B. K. Tirumalamma
ಕಂದಾ ಅಕ್ಷರ ಕಲಿ
ಕಂದಾ ಅಕ್ಷರ ಕಲಿ
Publisher - ನವಕರ್ನಾಟಕ ಪ್ರಕಾಶನ
- Free Shipping Above ₹250
- Cash on Delivery (COD) Available
Pages -
Type -
'ಕಂದಾ ಅಕ್ಷರ ಕಲಿ' ಶೀರ್ಷಿಕೆಯೇ ಸೂಚಿಸುವಂತೆ ಅಕ್ಷರ ಕಲಿಯುವ ವಯೋಮಾನದ ಮಕ್ಕಳಿಗೆ ಅಕ್ಷರ ಕಲಿಯಲು, ಕಲಿಸಲು ಸಹಾಯಕವಾಗುವ ಪುಸ್ತಕ, ಮಕ್ಕಳ ಪ್ರಾರಂಭಿಕ ಕನ್ನಡ ಭಾಷೆಯ ಕಲಿಕೆಯ ದೃಷ್ಟಿಯಿಂದ ಇದನ್ನು ರಚಿಸಲಾಗಿದೆ. ಪಾಠಗಳು ಮಕ್ಕಳನ್ನು ಕುರಿತೇ ಬರೆದಿರುವಂತಿದ್ದರೂ, ಶಿಕ್ಷಕರು, ತಂದೆ-ತಾಯಿಗಳು, ಪೋಷಕರು ಇಲ್ಲಿರುವ ಸಲಹೆಗಳನ್ನು ಅನುಸರಿಸಿ ಮಕ್ಕಳ ಕಲಿಕೆಗೆ ಸಹಾಯಕರಾಗಬೇಕೆಂಬುದು ಇದರ ಮುಖ್ಯ ಉದ್ದೇಶ,
ಇದರ ಲೇಖಕಿಯಾದ ಶ್ರೀಮತಿ ಬಿ. ಕೆ. ತಿರುಮಲಮ್ಮ, ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡಬೇಕೆಂಬುದನ್ನು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಪ್ರತಿಪಾದಿಸಿದವರು. ಮಲ್ಲೇಶ್ವರಂ ಶಿಶುವಿಹಾರ ಶಾಲೆಯ ಸಂಸ್ಥಾಪಕಿಯಾದ ಇವರು ಮಕ್ಕಳ ಎಳೆಯ ಪ್ರಾಯಕ್ಕೆ ಕಲಿಕೆ ಭಾರವಾಗಿರಬಾರದು ಎಂಬುದನ್ನು ಮನಗಂಡು, ಅಕ್ಷರಾಭ್ಯಾಸ ವಿಧಾನ, ಕಾಗುಣಿತ ಕಲಿಸುವ ವಿಧಾನ, ಓದುವ ವಿಧಾನ ಕುರಿತು ಹಲವು ಪುಸ್ತಕಗಳನ್ನು ರಚಿಸಿ, ಆ ವಿಧಾನಗಳನ್ನು ತಮ್ಮ ಶಾಲೆಯಲ್ಲೇ ಪ್ರಯೋಗಕ್ಕೆ ತಂದು ಸಫಲರಾದವರು.
ನವಕರ್ನಾಟಕ ಪ್ರಕಟಿಸಿರುವ 'ನಮ್ಮ ಮನೆ', 'ಕ೦ದಾ ಓದುವೆಯಾ ಭಾಗ – 1 ಮತ್ತು – 2' ಎಂಬ ಇವರ ಕೃತಿಗಳು ಅತ್ಯಂತ ಜನಪ್ರಿಯವಾಗಿವೆ. 'ಸವಿಗನ್ನಡ' ಎಂದರೆ ಹೇಗಿರುತ್ತದೆ ಎಂಬುದನ್ನು ಮೇಲಿನ ಪುಸ್ತಕ ಓದಿಯೇ ತಿಳಿಯಬೇಕು.
ಮಕ್ಕಳ ಪುಸ್ತಕ
-ಪ್ರಕಾಶಕರು - ನವಕರ್ನಾಟಕ ಪ್ರಕಾಶನ
Share
Subscribe to our emails
Subscribe to our mailing list for insider news, product launches, and more.