Dr. G. Purushottama
ಕಲಿಕೆಯ ತೊಂದರೆಗಳು
ಕಲಿಕೆಯ ತೊಂದರೆಗಳು
Publisher - ನವಕರ್ನಾಟಕ ಪ್ರಕಾಶನ
Regular price
Rs. 120.00
Regular price
Rs. 120.00
Sale price
Rs. 120.00
Unit price
/
per
- Free Shipping Above ₹250
- Cash on Delivery (COD) Available
Pages - 136
Type - Paperback
ಮಗು ಬಹಳ ಚೂಟಿಯಾಗಿದ್ದರೆ ತಂದೆ ತಾಯಿಗಳಲ್ಲದೆ ಇತರರೂ ಸಂತೋಷಪಡುತ್ತಾರೆ. ಆದರೆ ಮಗು ಆ ಪ್ರಾಯದ ಇತರ ಮಕ್ಕಳಷ್ಟು ಚುರುಕಿಲ್ಲದಿರುವುದು, ಕಲಿಯುವುದರಲ್ಲಿ ಹಿಂದೆ ಬೀಳುವುದು, ಮಾತಾಡಲು ಹಿಂಜರಿಯುವುದು ಅಥವಾ ತೊದಲುವುದು ಗಮನಕ್ಕೆ ಬಂದಾಗ, ಮಗುವಿನ ತರಲೆ ಮಿತಿ ಮೀರಿದಾಗ ಹೆತ್ತವರು ಆತಂಕಗೊಳ್ಳುತ್ತಾರೆ. ಮಗುವನ್ನು ಬೆದರಿಸಿ ಸರಿದಾರಿಗೆ ತರಲು ಪ್ರಯತ್ನಿಸುತ್ತಾರೆ. ಜೊತೆಯ ಮಕ್ಕಳನ್ನು, ಶಿಕ್ಷಕರನ್ನು ದೂರಿದರೂ ಆಶ್ಚರ್ಯವಿಲ್ಲ. ಇದು ಮಗುವಿನ ಕಲಿಕೆಯ ತೊಂದರೆಯ ಲಕ್ಷಣ ಎಂಬುದು ಮನದಟ್ಟಾದಾಗ ಹೆತ್ತವರ ಆತಂಕ ಹೆಚ್ಚುತ್ತದೆ.
ಕಲಿಕೆಯ ತೊಂದರೆಗೆ ಮಗು ಬೆಳೆಯುತ್ತಿರುವ ಪರಿಸರದಂಥ ಬಾಹ್ಯ ಕಾರಣದ ಜೊತೆಗೆ, ತಮಗರಿಯದಂತೆ ಹೆತ್ತವರೂ ಕಾರಣವಾಗಿರ ಬಹುದು; ಮಗುವಿನ ದೃಷ್ಟಿದೋಷ, ಶ್ರವಣದೋಷ, ನರಗಳ ದೋಷವೂ ಕಾರಣವಾಗಿರಬಹುದು.
ಈ ತೊಂದರೆಯನ್ನು ಗುರುತಿಸುವುದು ಹೇಗೆ? ಇದರ ಪರಿಹಾರ ಹೇಗೆ? ಮಕ್ಕಳ ಕಲಿಕೆಯ ತೊಂದರೆಯನ್ನು ಗುರುತಿಸುವ ನಿಟ್ಟಿನಲ್ಲಿ ಹೆತ್ತವರಿಗೂ, ಶಿಕ್ಷಕರಿಗೂ ಉಪಯುಕ್ತವಾಗುವ ಈ ಕೃತಿಯನ್ನು ವಾಕ್ ಶ್ರವಣ ತಜ್ಞರಾದ ಡಾ॥ ಜಿ. ಪುರುಷೋತ್ತಮ ಅವರು ರಚಿಸಿದ್ದಾರೆ. ಇವರು ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿ ಸಂಶೋಧಕರಾಗಿ, ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿ ಅಧ್ಯಾಪಕ, ರೀಡರ್, ಮತ್ತು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ವಿಸ್ಟರ್ ಹಿಯರಿಂಗ್ ಏಡ್ಸ್‌ನ ಸಂಸ್ಥಾಪಕ ನಿರ್ದೇಶಕರಾಗಿದ್ದಾರೆ. ಇವರು ರಚಿಸಿರುವ 'ಶಾಲೆಯಲ್ಲಿ ಹಿಂದುಳಿಯುವಿಕೆ', 'ಆಲಿಕೆ. ಸಮಸ್ಯೆ - ಪರಿಹಾರ', 'ಮಾತಿನ ಮಾತು', "ಕಿವುಡು ಮಗು ಮಾತಾಡಬಲ್ಲದು', 'ಉಗ್ಗು', 'ಕಿವಿಮೊರೆತ, ತಲೆಸುತ್ತು' ಕೃತಿಗಳು.

Share
Subscribe to our emails
Subscribe to our mailing list for insider news, product launches, and more.