Skip to product information
1 of 1

Tirthanatha Kartakoti

ಕಂಬಾರರ ಕಾವ್ಯ ಮತ್ತು ನಾಟಕ

ಕಂಬಾರರ ಕಾವ್ಯ ಮತ್ತು ನಾಟಕ

Publisher - ಅಂಕಿತ ಪುಸ್ತಕ

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಕಂಬಾರರು ಜಾನಪದ ಹಾಡುಗಳ ನಿಯಮಗಳನ್ನು ತಪ್ಪದಂತೆ ಪಾಲಿಸುವ ರಹಸ್ಯ ಇಲ್ಲಿದೆ ಎಂದು ತೋರುತ್ತದೆ. ಹಿಂದಿನ ಕಾಲದಲ್ಲಿ ಕಾವ್ಯ ನಿಯಮಬದ್ಧವಾಗಿತ್ತು. ಅದಕ್ಕೆ ಕಾರಣವೆಂದರೆ ಬಹಳ ಆಳವಾದ ಕಾರಣ ಕಾವ್ಯ ಈ ವಿದ್ಯಮಾನಗಳನ್ನು ಪ್ರತಿನಿಧಿಸುವುದರ ಜೊತೆಗೆ ಕಲೆಯ ಅಥವಾ ಜಗತ್ತಿನ ಕವಿಯ ಕಾವ್ಯಸೃಷ್ಟಿಯ ವಿದ್ಯಮಾನಗಳನ್ನು ಪ್ರತಿಬಿಂಬಿಸುತ್ತಿತ್ತು. ಕಾವ್ಯ ರಚನೆಯ ಸಂಘರ್ಷವೇನೆಂಬುದನ್ನು ಕವಿಯೇ ಬಲ್ಲ. ಅವನು ಭಾಷೆಯ ಜೊತೆಗೆ ನಡೆಸುವ ಸಂಘರ್ಷ ಇದಾಗಿದೆ. ಕಂಬಾರರು ಜಾನಪದ ಕಾವ್ಯದ ನಿಯಮಗಳನ್ನು ಅದೇ ಕಾರಣಕ್ಕಾಗಿ ಅನುಸರಿಸುತ್ತಾರೆ. ಅವರ ಕಾವ್ಯವೆಂದರೆ ಜಗತ್ತಿನ ಕನ್ನಡಿಯೂ ಹೌದು. ಅದರ ಜೊತೆಗೆ ಕಾವ್ಯ ರಚನೆಯ ಕನ್ನಡಿಯೂ ಹೌದು. ಈ ಎರಡೂ ಪ್ರತಿಬಿಂಬಗಳೂ ಸೇರಿಕೊಂಡು ಒಂದು ಹೊಸದಾದ ಬಿಂಬ ಅದರಲ್ಲಿ ಕಾಣುತ್ತದೆ.

ಕಂಬಾರರ ನಾಟಕದ ಹಾಡುಗಳು ಅವರ ಕಾವ್ಯದ ಒಂದು ಮಹತ್ವದ ಭಾಗ, ಆದರೆ ಇನ್ನೂ ವಿಚಾರ ಮಾಡಿದರೆ ಕಂಬಾರರ ಕಾವ್ಯ ಮತ್ತು ಕಂಬಾರರ ನಾಟಕ ಇವುಗಳ ಮೂಲ ಒಂದೇ ಆಗಿದೆ.

ಯಾವುದೇ ಕಲಾಕೃತಿ ಒಂದೇ ಎರಕದಿಂದ ಮಾಡಿದ ಅಚ್ಚಿನ ಗೊಂಬೆಯಲ್ಲ. ಮುಖ್ಯವಾಗಿ ಕಲಾವಿದನಿಗೆ ತಾನು ಮಾಡುತ್ತಿರುವದೇನು ಎಂಬುದರ ಬಗ್ಗೆ ಸಂಪೂರ್ಣ ಎಚ್ಚರವಿದ್ದರೆ ಸಾಕು. ಇಂಥ ಎಚ್ಚರ ಕಂಬಾರರಲ್ಲಿದೆ. ಅವರು ಉಪಯೋಗಿಸಿರುವ ಜಾನಪದ ರೂಪಕದ ಅಂಶಗಳು, ಅವರ ಭಾಷೆ, ಪ್ರತಿಮೆಗಳು ಜೀವಂತವಾಗಿರುವದೇ ಈ ಎಚ್ಚರಕ್ಕೆ ಸಾಕ್ಷಿಯಾಗಿದೆ.

-ಕೀರ್ತಿನಾಥ ಕುರ್ತಕೋಟಿ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)