Skip to product information
1 of 2

Malayalam : Kamaladas, Kannada : K. K. Gangadharan

ಕಮಲಾದಾಸ್ ಕಥೆಗಳು

ಕಮಲಾದಾಸ್ ಕಥೆಗಳು

Publisher - ಅಂಕಿತ ಪುಸ್ತಕ

Regular price Rs. 250.00
Regular price Rs. 250.00 Sale price Rs. 250.00
Sale Sold out
Shipping calculated at checkout.

- Free Shipping above ₹1,000

- Cash on Delivery (COD) Available

Pages - 240

Type - Paperback

ಭಾಷೆಯಲ್ಲಿ ಅಪೂರ್ವವಾಗಿ ಸಂಭವಿಸುವ ಕೆಲವು ವಿಸ್ಮಯಗಳಿವೆ. ಅಂತಹದೊಂದು ವಿಸ್ಮಯವೇ ಮಾಧವಿಕುಟ್ಟಿ ಎಂಬ ಕಮಲಾದಾಸ್ ಸುರೈಯಾ.

ಪುಟ್ಟ ಪುಟ್ಟ ಮಾತುಗಳಿಂದ, ಅನನ್ಯವಾದ ರೂಪಕಗಳಿಂದ ಅನಾದೃಶವಾದ ಭಾವನಾ ಲೋಕದಿಂದ ಮಲಯಾಳಂ ಭಾಷೆಯನ್ನು ಅವರು ನವೀಕರಿಸಿದರು. ಭಾಷೆಗೂ ಮೀರಿದ ಭಾವನಾ ಪ್ರಪಂಚ ಪ್ರೀತಿ. ಅದು ಬದುಕಿನ ಪ್ರಾಣವಾಯು. ಮಲಯಾಳಂ ಭಾಷೆ, ಈ ತನಕ ಅನುಭವಿಸದ, ಅನುಭವಿಸಲಾಗದ ವಸ್ತು, ಶೈಲಿಯಲ್ಲಿ ಮಿಂದೆದ್ದಿದೆ. ಅದಕ್ಕೆ ಮೂಲ ಕಾರಣ ಕಮಲಾದಾಸ್ ಎನ್ನಬಹುದೇನೋ.

ಸುಳಿಗಾಳಿಯಾಗಿ, ಬಿರುಗಾಳಿಯಾಗಿ, ತಿಳಿಗಾಳಿಯಾಗಿ, ತಂಗಾಳಿಯಾಗಿ ಅದು ಓದುಗರ ಮನಸ್ಸಿನಲ್ಲಿ ಸುಳಿದಾಡುತಿರುತ್ತದೆ. ಮಲಯಾಳಂ ಓದುಗರ ಮನಸ್ಸಿನಿಂದ ಎಂದೂ ಮಾಸದ ಹೆಸರು ಮಾಧವಿಕುಟ್ಟಿ ಎಂಬ ಕಮಲಾದಾಸ್, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಬರೆಯಬಲ್ಲ ಲೇಖಕಿ ಅವರು.

ಮಲಯಾಳಂ - ಕನ್ನಡ ಅನುವಾದಕರಾದ ಕೆ.ಕೆ. ಗಂಗಾಧರನ್, ಕಮಲಾದಾಸ್ ಅವರ 205 ಕತೆಗಳನ್ನು ಅನುವಾದಿಸಿ ದಾಖಲೆ ಸೃಷ್ಟಿಸಿದ್ದಾರೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)