವಿಶಿಷ್ಟವಾದ ಕೃತಿ, ಗೋಕಾ ಚಳವಳಿಯ ಹೋರಾಟದ ಪರಿಣಾಮದಲ್ಲಿ ಒಂದು ಉಪಉತ್ಪನ್ನದಂತೆ ರಚಿತ ವಾಗಿರುವ ಈ ಕೃತಿ ಏಕವ್ಯಕ್ತಿ ಕೃತವಲ್ಲ; ಸಮಷ್ಟಿ ಚಿಂತನೆಯ ಫಲ. ಹೋರಾಟ ದೊಳಗಿನ ಸಾಮುದಾಯಿಕ ಆಶಯದ್ರವ್ಯವನ್ನು ಕನ್ನಡ ಬದುಕಿನ ಅನಂತ ಆಯಾಮ ಗಳಿಗೆ ವಿಸ್ತರಿಸಿಕೊಂಡಂತೆ ಕನ್ನಡ-ಕನ್ನಡಿಗ-ಕರ್ನಾಟಕವನ್ನು ಕುರಿತು ಧ್ಯಾನಿಸುತ್ತಿರುವ ಬರಹವಿದು. ಈ ಬರಹಕ್ಕೆ ನಿಲುಗಡೆ ಎಂಬುದಿಲ್ಲ. ಕಾರಣ `ಕನ್ನಡ-ಕನ್ನಡಿಗ ಕರ್ನಾಟಕದ ಬದುಕಿಗೆ ನಿಲುಗಡೆ ಎಂಬುದಿಲ್ಲ. ನಿಲುಗಡೆಯನ್ನು ಉಂಟುಮಾಡುವ ಹೊರಗಿನ ಆಕ್ರಮಣಗಳ ಬಗ್ಗೆ ಒಳಗಿನ ಅರಿವು ಸದಾ ಜಾಗೃತವೂ ಕ್ರಿಯಾಶೀಲವೂ ಆಗಿರಬೇಕೆಂದು ಎಚ್ಚರಿಸುವ ನುಡಿ ಧಾತುಗಳಿವು; ಹಾಗೂ ಈ ವಿವೇಕವನ್ನು ಕನ್ನಡ ಮನಸ್ಸುಗಳಲ್ಲಿ ಬಿತ್ತುವ ಸಂಕಲ್ಪದ ಬೆಳಕಿನ ಬೀಜಗಳಿವು. ಇಲ್ಲಿ ಇತಿಹಾಸದ ಮೆಲುಕು ಇದೆ, ಗತವೈಭವದ ಹಳಹಳಿಕೆಯಲ್ಲಿ ನರಳುವುದಕ್ಕಲ್ಲ; ವರ್ತಮಾನದ ವಸ್ತುಸ್ಥಿತಿ ಯನ್ನು ಪರಿಭಾವಿಸುವುದಕ್ಕೆ ಮತ್ತು ಆಗಬೇಕಾಗಿರುವ ಕಾರ್ಯಬಾಹುಳ್ಯದ ಹೊಣೆ ಗಾರಿಕೆಯನ್ನು ಮನವರಿಕೆ ಮಾಡುವುದಕ್ಕೆ ಹೀಗಾಗಿ ಇಲ್ಲಿ ಮಾಹಿತಿಗಳು ಮಾತನಾಡುತ್ತವೆ. ಅಂಕಿ ಸಂಖ್ಯೆಗಳು ತಿಳಿಯಹೇಳುತ್ತವೆ. ಪರಿಣಾಮದಲ್ಲಿ ಕನ್ನಡದ ಮನಸ್ಸುಗಳನ್ನು ಆತ್ಮಾವಲೋಕನಕ್ಕೆ ಒಳಗುಮಾಡುತ್ತವೆ. ಕನ್ನಡ-ಕನ್ನಡಿಗ-ಕರ್ನಾಟಕ ಬದುಕಿನ ಒಂದು ಸಮಗ್ರ ಸ್ವರೂಪ ದರ್ಶನವನ್ನು ಮಾಡಿಸುವ ಈ ಕೃತಿ ಸಕಾಲಿಕವಾದುದು.

ಅಖಂಡ ಕರ್ನಾಟಕದ ಬದುಕನ್ನು ಕಲ್ಯಾಣದತ್ತ ಮುನ್ನಡೆಸಬೇಕೆಂಬ ಒಳ ತುಡಿತ ಇಡೀ ಬರಹದ ಜೀವದ್ರವ್ಯವಾಗಿದೆ. ಆಧುನಿಕ ಕರ್ನಾಟಕವನ್ನು ಕಟ್ಟಿ ಬೆಳೆಸುವ ಸಂಕಲ್ಪಬದ್ಧ ಮನಸ್ಸುಗಳಿಗೆ ಇದೊಂದು ಉತ್ತಮ ಮಾರ್ಗಸೂಚಿ ಗ್ರಂಥ ಕರ್ನಾಟಕವನ್ನು ತಿಳಿಯಬೇಕೆನ್ನುವವರಿಗೂ ಇದು ಇನ್ನೂ ಹೆಚ್ಚು ವಿವರವಾಗಿ ತಿಳಿದುಕೊಳ್ಳಬೇಕೆಂಬ ಒತ್ತಾಸೆ ಹುಟ್ಟಿಸುವ ಕೈಪಿಡಿ, ತೀರ ಇತ್ತೀಚಿನ ಅಂಕಿ ಸಂಖ್ಯೆಗಳ ಸೇರ್ಪಡೆಗಳೊಂದಿಗೆ ಪುಸ್ತಕವನ್ನು ಪರಿಷ್ಕರಿಸಿರುವುದರಿಂದ ಹೆಚ್ಚು ಪ್ರಸ್ತುತ.

ಪ್ರೊ| ಎಸ್.ಜಿ. ಸಿದ್ಧರಾಮಯ್ಯ

ನಿಕಟಪೂರ್ವ ಅಧ್ಯಕ್ಷರು

ಕನ್ನಡ ಪುಸ್ತಕ ಪ್ರಾಧಿಕಾರ

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)